ಬಿಜಾಪುರ: ದೇಶದಲ್ಲಿ ಲಾಕ್ಡೌನ್ (Lockdown) ಜಾರಿಗೆ ಬಂದ ಬೆನ್ನಲ್ಲೇ ಹಲವು ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಗರಗಳಲ್ಲಿ ಆಹಾರ ಮತ್ತು ಪಾನೀಯಗಳ ಕೊರತೆಯಿಂದಾಗಿ ಕಾರ್ಮಿಕರು ಕಾಲ್ನಡಿಗೆಯಲ್ಲಿ ತಮ್ಮ ಮನೆಗಳಿಗೆ ತೆರಳುತ್ತಿದ್ದಾರೆ. ಮುಂಬೈನ ಬಾಂದ್ರಾದಲ್ಲಿ ಕಾರ್ಮಿಕರ ಮೇಲೆ ಲಾಠಿ ಚಾರ್ಜ್ ಮಾಡಿದ ಘಟನೆ ಇನ್ನೂ ಮಾಸಿಲ್ಲ, ಅದರ ಬೆನ್ನಲ್ಲೇ 150 ಕಿ.ಮೀ ನಡೆದು ಮನೆ ಸೇರುವ ಮುನ್ನ ಕೊನೆಯುಸಿರೆಳೆದ 12 ವರ್ಷದ ಬಾಲಕಿಯ ಕಥೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.
PM Kisan ಯೋಜನೆ ಮೂಲಕ 8.89 ಕೋಟಿ ಜನರ ಖಾತೆಗೆ ಹಣ
ವಾಸ್ತವವಾಗಿ ಛತ್ತೀಸ್ಗಢದ ಬಿಜಾಪುರದ ತನ್ನ ಮನೆಗೆ ತೆಲಂಗಾಣದಿಂದ ಹಿಂದಿರುಗಿದ 12 ವರ್ಷದ ಬಾಲಕಿ ಹಳ್ಳಿಯನ್ನು ತಲುಪುವ ಮುನ್ನ ಸಾವನ್ನಪ್ಪಿದ್ದಾಳೆ. ಸುಡುವ ಬಿಸಿಲಿನಲ್ಲಿ ಕಾಲ್ನಡಿಗೆಯಲ್ಲಿ ನಿರಂತರವಾಗಿ ಮೂರು ದಿನ ನಡೆದ ಬಾಲಕಿಗೆ ದೇಹದಲ್ಲಿ ನೀರಿನ ಕೊರತೆಯಿಂದ ಕಳೆದ ಶನಿವಾರ ಮನೆ ತಲುಪುವ ಮುನ್ನ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಸುದ್ದಿ ಸಂಸ್ಥೆ ಎಎನ್ಐ ಸುದ್ದಿಯ ಪ್ರಕಾರ 12 ವರ್ಷದ ಬಾಲಕಿ ಜಮಾಲೊ ಮಕ್ದಾಮ್ ತೆಲಂಗಾಣದ ಕಣ್ಣಿಗುಡದಲ್ಲಿ ಮೆಣಸಿನಕಾಯಿ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದಳು. ಏಪ್ರಿಲ್ 15ರಿಂದ ದೇಶದಲ್ಲಿ ಲಾಕ್ ಡೌನ್ ಮುಂದುವರೆದ ಬಳಿಕ ಆಕೆಯೊಂದಿಗೆ ಕೆಲಸ ಮಾಡುತ್ತಿದ್ದ ಇತರ ಕಾರ್ಮಿಕರು ತಮ್ಮ ಗ್ರಾಮಕ್ಕೆ ಮರಳಲು ನಿರ್ಧರಿಸಿದರು. ಹುಡುಗಿ 11 ಜನರ ಗುಂಪಿನೊಂದಿಗೆ ಕಾಲ್ನಡಿಗೆಯಲ್ಲಿ ಹೊರಟಳು.
ನಿಮ್ಮ ಮಗಳ ಕನಸುಗಳಿಗೆ ರೆಕ್ಕೆ ನೀಡಲು ಉತ್ತಮ ರಿಟರ್ನ್ಸ್ ನೀಡಲಿವೆ ಈ ಯೋಜನೆಗಳು
ಮೂರು ದಿನಗಳ ಕಾಲ 150 ಕಿ.ಮೀ. ನಡೆದ ನಂತರ ತನ್ನ ಗ್ರಾಮ ತಲುಪಲು ಇನ್ನು 50 ಕಿ.ಮೀ ದೂರದಲ್ಲಿರುವಾಗ ಏಪ್ರಿಲ್ 18ರ ಬೆಳಿಗ್ಗೆ ಬಿಜಾಪುರದ ಭಂಡರ್ಪಾಲ್ ಗ್ರಾಮದ ಬಳಿ ಬಾಲಕಿ ಮೃತಪಟ್ಟಿದ್ದಾಳೆ.