Dr K Sudhakar: ಮತ್ತೆ ಮರುಕಳಿಸುತ್ತಾ ಲಾಕ್ ಡೌನ್ ದಿನಗಳು? ರಾಜ್ಯ ಸರ್ಕಾರ ಮಹತ್ವದ ನಿರ್ಧಾರ!
ಸೋಂಕು ತಡೆಗಟ್ಟುವ ಮೊದಲ ಕ್ರಮವಾಗಿ ಮದುವೆ, ಧಾರ್ಮಿಕ ಸಮಾರಂಭ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳ ಮೇಲೆ ಹದ್ದಿನ ಕಣ್ಣಿಡಲು ಮಾರ್ಷಲ್‍ಗಳನ್ನು ನೇಮಿಸಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ
ಬೆಂಗಳೂರು: ರಾಜ್ಯದಲ್ಲಿ 2ನೇ ಕೋವಿಡ್ ಅಲೆ ಕಾಣಿಸಿಕೊಳ್ಳಬಹುದೆಂಬ ಭೀತಿಯಿಂದ, ಸೋಂಕು ತಡೆಗಟ್ಟುವ ಮೊದಲ ಕ್ರಮವಾಗಿ ಮದುವೆ, ಧಾರ್ಮಿಕ ಸಮಾರಂಭ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳ ಮೇಲೆ ಹದ್ದಿನ ಕಣ್ಣಿಡಲು ಮಾರ್ಷಲ್‍ಗಳನ್ನು ನೇಮಿಸಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಜನಸಾಮಾನ್ಯರು, ವಿಐಪಿಗಳು , ಧಾರ್ಮಿಕ ಮುಖಂಡರು, ರಾಜಕೀಯ ಪಕ್ಷಗಳು ಸೇರಿದಂತೆ ಮತ್ತಿತರರು ಮಾರ್ಗಸೂಚಿಗಳನ್ನು ಪಾಲನೆ ಮಾಡದೆ ಉಲ್ಲಂಘನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಇವರ ಮೇಲೆ ನಿಗಾವಹಿಸಲು ಮಾರ್ಷಲ್‍ಗಳನ್ನು ನೇಮಕ ಮಾಡಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ವಿಧಾನಸೌಧದಲ್ಲಿ ಜಿಲ್ಲಾಕಾರಿಗಳು, ಜಿಲ್ಲಾ ಮುಖ್ಯ ಕಾರ್ಯ ನಿರ್ವಣಾಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಕಾರಿಗಳು, ಜಿಲ್ಲಾ ಆರೋಗ್ಯ ಇಲಾಖೆ ಮುಖ್ಯಸ್ಥರು, ವೈದ್ಯಕೀಯ ಕಾಲೇಜುಗಳ ನಿರ್ದೇಶಕರ ವಿಡಿಯೋ ಕಾನವರೆನ್ಸ್ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್(Dr K Sudhakar). ಮದುವೆ ಸಮಾರಂಭಗಳಲ್ಲಿ 500ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ.
Ram Mandir: ಸಿದ್ದರಾಮಯ್ಯ ತವರಿನಲ್ಲಿ ಕಟ್ಟುತ್ತಿರುವ 'ರಾಮ ಮಂದಿರ' ಹೇಗಿದೆ ಗೊತ್ತಾ?
ಕಡ್ಡಾಯವಾಗಿ ಪ್ರತಿಯೊಬ್ಬರು ಮಾಸ್ಕ್(Mask) ಹಾಕುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಇದನ್ನು ಸಮರ್ಪಕವಾಗಿ ನಿರ್ವಹಿಸಲು ಮಾರ್ಷಲ್‍ಗಳನ್ನು ನೇಮಿಸಲಾಗುವುದು ಎಂದರು. ಉಪದೇಶ ಮಾಡುವವರೇ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರುವುದು ಅತ್ಯಂತ ದುರದೃಷ್ಟಕರ. ಅದರಲ್ಲೂ ಎಲ್ಲವನ್ನೂ ತಿಳಿದವರೇ ಈ ರೀತಿ ವರ್ತಿಸುವುದು ಎಷ್ಟರ ಮಟ್ಟಿಗೆ ಸರಿ. ಪ್ರತಿಯೊಂದನ್ನೂ ಕಾನೂನು ಮೂಲಕವೇ ನಿರ್ವಹಿಸಬೇಕೆಂಬುದು ಸರಿಯಲ್ಲ. ನಾಗರಿಕ ಪ್ರಜ್ಞೆ ಇರಬೇಕು ಎಂದು ಹೇಳಿದರು.
"ಸರ್ಕಾರ ನಡೆಸೋಕೆ ಆಗಲ್ಲ ಅಂದಮೇಲೆ ಮುಖ್ಯಮಂತ್ರಿಯಾಗಿ ಯಾಕಿದೀರ"
ರಾಜ್ಯದಲ್ಲಿ ಸದ್ಯಕ್ಕೆ ಮಹಾರಾಷ್ಟ್ರ, ಕೇರಳದಂತಹ ಪರಿಸ್ಥಿತಿ ಇನ್ನೂ ಬಂದಿಲ್ಲ. ದಯವಿಟ್ಟು ಸಾರ್ವಜನಿಕರು ಇನ್ನು ಮುಂದಾದರೂ ಗುಂಪುಗೂಡದೆ ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಪಾಡುವುದು ಅವಶ್ಯವಾಗಿದೆ ಎಂದರು.ಈಗತಾನೇ ಲಾಕ್‍ಡೌನ್(Lockdown) ಪರಿಸ್ಥಿತಿಯಿಂದ ಪ್ರತಿಯೊಬ್ಬರು ಸುಧಾರಿಸಿಕೊಂಡಿದ್ದಾರೆ.ಪುನಃ ಅಂತಹ ಪರಿಸ್ಥಿತಿಯನ್ನು ಯಾರೂ ನಿರ್ಮಾಣ ಮಾಡಬಾರದು. ಸರ್ಕಾರದ ಮಾರ್ಗಸೂಚಿಯನ್ನು ಪಾಲನೆ ಮಾಡಲೇಬೇಕು. ಎಲ್ಲದಕ್ಕೂ ಉದಾಸೀನ ಮಾಡಿದರೆ ಇದನ್ನು ನಿಯಂತ್ರಿಸುವುದು ಹೇಗೆ ಎಂದು ಪ್ರಶ್ನಿಸಿದರು.
