ಮಂಗಳೂರು: ಪ್ರಾಣಿ ಪ್ರೇಮಿ ರಜನಿ ಶೆಟ್ಟಿ ಮತ್ತು ಅವರ ಪತಿ ಬೀದಿ ಪ್ರಾಣಿಗಳಿಗೆ (Mangaluru woman feeds stray dogs) ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ತಮ್ಮ ಮಂಗಳೂರಿನ ಮನೆಯಲ್ಲಿ ಆಹಾರ, ಆಶ್ರಯ ಮತ್ತು ಚಿಕಿತ್ಸೆ ನೀಡುತ್ತಾರೆ.


COMMERCIAL BREAK
SCROLL TO CONTINUE READING

"ನಾವು ಪ್ರತಿದಿನ 800 ಬೀದಿ ನಾಯಿಗಳಿಗೆ ಆಹಾರ ನೀಡುತ್ತೇವೆ ಮತ್ತು ನಮ್ಮ ಮನೆಯಲ್ಲಿ ಹತ್ತಾರು ನಾಯಿಗಳು, ಬೆಕ್ಕುಗಳು, ಮೊಲಗಳು, ಪಕ್ಷಿಗಳನ್ನು ನೋಡಿಕೊಳ್ಳುತ್ತೇವೆ. ಗಾಯಗೊಂಡ ಪ್ರಾಣಿಗಳಿಗೆ ನಾವು ಚಿಕಿತ್ಸೆ ನೀಡುತ್ತೇವೆ" ಎಂದು ರಜನಿ ಶೆಟ್ಟಿ ಹೇಳಿದರು.


15 ವರ್ಷಗಳ ಹಿಂದೆ ಬೀದಿ ನಾಯಿಗಳಿಗೆ ಆಹಾರ (woman feeds stray dogs)ನೀಡುವುದರೊಂದಿಗೆ ರಜನಿ ಅವರ ಪ್ರಾಣಿಗಳೊಂದಿಗಿನ ನಂಟು ಪ್ರಾರಂಭವಾಯಿತು. ಪ್ರಸ್ತುತ, ಅವರು ಸಾರ್ವಜನಿಕ ಬೆಂಬಲದೊಂದಿಗೆ 800 ನಾಯಿಗಳಿಗೆ ಆಶ್ರಯದಾತೆಯಾಗಿದ್ದಾರೆ.


[[{"fid":"225370","view_mode":"default","fields":{"format":"default","field_file_image_alt_text[und][0][value]":"Mangaluru woman feeds 800 stray dogs daily","field_file_image_title_text[und][0][value]":"ಬೀದಿ ನಾಯಿಗಳ ಪಾಲಿನ ಅನ್ನದಾತೆ"},"type":"media","field_deltas":{"1":{"format":"default","field_file_image_alt_text[und][0][value]":"Mangaluru woman feeds 800 stray dogs daily","field_file_image_title_text[und][0][value]":"ಬೀದಿ ನಾಯಿಗಳ ಪಾಲಿನ ಅನ್ನದಾತೆ"}},"link_text":false,"attributes":{"alt":"Mangaluru woman feeds 800 stray dogs daily","title":"ಬೀದಿ ನಾಯಿಗಳ ಪಾಲಿನ ಅನ್ನದಾತೆ","class":"media-element file-default","data-delta":"1"}}]]


"ನಾನು ಅಸಹಾಯಕ ಪ್ರಾಣಿಗಳನ್ನು ಚಿಕಿತ್ಸೆಗಾಗಿ ನನ್ನ ಮನೆಗೆ ಕರೆತರುತ್ತೇನೆ. ನಾವು ಪ್ರತಿದಿನ ರಾತ್ರಿ 8 ಗಂಟೆಯ ನಂತರ ನಾಯಿಗಳಿಗೆ ಆಹಾರ ನೀಡಲು ಹೋಗುತ್ತೇವೆ. ಇದರಿಂದ ಅವುಗಳಿಗೆ ವಾಹನಗಳಿಂದ ಯಾವುದೇ ತೊಂದರೆಯಾಗುವುದಿಲ್ಲ. ನನ್ನ ಪತಿ, ಕುಟುಂಬ ಮತ್ತು ಸಾರ್ವಜನಿಕರು ನನಗೆ ಬೆಂಬಲ ನೀಡುತ್ತಾರೆ" ಎಂದು ರಜನಿ ಹೇಳಿದರು.


ಗಾಯಗೊಂಡ ಮತ್ತು ಮಾಲಿಕರಿಲ್ಲದ ನಾಯಿಗಳನ್ನು ಸಹ ರಕ್ಷಿಸುತ್ತಾರೆ. "ನಾನು 800 ನಾಯಿಗಳಿಗೆ ಪ್ರತಿದಿನ 60 ಕೆಜಿ ಕೋಳಿ ಮಾಂಸ, ಅನ್ನವನ್ನು ತಯಾರಿಸುತ್ತೇನೆ" ಎಂದು ರಜನಿ ಶೆಟ್ಟಿ ಹೇಳಿದರು. 


ರಜನಿ ಅವರ ಈ ಪುಣ್ಯದ ಕೆಲಸಕ್ಕೆ ಅನೇಕರು ಸಹಾಯ ಮಾಡುತ್ತಿದ್ದಾರೆ. ಅಲ್ಲದೆ ಅವರ ಸಮಾಜಮುಖಿ ಕೆಲಸಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 


ಇದನ್ನೂ ಓದಿ: ಸರಿಗಮಪ ವೇದಿಕೆಯಲ್ಲಿ ಅನಿಲ್ ಕುಂಬ್ಳೆ, ವಿಶೇಷ ಬಯಕೆ ವ್ಯಕ್ತಪಡಿಸಿದ ಕಿಚ್ಚ ಸುದೀಪ್.!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.