ಬೆಂಗಳೂರು: ಹಲವಾರು ಸ್ಥಾನ ಅಲಂಕರಿಸಿದ ಡಿ.ಕೆ.ಶಿವಕುಮಾರ್ (DK Shivakumar) ಈ ರೀತಿ ಬೇಜವಾಬ್ದಾರಿಯ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಸಚಿವ ಡಾ.ಅಶ್ವತ್ಥ ನಾರಾಯಣ ಹೇಳಿದರು.


COMMERCIAL BREAK
SCROLL TO CONTINUE READING

ಬಿಜೆಪಿ ನನ್ನನ್ನು ಟಾರ್ಗೆಟ್ ಮಾಡ್ತಾ ಇದೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಅಶ್ವತ್ಥ ನಾರಾಯಣ (Ashwath Narayan),  ಕಾನೂನನ್ನು ಗೌರವಿಸುವವರು ಹೀಗೆ ಮಾತನಾಡುವುದಿಲ್ಲ. ಕಾನೂನು ಕ್ರಮ ಜರುಗಿಸಬಾರದು ಅಂದರೆ ಹೇಗೆ? ಕಾನೂನಿನ ಚೌಕಟ್ಟು ಒಳಗೆ ಎಲ್ಲರು ಬದುಕಿ ಬಾಳಬೇಕು. ನ್ಯಾಯಲಯ ಸೇರಿದಂತೆ ನ್ಯಾಯ ಪಡೆಯಲು ಹತ್ತಾರು ಜಾಗಗಳಿವೆ. ಹಲವಾರು ಸ್ಥಾನ ಅಲಂಕರಿಸಿದ ಡಿ.ಕೆ.ಶಿವಕುಮಾರ್ ಈ ರೀತಿ ಬೇಜವಾಬ್ದಾರಿಯ ಹೇಳಿಕೆ ಕೊಡುವುದು ಸರಿಯಲ್ಲ ಎಂದರು.


ಸಾರ್ವಜನಿಕರಿಗೊಂದು ಕಾನೂನು ಇವರಿಗೊಂದು ಕಾನೂನು ಅಂತಿಲ್ಲ. ಎಲ್ಲರಿಗೂ ಒಂದೇ ಕಾನೂನು. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಅವರ ವಿರುದ್ಧದ ಧ್ವನಿಯನ್ನ ಅವರ ಭಾಗದಲ್ಲಿ ಧ್ವಂಸ ಮಾಡೋದು. ಯಾವ ರೀತಿ ಏನೆಲ್ಲಾ ಮಾಡಿದಾರೆ ಅನ್ನೋದು ಇಡೀ ಸಮಾಜಕ್ಕೆ ಗೊತ್ತು ಎಂದು ಹೇಳಿದರು.


ಇದನ್ನೂ ಓದಿ: ಪ್ರಧಾನಿ ಕಿವಿಮಾತಿಗೆ ತಲೆದೂಗಿದ ರಾಜ್ಯ ಸರ್ಕಾರಗಳು: 'Lockdown' ಪದ ಬಳಕೆಯಿಂದ ದೂರ


ಸರ್ಕಾರಿ ಸಂಸ್ಥೆಗಳಲ್ಲಿ ಡಿಜಿಟಲ್ ಲರ್ನಿಂಗ್ (Digital Learning) ತಂದಿದ್ದೇವೆ. ಕಲಿಕೆಯಲ್ಲಿ ಗುಣಮಟ್ಟ ಇದ್ದರೆ ಇವೆಲ್ಲ ಆಗುತ್ತವೆ. ಗುಣಮಟ್ಟದ ಶಿಕ್ಷಣ ಇದೆ ಅಂದರೆ ಅದು ಕರ್ನಾಟಕದಲ್ಲಿ. ನಮ್ಮ ಕರ್ನಾಟಕಕ್ಕೆ ಬೇರೆ ದೇಶದವರು ಬಂದು ಗುಣಮಟ್ಟದ ಶಿಕ್ಷಣ ಕಲಿಯುವಂತೆ ಕೆಲಸ ಮಾಡುತ್ತಿದ್ದೇವೆ. ಹೊಸ ಹೊಸ ಪಾಲಿಸಿಗಳನ್ನು ಜಾರಿಗೆ ತರುತ್ತಿದ್ದೇವೆ ಎಂದು ಸಚಿವ ಡಾ.ಅಶ್ವತ್ಥ ನಾರಾಯಣ ಹೇಳಿದರು. 