Heavy Rainfall: ರಾಜ್ಯದಲ್ಲಿ ವರುಣನ ಅಬ್ಬರ: ಉಡುಪಿಯಲ್ಲಿ ಭಾರೀ ಮಳೆ..!
ಇನ್ನು ಮುಂದೆ ಹೋಟೆಲ್(Hotel)ಗಳಲ್ಲಿ ಅಡುಗೆ ಮಾಡುವವರು, ರೆಸಾರ್ಟ್, ಹೋಟೆಲ್, ಚೌಲ್ಟ್ರಿ ಮತ್ತಿತರ ಕಡೆಯೂ ನಿಗಾ ವಹಿಸಲಾಗುವುದು ಎಂದು ಹೇಳಿದರು.ರಾಜ್ಯದಲ್ಲಿ ಸದ್ಯಕ್ಕೆ ಯಾರೊಬ್ಬರು ಆತಂಕಪಡುವ ಅಗತ್ಯವಿಲ್ಲ.ಕೇರಳ, ಮಹಾರಾಷ್ಟ್ರದ ಪರಿಸ್ಥಿತಿ ಸದ್ಯ ಬಂದಿಲ್ಲ. ನಮ್ಮ ಮುಂದೆ ಲಾಕ್‍ಡೌನ್ ಮಾಡುವ ಪ್ರಸ್ತಾವನೆಯೂ ಇಲ್ಲ. ಇದನ್ನು ಅರ್ಥ ಮಾಡಿಕೊಂಡು ಪ್ರತಿಯೊಬ್ಬರು ಮುನ್ನಡೆಯಬೇಕು. ಉದಾಸೀನ ತೋರಿದರೆ ಸರ್ಕಾರ ಏನೂ ಮಾಡಲು ಸಾಧ್ಯವಿಲ್ಲ. ಇದಕ್ಕೆ ನೀವೇ ಜವಾಬ್ದಾರರಾಗುತ್ತಾರೆ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ಕೊಟ್ಟರು.
DK Shivakumar: ಕೈ ತೊರೆದು ಕಮಲ ಸೇರಿದವರಿಗೆ ಮರಳಿ ಕಾಂಗ್ರೆಸ್ ಗೆ ಆಹ್ವಾನ ನೀಡಿದ ಡಿಕೆಶಿ!
ನೆರೆಯ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರು 72 ಗಂಟೆ ಮುಂಚೆ ಆರ್‍ಟಿಪಿಸಿಆರ್(RTPCR) ಪರೀಕ್ಷೆ ಮಾಡಿಸಿರುವ ವೈದ್ಯಕೀಯ ಪ್ರಮಾಣಪತ್ರವನ್ನು ಹೊಂದಿರಬೇಕು. ನಾವು ಯಾವುದೇ ಪ್ರಯಾಣಿಕರಿಗೂ ರಾಜ್ಯಕ್ಕೆ ಬರಬೇಡಿ ಎಂದುನಿರ್ಬಂಧ ಹಾಕಿಲ್ಲ. ಬರುವವರಿಗೆ ಮಾತ್ರ ಪರೀಕ್ಷೆ ಕಡ್ಡಾಯ ಎಂದು ಹೇಳಿರುವುದಾಗಿ ಸ್ಪಷ್ಟಪಡಿಸಿದರು.
Siddaramaiah: 'ದುಡ್ಡಿಲ್ಲ ಅಂದ್ರೆ ಕುರ್ಚಿ ಬಿಟ್ಟು ಇಳಿಯಪ್ಪ ಯಡಿಯೂರಪ್ಪ, ನಾವ್ಯಾರಾದ್ರೂ ಬರ್ತೀವಿ'
ನಮ್ಮ ರಾಜ್ಯದಿಂದ ಬೇರೆ ರಾಜ್ಯಗಳಿಗೆ ಹೋಗುವವರು ಪರೀಕ್ಷೆ(Test) ಮಾಡಿಸಿಕೊಳ್ಳುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಇಂದು ಮತ್ತು ನಾಳೆಯೊಳಗೆ ಸಮಯಾವಕಾಶ ಸಿಕ್ಕ ತಕ್ಷಣ ಕೇರಳ ಮತ್ತು ಮಹಾರಾಷ್ಟ್ರ ಆರೋಗ್ಯ ಸಚಿವರೊಂದಿಗೆ ಚರ್ಚಿಸಲಾಗುವುದು. ಆ ರಾಜ್ಯದಿಂದ ಬರುವ ವಾಹನಗಳು, ಪ್ರಯಾಣಿಕರ ಮೇಲೆ ನಿಗಾವಹಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಇದು ಅನಿವಾರ್ಯ ಎಂದು ಸಮರ್ಥಿಸಿಕೊಂಡರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.