ಬೆಂಗಳೂರು:  ಕೋವಿಡ್ 19  ಕೊರೊನಾವೈರಸ್ (Coronavirus) ನಿಯಂತ್ರಣ ಹಿನ್ನೆಲೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇನ್ನೂ ಹೆಚ್ಚಿನದಾಗಿ ಕೆಲಸವನ್ನು ನಿರ್ವಹಿಸಬೇಕು. ಕೊರೊನಾ ಹೊಸ ಪ್ರಕರಣಗಳು ದಾಖಲಾಗದಂತೆ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು, ಇನ್ನು ಮುಂದೆಯೂ ಒಂದೂ ಪ್ರಕರಣ ದಾಖಲಾಗದಂತೆ ಕಾರ್ಯವನ್ನು ನಿರ್ವಹಿಸಬೇಕು ಎಂದು ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.‌ ಬಸವರಾಜ್ ಸೂಚನೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಕೋವಿಡ್-19 (Covid-19) ವೈರಾಣು ನಿಯಂತ್ರಣ ಕುರಿತು ಚನ್ನಗಿರಿ ತಾಲ್ಲೂಕಿನ ಜವಳಿ ಸಮುದಾಯ ಭವನಲ್ಲಿ ಆಯೋಜಿಲಾಗಿದ್ದ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷೆತೆಯನ್ನು ವಹಿಸಿ ಮಾತನಾಡಿ, ಸಾರ್ವಜನಿಕರು ವೈದ್ಯರೊಂದಿಗೆ ಮತ್ತು ಆಶಾ ಕಾರ್ಯಕರ್ತರೊಂದಿಗೆ ಉತ್ತಮವಾಗಿ ನಡೆದುಕೊಳ್ಳಬೇಕು. ಅವರ ಕರ್ತವ್ಯಕ್ಕೆ ಅಡ್ಡಿಪಡಿಸಬಾರದು. ನಿಮ್ಮ ಆರೋಗ್ಯಕ್ಕಾಗಿ ಅವರು ಶ್ರಮಿಸುತ್ತಿದ್ದಾರೆ ಹಾಗೂ ಗುಂಪುಗಳ ಮೂಲಕ ಸಂಘರ್ಷಣೆಯನ್ನು ಮಾಡಬಾರದು ಎಂದು ತಿಳಿಸಿದರು.


ಮತ್ತೊಮ್ಮೆ ಲಾಕ್​ಡೌನ್ ನಿಯಮ ಸಡಿಲಿಕೆ, ಇವುಗಳಿಗೀಗ ಅವಕಾಶ


ಸಂಸದ ಜಿ.ಎಂ. ಸಿದೇಶ್ವರ ಮಾತನಾಡಿ, ವಿಶೇಷ ಎಂದರೆ ಜಿಲ್ಲೆಯ ಯಾವ ತಾಲ್ಲೂಕಿನಲ್ಲಿಯೂ ಕೊರೋನಾ ಬಂದಿಲ್ಲ. ಆ ಭಾಗದಲ್ಲಿನ ಶಾಸಕರು, ಅಧಿಕಾರಿಗಳು ವಿಶೇಷವಾಗಿ ಶ್ರಮ ವಹಿಸಿದ್ದಾರೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಎಲ್ಲೆಡೆ ಸಂಚರಿಸಿ ಮತ್ತು ಅಧಿಕಾರಿಗಳ ಹಗಲಿರುಳು ಕೆಲಸದಿಂದಾಗಿ ನಮ್ಮ ಜಿಲ್ಲೆಯು ಇನ್ನೆರಡು ದಿನಗಳಲ್ಲಿ ಹಸಿರು ವಲಯಕ್ಕೆ(ಗ್ರೀನ್ ಝೋನ್) ಬರಲಿದೆ. ದಾವಣಗೆರೆ ಮೆಕ್ಕೆಜೋಳವನ್ನು ಹೆಚ್ಚಾಗಿ ಬೆಳೆಯುವ ಜಿಲ್ಲೆಯಾಗಿರುವುದರಿಂದ ಮೇಕ್ಕೆಜೋಳ ಖರೀದಿ ಕೇಂದ್ರವನ್ನು ತೆರೆಯುವಂತೆ ಮನವಿ ಮಾಡಿದರು.


ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ಕೊರೋನಾ ಒಂದು ಮಾರಕ ಸೋಂಕಾಗಿದ್ದು, ಪ್ರಪಂಚದ ಎಲ್ಲ ದೇಶಗಳಲ್ಲಿ ವ್ಯಾಪಿಸಿ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. ಇದಕ್ಕೆ ಯಾವುದೇ ಔಷಧಿ ಕಂಡು ಹಿಡಿದಿಲ್ಲ. ಈ ಕಾರಣದಿಂದ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ನಿಯಂತ್ರಣ ಸಾಧಿಸಬೇಕು ಎಂದರು.

Lockdown: 150 ಕಿ.ಮೀ ನಡೆದು ಮನೆ ಸೇರುವ ಮುನ್ನ ಕೊನೆಯುಸಿರೆಳೆದ 12 ವರ್ಷದ ಬಾಲಕಿ

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಆಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪದ್ಮ ಬಸವಂತಪ್ಪ., ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಡಿಹೆಚ್‍ಓ ಡಾ. ರಾಘವೇಂದ್ರ ಸ್ವಾಮಿ ಮತ್ತಿತರರಿದ್ದರು.