ಅತಿಥಿ ಉಪನ್ಯಾಸಕರ ಮುಂದುವರಿದ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, 8 ಗಂಟೆ ಮಾತ್ರ ಪಾಠ ಮಾಡ್ತಿದ್ದವರಿಗೆ ಇನ್ನಷ್ಟು ಅವಕಾಶ ಮಾಡಿಕೊಡ್ತಿದ್ದೇವೆ. 13 ಸಾವಿರ ಜನರ ಪೈಕಿ ಕೇವಲ 4.5  ಸಾವಿರ ಮಂದಿ ಮಾತ್ರ ಅರ್ಹತೆ ಹೊಂದಿದ್ದಾರೆ. 9.5 ಸಾವಿರಕ್ಕಿಂತ ಹೆಚ್ಚು ಜನ ನೇಮಕ ಆಗುವ ಅವಕಾಶ ಇದೆ. ಯುಜಿಸಿ ಎಲಿಜಿಬಿಲಿಟಿ ಇಲ್ಲದವರಿಗೂ ಕೂಡ ಅವಕಾಶ ಕೊಡ್ತಿದ್ದೇವೆ. ಎರಡರಿಂದ ಮೂರು ಪಟ್ಟು ಸಂಬಳ ಹೆಚ್ಚಾಗಿದೆ. ಇನ್ನೂ ಸಮಾಧಾನ ಇಲ್ಲ ಅಂದ್ರೆ ಹೇಗೆ? ಎಂದು ಪ್ರಶ್ನಿಸಿದರು.


ಸೋಮವಾರದಿಂದ ಪೋರ್ಟಲ್ ಓಪನ್ ಆಗ್ತಿದೆ. ಅತಿಥಿ ಉಪನ್ಯಾಸಕರು ಅರ್ಜಿ ಹಾಕಬಹುದು. ಇನ್ಯಾವುದಕ್ಕೂ ಕೂಡ ನಾವು ಮಣಿಯುವುದಿಲ್ಲ. ಕೆಲವರು ರಾಜಕೀಯ ಮಾಡ್ತಿದ್ದಾರೆ. ಇದಕ್ಕೆಲ್ಲ ನಾವು ಮಣಿಯಲ್ಲ ಎಂದರು.


ಬೆಳಗಾವಿಯಲ್ಲಿ ಲಸಿಕೆಯಿಂದ ಮಕ್ಕಳ ಸಾವು ವಿಚಾರವಾಗಿ ಮಾತನಾಡಿದ ಅವರು, ವ್ಯಾಕ್ಸಿನ್ ನಿಂದ ಆಗಿದೆಯೋ ಏನು ಅಂತ ನೋಡಬೇಕು. ಕ್ಲಿನಿಕಲ್ ಟೆಸ್ಟಿಂಗ್ ನಿಂದ ಈ ಬಗ್ಗೆ ತಿಳಿಯುತ್ತದೆ. ಮರಣೋತ್ತರ ಪರೀಕ್ಷೆಯ ನಂತರ ಈ ಬಗ್ಗೆ ತಿಳಿಯುತ್ತದೆ ಎಂದು ತಿಳಿಸಿದರು. 


ಇದನ್ನೂ ಓದಿ: ಹಾಡ ಹಗಲೇ ಸರಗಳ್ಳತನ: ವೃದ್ಧೆಯ ಸರ ಕಿತ್ತು ಪರಾರಿಯಾದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.