HD Kumarswamy : ಬೆಂಗಳೂರಿನ ಜೆಪಿ ಭವನದಲ್ಲಿ ಧ್ವಜಾರೋಹಣದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಜೆಡಿಎಸ್ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಗುತ್ತಿಗೆದಾರ ಮೊದಲು ಸರ್ಕಾರದ ಕಮಿಷನ್ ಬಗ್ಗೆ ಆರೋಪ ಮಾಡಿದ್ದಾರೆ.
ಆಮೇಲೆ ಆತನನ್ನ ಯಾರು ಭೇಟಿ ಮಾಡಿದರು ಎನ್ನುವುದು ಗೊತ್ತು. ಬೆದರಿಕೆ ಹಾಕಿ ಹೇಳಿಕೆ ತಿದ್ದುವಂತೆ ಮಾಡಲಾಗಿದೆ. ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಾಗ ಹಣ ಕೊಟ್ಟು ಪ್ರಕರಣ ಮುಚ್ಚಿಹಾಕಿದ್ರು. ನನಗೇನು ಬುದ್ಧಿಭ್ರಮಣೆ ಆಗಿಲ್ಲ. ಮನೆಯಲ್ಲೇ ವೈದ್ಯರಿದ್ದಾರೆ. ಇವರಿಗೆ ಮಾತ್ರ ಅಜ್ಜಯ್ಯನ ರಕ್ಷಣೆ ಇರೋದು, ನಾವು ರಕ್ಷಣೆಗೆ ಹುಡುಕಬೇಕಾಗಿದೆ ಎಂದು ಡಿಸಿಎಂ ಡಿಕೆಶಿ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಸರ್ಕಾರದ ಹಣೆ ಬರಹ ಏನು ಎನ್ನುವುದು 3 ತಿಂಗಳಲ್ಲಿ ಗೊತ್ತಾಗಲಿದೆ. ವೀರಪ್ಪ ಮೊಯಿಲಿ ಕಾಲದಲ್ಲಿ ಟೇಪ್ ರೆಕಾರ್ಡ್ ಹಗರಣದ ತನಿಖೆ ಹಳ್ಳ ಹಿಡಿಸಿದ್ರು. ಈಗ ಈ ಸರ್ಕಾರದ ಹಗರಣ ಬಹಿರಂಗ ಮಾಡಿದ್ರೂ ಅದೇ ಕತೆ ಆಗಲಿದೆ. ದಾಖಲೆ ಕೊಟ್ಟರೆ ಸಿಓಡಿ ತನಿಖೆ ಮಾಡಿಸ್ತಾರೆ. ಅವರು ಹೇಳಿದಂತೆ ಅಧಿಕಾರಿಗಳು ಕೆಲಸ ಮಾಡಿ ಪ್ರಕರಣ ಮುಗಿಸುತ್ತಾರೆ.
ಇದನ್ನೂ ಓದಿ-ನಾನೇನು ಬಿಜೆಪಿ ಅಡಿಯಾಳ: ಕಾಂಗ್ರೆಸ್ ವಿರುದ್ಧ ಎಚ್‍ಡಿಕೆ ವಾಗ್ದಾಳಿ
ಪೆನ್ ಡ್ರೈವ್ ನಕಲಿ ಎಂದು ಸರ್ಟಿಫಿಕೇಟ್ ಕೊಡಿಸುತ್ತಾರೆ ಎಂದು ಎಚ್ ಡಿಕೆ ಆರೋಪಿಸಿದ್ರು. ವಿರೋಧ ಪಕ್ಷದಲ್ಲಿದ್ದಾಗ ಮೇಕೆದಾಟುಗೆ ಪಾದಯಾತ್ರೆ ಮಾಡಿದ್ರಲ್ಲ, ಈಗ ಏನ್ ಮಾಡ್ತಾರೆ ನೋಡೋಣ ಎಂದರು.
ಈ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಅವರದೇ ಶಾಸಕ ರಾಯರೆಡ್ಡಿ ಬಹಿರಂಗಪಡಿಸಿದ್ದಾರೆ. 1 km ರಸ್ತೆಗೆ 10 km ಎಂದು ಬಿಲ್ ಮಾಡಿಸಿದ್ದನ್ನೂ ಅವರದೇ ಸಚಿವರು ಹೇಳಿದ್ದಾರೆ. ಕೇವಲ ಗ್ಯಾರಂಟಿ ಯೋಜನೆಗೆ ಕೋಟ್ಯಾಂತರ ರೂಪಾಯಿ ಜಾಹೀರಾತು ಕೊಡ್ತಾ ಇದಾರೆ. ಯಾರಪ್ಪನ ಮನೆ ದುಡ್ಡು ಅದು ಎಂದು ಎಚ್ ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
20 ವರ್ಷ ಅಧಿಕಾರದಲ್ಲಿ ಇರ್ತಿವಿ ಅಂತ ಯಡಿಯೂರಪ್ಪ ಹೇಳಿದ್ರು, ಈಗ ಇವರೂ ಹೇಳ್ತಿದಾರೆ. ಎಷ್ಟು ದಿನ ಇರ್ತಾರೆ ನೋಡೋಣ. ದುಡ್ಡಿನ ಪವರ್ ಇಟ್ಟುಕೊಂಡು ಅಧಿಕಾರಿಗಳ ಮೇಲೆ ಬ್ರಹ್ಮಾಸ್ತ್ರ ಬಿಡ್ತಿದಾರೆ. ಇದೆಲ್ಲ ಶಾಶ್ವತ ಅಲ್ಲ, ಅಂತ್ಯ ಇದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದಾರೆ.
ಇದನ್ನೂ ಓದಿ-ಬಿಚ್ಚಿಡುವವರನ್ನು, ಬಿಚ್ಚಾಕುವವರನ್ನು ತಡೆಯಲು ಆಗುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.