Corruption: ಮಂಡ್ಯದಲ್ಲಿ ಸಚಿವ ಚಲುವರಾಯಸ್ವಾಮಿ ವಿರುದ್ಧ ವಾಗ್ಧಾಳಿ ನಡೆಸಿರುವ ಮಾಜಿ ಶಾಸಕ ಸುರೇಶ್ ಗೌಡ ಭ್ರಷ್ಟಾಚಾರದಲ್ಲಿ ಚಲುವರಾಯಸ್ವಾಮಿಗೆ ಮೊದಲ ಸ್ಥಾನ. ಚಲುವರಾಯಸ್ವಾಮಿಗೆ ಬ್ರೈನ್ ಮ್ಯಾಪಿಂಗ್ ಮಾಡಬೇಕು. ಆಗ ಆತ ಎಲ್ಲೆಲ್ಲಿ ಎಷ್ಟೆಷ್ಟು ಹಣ ತಿಂದಿದ್ದಾನೆ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಭ್ರಷ್ಟಾಚಾರದಲ್ಲಿ ಚಲುವರಾಯಸ್ವಾಮಿ ಮೊದಲ ಸ್ಥಾನ: 
ಮಂಡ್ಯದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಸುರೇಶ್ ಗೌಡ, ಅಧಿಕಾರ ಸಿಕ್ಕಾಗ ಜನರಿಗೆ ಒಳ್ಳೆಯದು ಮಾಡಬೇಕು. ಆದರೆ, ಈ ಸರ್ಕಾರ ರಾಜ್ಯವನ್ನೇ ಲೂಟಿ ಮಾಡುತ್ತಿದೆ.  ಭ್ರಷ್ಟಾಚಾರದಲ್ಲಿ ಸಚಿವ ಚಲುವರಾಯ ಸ್ವಾಮಿಯೇ ಮೊದಲಿದ್ದು ಕಡಿಮೆ ಎಂದರೂ ಇಲ್ಲಿವರೆಗೆ 300-400 ಕೋಟಿ ಲೂಟಿ ಹೊಡೆದಿದ್ದಾನೆ. ಟ್ರಾನ್ಸ್‌ಫರ್‌ನಲ್ಲಿ 150 ಕೋಟಿ, ಜಲಧಾರೆ ಯೋಜನೆಯಲ್ಲಿ 100 ಕೋಟಿ, ಹೀಗೆ ಸಚಿವ ಚಲುವರಾಯ ಸ್ವಾಮಿ ಒಬ್ಬರೇ ಸುಮಾರು 300 ರಿಂದ 400 ಕೋಟಿವರೆಗೆ ಲೂಟಿ ಮಾಡಿದ್ದಾರೆ ಎಂದು ತೀವ್ರ ವಾಗ್ಧಾಳಿ ನಡೆಸಿದರು. 


ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷಕ್ಕೆ ಕರ್ನಾಟಕದಿಂದಲೇ ಫಂಡ್:
ಹಿಂದಿನ ಸರ್ಕಾರದಲ್ಲಿ ಜೆಸಿಬಿಯಲ್ಲಿ ಹಣ ತುಂಬುತ್ತಿದ್ದಾರೆ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದರು. ಆದರೆ, ಇದೀಗ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮಾಡಿ ದುಡ್ಡನ್ನ ಏರ್‌ಲಿಫ್ಟ್ ಮಾಡುತ್ತಿದೆ. ಬಿಜೆಪಿ ಸರ್ಕಾರವೇ ಪರವಾಗಿರಲಿಲ್ಲ ಎಂದು ಅಧಿಕಾರಗಳು ಹೇಳ್ತಿದ್ದಾರೆ. ಇಡೀ ಕಾಂಗ್ರೆಸ್ ಹಣ ಏರ್‌ಲಿಫ್ಟ್ ಮಾಡುವುದರಲ್ಲಿ ಬ್ಯುಸಿಯಾಗಿದ್ದು ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷಕ್ಕೆ ಕರ್ನಾಟಕದಿಂದಲೇ ಫಂಡ್ ಹೋಗ್ತಿದೆ ಎಂದು ಸುರೇಶ್ ಗೌಡ ಆರೋಪಿಸಿದರು. 


ಇದನ್ನೂ ಓದಿ- ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರಾಗಿ ರಾಜೀವ್ ಗೌಡ ನೇಮಕ


