Kuvempu:ಮಂತ್ರ ಮಾಂಗಲ್ಯ ಎಂಬುದು ಕುವೆಂಪು ಅವರ ಪರಿಕಲ್ಪನೆಯ ಒಂದು ಸರಳ ವಿವಾಹ ಪದ್ಧತಿಯಾಗಿದೆ. ಜಾತಿ, ಧರ್ಮ, ಭಾಷೆ ಎಲ್ಲವನ್ನೂ ಮೀರಿದ ವಿಶ್ವಮಾನವ ವಿವಾಹ ಪದ್ಧತಿ ಎಂದರು ತಪ್ಪಾಗಲಾರದು. ವರದಕ್ಷಿಣೆ, ಗೊಡ್ಡು ಸಂಪ್ರದಾಯಗಳು, ಅರ್ಥವಿಲ್ಲದ ಆಚರಣೆಗಳು, ಮತ್ತು ಆಡಂಬರವನ್ನು ಒಳಗೊಂಡ ಮದುವೆಗಳಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಮನಗಂಡ ಕುವೆಂಪುರವರು 1960ರ ದಶಕದಲ್ಲಿ ಮಾಡಿದ ಸಾಮಾಜಿಕ ಕ್ರಾಂತಿಯೇ ಮಂತ್ರ ಮಾಂಗಲ್ಯ ಮದುವೆ.


COMMERCIAL BREAK
SCROLL TO CONTINUE READING

ಏನಿದು  ಮಂತ್ರ ಮಾಂಗಲ್ಯ ...


ಸರಳ ವಿವಾಹ ಪದ್ಧತಿಯ ಮೂಲಕ ಸಾಮಾಜಿಕ ಬದಲಾವಣೆ ತರಲು ಹೇಗೆ ಸಾಧ್ಯ ಎಂಬುದನ್ನು ಕುವೆಂಪುರವರ ಕೆಳಗಿನ ಈ ಒಂದು ಮಾತಿನಿಂದಲೇ ಅರ್ಥೈಸಿಕೊಳ್ಳಬಹುದು.
 ಲೋಕವನ್ನಗಲಿ ಸಮಾಜವನ್ನು ಆಗಲಿ ಪುರೋಹಿತಶಾಹಿಯನ್ನಾಗಲಿ ಬದಲಾಯಿಸಲು ಪ್ರಯತ್ನಿಸುವ ಅಗತ್ಯ ಖಂಡಿತ ಇಲ್ಲ.ಮನಸ್ಸುಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ.


ನಿಮ್ಮಲ್ಲಿ ಪ್ರಾಮಾಣಿಕತೆ ಏನಾದರೂ ಇದ್ದರೆ ಸಾಕು  ಹೇಳುವ ಸಣ್ಣ ಸುಧಾರಣೆ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ   ಮದುವೆಯನ್ನು ವರದಕ್ಷಿಣೆ ತೆಗೆದುಕೊಳ್ಳದೆ ಶಾಸ್ತ್ರ ಚಾರ ಗಳಿಗೆ ಕಟ್ಟು ಬಿಡದೆ , ಅಂತಸ್ತಿನ ಪ್ರದರ್ಶನ ಮಾಡಲು ದುಂದು ಮಾಡದೆ ಸರಳವಾಗಿ ಮದುವೆ ಮಾಡಿಕೊಳ್ಳುವುದು . ಇದ್ಯಾವ ಮಹಾಕ್ರಾಂತಿ ಎಂದು ತಿಳಿಯಬಹುದು.  ಜೀವನದಲ್ಲಿ ಒಮ್ಮೆಯಾದರೂ  ನಂಬಿದ ಆದರ್ಶಗಳ ಮೌಲ್ಯಗಳ ಪರವಾಗಿ ನಿಂತು ಗೊಡ್ಡು ಸಂಪ್ರದಾಯಗಳನ್ನು ಎದುರಿಸಿ ನಾವು ನಂಬಿದ ಆದರ್ಶಗಳ ಪರವಾಗಿ ನಿಲ್ಲುವ ಅದ್ಭುತ ಅನುಭವ ಆನಂದ. ಆದರ್ಶಗಳು  ದಿನ ಪಠಣ ಮಾಡಬೇಕಾದ ಗುಡ್ಡು ಮಂತ್ರಗಳನ್ನು ಹಾಗೂ ನಮ್ಮ ಜೀವನದ ಉಸಿರು“. ಇದೇ ಮಂತ್ರ ಮಾಂಗಲ್ಯ ಮದುವೆಯಾಗಿದೆ.


