Hd Kumarswamy : ದಳಪತಿ ಆರೋಪಕ್ಕೆ ತಿರುಗೇಟು ಕೊಟ್ಟಿರುವ ಕನಕಪುರ ಬಂಡೆ, ಎಲ್ಲ ಬಿಚ್ಚಿಡವವರನ್ನ, ಬಿಚ್ಚಾಕುವವರನ್ನ ನಿಲ್ಲಿಸಲು ಸಾಧ್ಯವಿದ್ಯಾ ಎಂದು ಕೌಂಟರ್ ಅಟ್ಯಾಕ್ ನೀಡಿದ್ದಾರೆ. ಇದ್ರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ..
ಯೆಸ್ ,ಸರ್ಕಾರದ ವಿರುದ್ದ ಮಾಜಿ ಸಿಎಂ ಕುಮಾರಸ್ವಾಮಿ ಮತ್ತೆ ಗುಡುಗಿದ್ದಾರೆ.. ನಿನ್ನೆ ನಡೆದ ಕಾಂಗ್ರೆಸ್ ಸರ್ವ ಸದಸ್ಯರ ಸಭೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ರು. ಕುಮಾರಸ್ವಾಮಿ ಅವರು ಇತ್ತೀಚೆಗೆ ಬಿಜೆಪಿ ವಕ್ತಾರರಂತೆ ವರ್ತನೆ ಮಾಡ್ತಿದ್ದಾರೆ.
ಯಾವಾಗಲೂ ಹಿಟ್ ಅಂಡ್ ರನ್ ಮಾಡ್ತಾರೆ ಅಂತ ವ್ಯಂಗ್ಯವಾಡಿದ್ರು.. ಡಿಸಿಎಂ ಡಿಕೆಶಿವಕುಮಾರ್ ಕೂಡ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ದ ನೇರವಾಗಿ ವಾಗ್ದಾಳಿ ನಡೆಸಿದ್ರು.ಇದಕ್ಕೆ ಮಾಜಿ ಸಿಎಂ ಹೆಚ್ಡಿಕೆ ಕೌಂಟರ್ ಅಟ್ಯಾಕ್ ಕೊಟ್ಟಿದ್ದಾರೆ..
ಹಾಲಿ ಸಿಎಂ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಟೀಕೆಗಳಿಕೆ ಮಾಜಿ ಸಿಎಂ ಕುಮಾರಸ್ವಾಮಿ ಇಂದು ತಿರುಗೇಟು ನೀಡಿ ಎಚ್ಚರಿಕೆಯನ್ನ ನೀಡಿದ್ದಾರೆ.ನನ್ನತ್ರ ಬರೀ ಖಾಲಿ ಪೆನ್ ಡ್ರೈವ್ ಇಲ್ಲಾ .ಹಿಟ್ ಅಂಡ್ ರನ್ ಮಾಡೊಲ್ಲಾ ಇನ್ನು ಸಮಯ ಇದೆ ಎಲ್ಲವನ್ನು ಬಿಚ್ಚಿಡ್ತಿನಿ ಅಂತಾ ಕಿಡಿಕಾರಿದ್ರು.
ಇದನ್ನೂ ಓದಿ-ಒಂದೆರಡು ದಿನಗಳಲ್ಲಿ BBMP ಅಕ್ರಮಗಳ ಬಗ್ಗೆ ದಾಖಲೆ ರಿಲೀಸ್.. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್..
ಅಲ್ದೇ ಬಿಬಿಎಂಪಿ ವಿಚಾರದಲ್ಲಿ ಆಗಿರುವ ಭ್ರಷ್ಟಾಚಾರ ಬಗ್ಗೆ ಎರಡು ದಿನಗಳಲ್ಲಿ ಬಿಚ್ಚಿಡ್ತೀನಿ. ಬಿಬಿಎಂಪಿ ಕಂಟ್ರಾಕ್ಟರ್ ಯಾಕೆ ಕ್ಷಮೆ ಕೇಳಿದ್ದಾನೆ.ಪರೋಕ್ಷವಾಗಿ ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ್ದಾರೆ. ಎಲ್ಲವನ್ನೂ ಹೇಳ್ತೀನಿ ಎಂದು ಮಾಜಿ ಸಿಎಂ ಹೆಚ್ಡಿಕೆ ಗುಡುಗಿದ್ದಾರೆ.
ಇನ್ನು ಕುಮಾರಸ್ವಾಮಿ ಆರೋಪಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ವ್ಯಂಗ್ಯ ಮಾಡಿ ತಿರುಗೇಟು ಕೊಟ್ಟಿದ್ದಾರೆ.ಎಲ್ಲ ಬಿಚ್ಚಿಡವವರನ್ನಾ,ಬಿಚ್ಚಾಕುವವರನ್ನ ನಿಲ್ಲಿಸಲು ಸಾಧ್ಯವಿದಯೇ.ಎಲ್ಲ ಬಿಚ್ಚಿ ಬಿಚ್ಚಿ ಬಿಚ್ಚಿ ಇಡಲಿ.ಅವರಷ್ಟು ಅನುಭವ ನನಗಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.
ಒಟ್ನಲ್ಲಿ, ವರ್ಗಾವಣೆ ಆರೋಪ, ಸಚಿವ ಚೆಲುವರಾಯಸ್ವಾಮಿ ವಿರುದ್ದ ರಾಜ್ಯಪಾಲರಿಗೆ ದೂರು ಸೇರಿದಂತೆ ಬಿಬಿಎಂಪಿ ಕಂಟ್ರಾಕ್ಟರ್ ಅಸೋಸಿಯೇಷನ್ ಮಾಡಿದ ಕಮಿಷನ್ ಆರೋಪ ಸಾಕಷ್ಟು ಕಾವು ಪಡೆಯುತ್ತಿದೆ..ಇದೇ ವಿಚಾರವನ್ನಿಟ್ಟುಕೊಂಡು ಒಂದು ಕಡೆ ಬಿಜೆಪಿ ನಾಯಕರು ಹೋರಾಟಕ್ಕೆ ಪ್ಲಾನ್ ಮಾಡ್ತಿದ್ರೆ ಮತ್ತೊಂದು ಕಡೆ ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರದ ವಿರುದ್ದ ತೊಡೆತಟ್ಟಿದ್ದಾರೆ.
ಇದಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿವಕುಮಾರ್ ನಾವೇನು ಕಮ್ಮಿ ಇಲ್ಲ ಅನ್ನೋ ಹಾಗೆ ಸವಾಲುಗಳ ಮೇಲೆ ಸವಾಲಾಕ್ತಿದ್ದಾರೆ.ಇದು ಮುಂದೆ ಯಾವ ಸ್ವರೂಪ ಪಡೆಯಲಿದೆ ಅನ್ನೋದು ತೀವ್ರ ಕೂತೂಹಲ ಕೆರಳಿಸಿದೆ.
ಇದನ್ನೂ ಓದಿ-ಪಾರ್ಕ್ ಪ್ರೇಮಿಗಳಿಗೆ ಪೊಲೀಸರ ನೀತಿಪಾಠ.. ಪ್ರಣಯ ಪಕ್ಷಿಗಳಿಗೆ ಶಾಕ್ ಕೊಟ್ಟ ಕಲ್ಪತರು ಪಡೆ..!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.