ಚಲುವರಾಯಸ್ವಾಮಿಗೆ ಬ್ರೈನ್ ಮ್ಯಾಪಿಂಗ್ ಮಾಡಬೇಕು!
ಸಚಿವ ಚಲುವರಾಯಸ್ವಾಮಿಗೆ ಬ್ರೈನ್ ಮ್ಯಾಪಿಂಗ್ ಮಾಡಬೇಕು ಎಂದು ಆಗ್ರಹಿಸಿರುವ ಮಾಜಿ ಶಾಸಕ ಸುರೇಶ್ ಗೌಡ, ಬೆಂಗಳೂರಿನಲ್ಲಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಇದೆ. ಈ ಕೋ-ಆಪರೇಟಿವ್ ಬ್ಯಾಂಕ್ ಕಾಂಗ್ರೆಸ್ ಪಕ್ಷದ ಯುವ ಅಧ್ಯಕ್ಷರದು. ಅಲ್ಲಿ ಚಲುವರಾಯಸ್ವಾಮಿ ಎಷ್ಟು ಬ್ಲಾಕ್‌ ಮನಿ ವೈಟ್ ಮಾಡಿದ್ದಾನೆ.? ಅದೆಲ್ಲವೂ ಆಚೆ ಬರ್ತಾವೆ. ಬೆಳ್ಳೂರು ಕ್ರಾಸ್‌ನಲ್ಲಿ ಪೆಟ್ರೋಲ್ ಬ್ಯಾಂಕ್ ಮಾಲೀಕರ ಹತ್ತಿರ ಎಷ್ಟು ಕಲೆಕ್ಷನ್ ಮಾಡಿದ್ದಾರೆ ಎಂಬ ಎಲ್ಲಾ ಮಾಹಿತಿಯೂ ಜನರಿಗೆ ಗೊತ್ತಿದೆ.


ಮೆಜೆಸ್ಟಿಕ್‌ನಲ್ಲಿರುವ ಕೋ ಆಪರೇಟಿವ್ ಸೊಸೈಟಿ ಸರಿಯಾಗಿ ತನಿಖೆ ನಡೆಸಿದರೆ ಸಾಕು. ಸಿಎಂ ಸಿದ್ದರಾಮಯ್ಯ ತನಿಖೆ ಮಾಡಿಸಿದ್ರೆ ಬ್ಲಾಕ್ ಹೇಗೆ ವೈಟ್ ಆಗ್ತಿದೆ. ಯಾವ ಯಾವ ಥಿಯೇಟರ್‌ ತಗೋಳದಕ್ಕೆ ಸಹಾಯ ಆಗಿದೆ ಗೊತ್ತಾಗುತ್ತೆ. ತಿಂದವನು ಕಕ್ಕಲೇ ಬೇಕು, ಎಲ್ಲ ಮುಂದೆ ಗೊತ್ತಾಗುತ್ತೆ. ಅಧಿಕಾರಗಳು ಪತ್ರ ಬರೆದದ್ದು ಸತ್ಯ. ಬೆಂಗಳೂರಿ‌ನ 37 ಕ್ರಸೆಂಟ್ ಹೋಟೆಲ್‌ಗೆ ಕರೆಸಿಕೊಂಡು ಅಧಿಕಾರಗಳಿಗೆ ಒತ್ತಡ ಹೇರಿದ್ದಾರೆ.
ಎಲ್ಲಾ ಬಿಗಿ ಭದ್ರತೆ ಮಾಡಿಕೊಂಡು, ಅಧಿಕಾರಗಳ ಬಳಿ ಪತ್ರ ಬರೆದಿಲ್ಲ ಎಂದು ಸುಳ್ಳು ಹೇಳಿಸಿದ್ದಾರೆ.


ಇದನ್ನೂ ಓದಿ- ಟ್ರಬಲ್ ಶೂಟರ್-ದಳಪತಿಗಳ ನಡುವೆ ನಿಲ್ಲದ ಕಮಿಷನ್ ಫೈಟ್..!


37 ಕ್ರಸೆಂಟ್ ಹೋಟೆಲ್ ಹಾಗೂ ಆ ರಸ್ತೆಯ ಸಿಸಿಟಿವಿ ದೃಶ್ಯ ತೆಗೆಸಿ. ಆಗ ಯಾವ ಎಡಿ, ಜೆಡಿ ಯಾರೆಲ್ಲಾ ಹೋಗಿದ್ರು ತಿಳಿಯುತ್ತದೆ. ಪೊಲೀಸರು ಇವ್ರನ್ನ ಕೇಳಿ ತನಿಖೆ ಮಾಡ್ತಾರೆ. ಅಮಾಯಕರನ್ನ ಸಿಲುಕಿಸುವ ಪ್ರಯತ್ನ ಮಾಡ್ತಾರೆ. ಜೆಡಿ, ಎಡಿಗಳನ್ನ ಬ್ರೈನ್ ಮ್ಯಾಪಿಂಗ್ ಮಾಡಿದ್ರೆ ಎಷ್ಟು ದುಡ್ಡು ಕೊಟ್ಟಿದ್ದೀವಿ ಅಂತ ಬಾಯಿ ಬಿಡ್ತಾರೆ. ಬ್ರೈನ್ ಮ್ಯಾಪಿಂಗ್ ನಮಗಲ್ಲ, ಚಲುವರಾಯಸ್ವಾಮಿಗೆ ಮಾಡಿಸಬೇಕು ಎಂದು ಸುರೇಶ್ ಗೌಡ ಆಗ್ರಹಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.