ಇದನ್ನೂ ಓದಿ:ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರು: ಬಿ.ಎಸ್.ಯಡಿಯೂರಪ್ಪ


ಕುವೆಂಪು ರವರ ಪ್ರಕಾರ ಆತ್ಮಸಾಕ್ಷಿಗಿಂತ ಮಿಗಿಲಾದ ದೇವರು ಇಲ್ಲ ಎಂಬುವುದನ್ನು ಒತ್ತಿ ಸಾರಿದ್ದಾರೆ. ಇದಕ್ಕೆ ಉದಾಹರಣೆಯಾಗಿ   ಅನೇಕ ಮಂದಿ  ಕುವೆಂಪುರವರ ಆಶಯದಂತೆ ಮಂತ್ರ ಮಾಂಗಲ್ಯ ರೀತಿಯಲ್ಲಿ  ವಿವಾಹಗಳನ್ನು ಕಾಣಬಹುದು . ಇದೇ ಸಾಲಿನಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಬಾರಿ ಸದ್ದು ಮಾಡುತ್ತಿರುವ ಕೋಲಾರದ ಚೈತ್ರ.ಕೆ ಮತ್ತು ಬಳ್ಳಾರಿಯ ಶ್ರೀನಿವಾಸ್.ಬಿ  ವಿವಾಹವು ಸಾಕ್ಷಿಯಾಗಿದೆ. 


ಮಂತ್ರ ಮಾಂಗಲ್ಯದ ಆಶಯ 
 -ಈ ರೀತಿ ಮದುವೆಯಾಗುವುದರ ಮೂಲಕ  ಎಲ್ಲಾ ಮಾನಸಿಕ ಮತ್ತು ಆಧ್ಯಾತ್ಮಿಕ ಸಂಕೋಲೆ ಮತ್ತು ದಾಸ್ಯಗಳಿಂದ ವಿಮುಕ್ತರಾಗಿ ಸ್ವತಂತ್ರರಾಗುತ್ತಿದ್ದೀರಿ.
 -ಭೂಮಂಡಲದ ಯಾವುದೇ ಜಾತಿ ಮತ್ತು ಜನಾಂಗಗಳಿಗಿಂತ ಮೇಲಾದವರಲ್ಲ.
  -ಯಾವುದೇ ಜಾತಿ ಮತ್ತು ಜನಾಂಗಗಳಿಗಿಂತ ಕೀಳಾದವರೂ ಅಲ್ಲ.
  -ಎಲ್ಲ ಆಚಾರ ಸಂಪ್ರದಾಯಗಳಿಂದ ಮುಕ್ತರನ್ನಾಗಿ ಮಾಡಿದ್ದೇವೆ.
  -ಯಾವುದೇ ಮನೆದೇವರು ಅಥವಾ ಕುಲದೇವರುಗಳ ಅಡಿಯಾಳಾಗಿ ಬದುಕಬೇಕಾಗಿಲ್ಲ. 
-ಮನುಷ್ಯ ಸಮಾಜದ ಮಾನವೀಯ ಮೌಲ್ಯಗಳೇ ಮನುಷ್ಯನ ಮೊದಲನೆಯ ಹಾಗೂ ಕೊನೆಯ ದೇವರು.
 -ಹೆಂಡತಿಯಾಗಲೀ, ಗಂಡನಾಗಲೀ ಪರಸ್ಪರ ಅಧೀನರೂ ಅಲ್ಲ 


-ಹೆಂಡತಿಯೂ ಗಂಡನಷ್ಟೇ ಸ್ವತಂತ್ರಳೂ ಸಮಾನತೆಯುಳ್ಳವಳೂ ಆಗಿರುತ್ತಾಳೆ.
 -ಹೆಂಡಿರನ್ನು ಒಟ್ಟಿಗೆ ಬದುಕುವಂತೆ ಮಾಡುವ ಸಾಧನ ಪ್ರೀತಿಯೊಂದೇ.


-ಒಬ್ಬರನ್ನೊಬ್ಬರು ಪ್ರೀತಿಸದವರು ತಾಳಿ ಕಟ್ಟಿಕೊಂಡರೂ ವ್ಯರ್ಥ, ಅಗ್ನಿಯನ್ನು ಸುತ್ತಿದರೂ ವ್ಯರ್ಥ,
-ಯಾವ ಯಾವ ಶಾಸ್ತ್ರಾಚಾರದ ಪ್ರಕಾರ ಮದುವೆಯಾದರೂ ವ್ಯರ್ಥ


ಇದನ್ನೂ ಓದಿ:Basavaraj Bommai : 'ಅಪ್ಪು ಸಮಾಧಿಯನ್ನ ಅದ್ಬುತ ಸ್ಮಾರಕ : ರೇಸ್ ಕೋರ್ಸ್‌ ರಸ್ತೆಗೆ ಅಂಬಿ ಹೆಸರು'https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.