ಬೆಂಗಳೂರು: ಮೂಲಸೌಲಭ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಸಚಿವ ಆನಂದ್ ಸಿಂಗ್ ಬೇಡಿಕೆಯನ್ನು ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಕೊನೆಗೂ ಈಡೇರಿಸಿದ್ದಾರೆ.


COMMERCIAL BREAK
SCROLL TO CONTINUE READING

ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿವಾದದ ನಡುವೆಯೂ ವಿಜಯನಗರವನ್ನು ಇಂದು ಅಧಿಕೃತವಾಗಿ ಜಿಲ್ಲೆಯಾಗಿ ಘೋಷಣೆ ಮಾಡಿದರು. ಇದರೊಂದಿಗೆ ಅಧಿಕೃತವಾಗಿ ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಉದಯವಾಯ್ತು. ಬಳ್ಳಾರಿ ರೆಡ್ಡಿ ಬ್ರದರ್ಸ್ ವಿರೋಧದ ನಡುವೆಯೂ ಸಿಎಂ ಬಿಎಸ್‌ವೈ, ಆನಂದ್ ಸಿಂಗ್(Anand Singh) ಅವರ ವಿಜಯನಗರ ಜಿಲ್ಲೆ ಕನಸನ್ನು ನನಸು ಮಾಡಿದ್ದಾರೆ.


BY Vijayendra: 'ತಂದೆ ಯಡಿಯೂರಪ್ಪನವರ ಹೆಸರಿಗೆ ಚ್ಯುತಿ ತರುವ ಕೆಲಸ ನಾನು ಮಾಡಿಲ್ಲ'


ಕಾಂಗ್ರೆಸ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಬಳಿಕ ಆನಂದ್ ಸಿಂಗ್ ಅವರು ವಿಜಯನಗರ ಜಿಲ್ಲೆಯನ್ನಾಗಿ ಮಾಡಬೇಕೆಂದು ಯಡಿಯೂರಪ್ಪ(BS Yediyurappa) ಬಳಿ ಬೇಡಿಕೆ ಇಟ್ಟಿದ್ದರು. ಅಂದು ಬಿಎಸ್‌ವೈ ಕೊಟ್ಟ ಭರವಸೆಯನ್ನುಈಗ ಈಡೇರಿಸಿದ್ದಾರೆ.


Siddaramaiah: ಸಿದ್ದರಾಮಯ್ಯ ಒಬ್ಬ ಡಕೋಟಾ: ಟಗರಿಗೆ ತಿರುಗೇಟು ನೀಡಿದ ಸಚಿವ


ಇನ್ನು ಅರಣ್ಯ ಖಾತೆ ಹಿಂಪಡೆದು ಹಜ್ ಮತ್ತು ವಕ್ಫ್ ಕೊಟ್ಟಿರುವುದಕ್ಕೆ ಬೇಸರಲ್ಲಿದ್ದ ಆನಂದ್ ಸಿಂಗ್ ಅವರಿಗೆ ಇದೀಗ ವಿಜಯನಗರ ಜಿಲ್ಲೆಯ ಅಧಿಕೃತ ಆದೇಶ ಕೊಡುವ ಮೂಲಕ ಸಮಾಧಾನಪಡಿಸಲಾಗಿದೆ.


Cheapest Recharge Plans - ರೂ.200ಕ್ಕೂ ಕಮ್ಮಿ ಬೆಲೆಗೆ ಉಚಿತ ಕರೆ, 42 GB ಡೇಟಾ


ಅಧಿಕೃತ ಆದೇಶ ಸ್ವೀಕರಿಸಿ ಫುಲ್ ಖುಷಿಯಲ್ಲಿರುವ ಆನಂದ್ ಸಿಂಗ್, ಸೋಮವಾರ ಸಂಜೆ ಸಂಭ್ರಮಾಚರಣೆಯಲ್ಲಿ‌ ಭಾಗಿಯಾಗಲೆಂದು ಬೆಂಗಳೂರಿನಿಂದ ಹೊಸಪೇಟೆಯತ್ತ ಹೊರಟರು.


Maneka Gandhi: ಮೇನಕಾ ಗಾಂಧಿಗೆ ನೋಟಿಸ್ ನೀಡಿದ ಮೈಸೂರು ಕೋರ್ಟ್‌..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.