ಬೆಂಗಳೂರು: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ(Mekedatu Project) ವಿರುದ್ಧ ಕಿಡಿಕಾರಿರುವ ಬಿಜೆಪಿ ‘ಕೈ’ ನಾಯಕರನ್ನು ಗೇಲಿ ಮಾಡಿದೆ. ‘ಸೀನು, ಕೆಮ್ಮು, ನೆಗಡಿ, ತಲೆನೋವು, ದೇಹದ ಸ್ಥಿಮಿತ ಕಳೆದುಕೊಳ್ಳುವುದು ಕೋವಿಡ್ ಸೋಂಕಿನ ಪ್ರಾಥಮಿಕ ಲಕ್ಷಣ. ಡಿಕೆಶಿ(DK Shivakumar)ಯವರೇ ನೀವು ಒಂದನೇ ಅಲೆಯ ತಬ್ಲಿಘಿಗಳ ರೀತಿ ಕೋವಿಡ್ ಹರಡುತ್ತಿದ್ದೀರಾ?’ ಅಂತಾ ಟ್ವೀಟ್ ಮೂಲಕ ಬಿಜೆಪಿ ಕುಟುಕಿದೆ.
# ತಬ್ಲಿಘಿಕಾಂಗ್ರೆಸ್ #ಕೋವಿಡ್ಯಾತ್ರೆ ಹ್ಯಾಶ್ ಟ್ಯಾಗ್ ಬಳಿಸಿ ಟ್ವೀಟ್ ಮಾಡಿರುವ ಬಿಜೆಪಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಾದಯಾತ್ರೆ(Mekedatu Congress Padayatra)ಯಿಂದ ಸುಸ್ತಾಗಿ ಮಾಸ್ಕ್ ಮತ್ತು ಸಾಮಾಜಿಕ ಅಂತರವಿಲ್ಲದೆ ತಮ್ಮ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ವಿಡಿಯೋ ಶೇರ್ ಮಾಡಿ ವ್ಯಂಗ್ಯವಾಡಿದೆ. ಇಲ್ಲಿ ಯಾರು ಕೋವಿಡ್ ನಿಯಮ ಪಾಲಿಸುತ್ತಿದ್ದಾರೆ? ಡಿಕೆಶಿ ಅವರು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದ ಸಾಮಾಜಿಕ ಅಂತರ, ಮಾಸ್ಕ್ ಎಲ್ಲಿದೆ? ಕೋವಿಡ್ ಮೊದಲನೇ ಅಲೆ ಹಾಗೂ 3ನೇ ಅಲೆಯ ವಿಸ್ತಾರಕರು ಒಂದೇ ಫ್ರೇಮ್ನಲ್ಲಿದ್ದಾರೆ’ ಎಂದು ಟೀಕಿಸಿದೆ.
ಇದನ್ನೂ ಓದಿ: ಪರಿಸ್ಥಿತಿ ಕೈಮೀರಿ ಹೋದಾಗ ಲಾಕ್ ಡೌನ್ ಬಗ್ಗೆ ಚಿಂತನೆ: ಗೃಹಸಚಿವ ಆರಗ ಜ್ಞಾನೇಂದ್ರ
‘ಡಿಕೆಶಿಯವರೇ ನೀವು ಮೂರನೇ ಅಲೆಯ ಕೋವಿಡ್(CoronaVirus) ಸೂಪರ್ ಸ್ಪ್ರೆಡರ್. ಕಂಡವರ ಮಕ್ಕಳನ್ನು ಗುಂಡಿಗೆ ತಳ್ಳುವ ಹುಂಬತನ ಬಿಟ್ಟು ಬಿಡಿ. ಶಾಲೆಗಳನ್ನು ಕೊರೊನಾ ಹರಡುವ ಪ್ರಯೋಗಾಲಯವಾಗಿ ಬಳಸಿಕೊಂಡಿದ್ದಕ್ಕೆ ರಾಜ್ಯದ ಜನತೆಯ ಬಳಿ ಕ್ಷಮೆಯಾಚಿಸಿ’ ಅಂತಾ ಬಿಜೆಪಿ(BJP) ಟ್ವೀಟ್ ಮಾಡಿದೆ.
‘ಡಿಕೆಶಿಯವರೇ ನೀವೆಷ್ಟೇ ಗೌರವದ ನಾಟಕವಾಡಿದರೂ ಸಿದ್ದರಾಮಯ್ಯ(Siddaramaiah) ನಿಮ್ಮನ್ನು ನಂಬುತ್ತಾರೆಯೇ? ನಿಮ್ಮಿಬ್ಬರ ಮಧ್ಯೆ ಇರುವ ಕಂದರ ದಾಟುವುದಕ್ಕೆ ಮೇಕೆಯಷ್ಟೇ ಅಲ್ಲ ಚಿರತೆಗೂ ಅಸಾಧ್ಯ! ಹಳೆ ಮೈಸೂರು ಭಾಗದಲ್ಲಿ ಡಿಕೆಶಿ ಪ್ರಬಲವಾಗಬಾರದು, ತಮಗೆ ಪರ್ಯಾಯ ನಾಯಕತ್ವ ಎದುರಾಗಬಾರದು ಎಂಬುದು ಸಿದ್ದರಾಮಯ್ಯರ ಆಶಯ. ಇದಕ್ಕಾಗಿ #ಸುಳ್ಳಿನಜಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಲು ಸಿದ್ದರಾಮಯ್ಯ ಅವರು ತಂತ್ರ ಹೆಣೆಯುತ್ತಿದ್ದಾರೆ. ಡಿಕೆಶಿಯವರೇ ಶತ್ರುವನ್ನು ಬಗಲಲ್ಲೇ ಇಟ್ಟುಕೊಂಡಿದ್ದೀರಿ, ಹುಷಾರ್!’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಹಳೆ ಮೈಸೂರು ಭಾಗದಲ್ಲಿ @DKShivakumar ಪ್ರಬಲವಾಗಬಾರದು, ತಮಗೆ ಪರ್ಯಾಯ ನಾಯಕತ್ವ ಎದುರಾಗಬಾರದು ಎಂಬುದು @siddaramaiah ಆಶಯ.
ಇದಕ್ಕಾಗಿ #ಸುಳ್ಳಿನಜಾತ್ರೆ ಯನ್ನು ಅರ್ಧಕ್ಕೆ ಮೊಟಕುಗೊಳಿಸಲು ಸಿದ್ದರಾಮಯ್ಯ ಅವರು ತಂತ್ರ ಹೆಣೆಯುತ್ತಿದ್ದಾರೆ.
ಡಿಕೆಶಿ ಅವರೇ, ಶತ್ರುವನ್ನು ಬಗಲಲ್ಲೇ ಇಟ್ಟುಕೊಂಡಿದ್ದೀರಿ, ಹುಷಾರ್!#ಕೋವಿಡ್ಯಾತ್ರೆ
— BJP Karnataka (@BJP4Karnataka) January 11, 2022
ಇದನ್ನೂ ಓದಿ: ಮೇಕೆದಾಟು ಯೋಜನೆ ಅನುಷ್ಠಾನಗೊಳಿಸುವ ಗಂಡಸ್ತನ ಇರೋದು ಬಿಜೆಪಿಗೆ ಮಾತ್ರ: ಅಶ್ವತ್ಥ ನಾರಾಯಣ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.