ಚಾಮರಾಜನಗರ: ಗುಂಡಿ ಬಿದ್ದ ರಸ್ತೆಯಲ್ಲಿ ಸಂಚರಿಸಿದರೇ ಸೊಂಟ, ಬೆನ್ನು ನೋವು ಬರುವುದು ಸಾಮಾನ್ಯ. ಆದರೆ, ಕೀಲು ನೋವು, ಮಂಡಿ ನೋವಿಗೆ ರಸ್ತೆಯಲ್ಲೇ ಅದೂ ರಾಷ್ಟೀಯ ಹೆದ್ದಾರಿ ಮದ್ಯೆದಲ್ಲೇ ಮದ್ದಿದೆ ಅಂದರೆ ನೀವು ನಂಬಲೇ ಬೇಕು.


COMMERCIAL BREAK
SCROLL TO CONTINUE READING

ಹೌದು.., ಯಳಂದೂರಿನಿಂದ ಮಾಂಬಳ್ಳಿಗೆ ತೆರಳುವಾಗ ರಾಷ್ಟೀಯ ಹೆದ್ದಾರಿ ಮಧ್ಯದಲ್ಲೇ " ನರಿಕಲ್ಲು" ಎಂಬ ಮಾರಮ್ಮವೊಂದು ಹಲವು ದಶಕಗಳಿಂದ ಇದ್ದು ಮಂಡಿನೊವು, ಕೀಲುನೋವಿನಿಂದ ಬಳಲುವರು ಒಂದು ನಮಸ್ಕಾರ ಹಾಕಿದರೇ ಸಾಕು ಎಲ್ಲಾ ನೋವು ಗಾಯಬ್ ಆಗುತ್ತದೆಯಂತೆ. ಇನ್ನೊಂದು ವಿಚಾರ ಅಂದ್ರೆ ಇದು ರಸ್ತೆಯ ನಟ್ಟನಡುವೆಯೇ ಇದ್ದು ಭಾರೀ ವಾಹನಗಳ ಸಂಚಾರದ ನಡುವೆ  ನಮಸ್ಕರಿಸಿ ಇಲ್ಲಿನ ಜನರು ಭಕ್ತಿ ಪರಾಕಷ್ಟೆ ಮೆರೆಯುತ್ತಾರೆ. 


ಇದನ್ನೂ ಓದಿ- ಆನೆಗೆ ಗಾಯ! ರಾಹುಲ್ ಗಾಂಧಿ ಪತ್ರಕ್ಕೆ ಸ್ಪಂದಿಸಲಾಗುವುದು: ಸಿಎಂ ಬೊಮ್ಮಾಯಿ


ಈಗ್ಗೆ 50-60 ವರ್ಷಗಳಿಂದಲೂ ಈ ರಸ್ತೆ ಮದ್ಯೆ ಕಲ್ಲು ಒಂದಿದ್ದು ಕೀಲು ನೋವು, ಮಂಡಿ ನೋವಿನಿಂದ ಬಳಲುವವರು ಇಲ್ಲಿಗೆ ಬಂದು ನಮಸ್ಕರಿಸಿ ಪೂಜೆ ಸಲ್ಲಿಸುತ್ತಾರೆ. ವಾಹನ ಸವಾರರು, ಕೂಲಿ ಕೆಲಸಕ್ಕೆ ತೆರಳುವ ಕಾರ್ಮಿಕರು ರಸ್ತೆಯಲ್ಲಿ ಹಾದು ಹೋಗುವಾಗ  ಇದಕ್ಕೆ ನಮಿಸಿ‌ ಹೋಗುವುದು ನಿತ್ಯ ಕಾಣಬಹುದಾದ ಸಾಮಾನ್ಯ ದೃಶ್ಯವಾಗಿದೆ.


ತಾನು ಮದುವೆಯಾಗಿ ಬಂದಾಗಿನಿಂದ  ಈ ನರಿಕಲ್ಲು ನೋಡುತ್ತಿದ್ದು ಮಂಡಿ ನೋವು, ಕೈ-ಕಾಲು ಸೆಳೆತ ಇದ್ದರೇ ಇಲ್ಲಿ ಬಂದು ಪೂಜೆ ಮಾಡುತ್ತೇವೆ, ಒಳ್ಳೆಯದಾಗುತ್ತದೆ ಎಂದು ಸ್ಥಳೀಯರಾದ ಸುಶೀಲಾ, ಜಯಮ್ಮ ಹೇಳುತ್ತಾರೆ.


ಇದನ್ನೂ ಓದಿ- ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ ಮೆಟ್ರೋ ಮಾರ್ಗ ಕಂಪ್ಲೀಟ್, ಟ್ರಯಲ್ ರನ್ ಗೆ ಮುಹೂರ್ತ ಫಿಕ್ಸ್ .!


ರಾಷ್ಟ್ರೀಯ ಹೆದ್ದಾರಿಯಲ್ಲೇ ಮಾರಮ್ಮನ ಕಲ್ಲು ಜನರ ಮಂಡಿ ನೋವು, ಕೀಲು ನೋವಿಗೆ ಪರಿಹಾರ ಇರುವುದು ಅಚ್ಚರಿಯೇ ಆಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.