Heavy Rainfall: ರಾಜ್ಯದಲ್ಲಿ ವರುಣನ ಅಬ್ಬರ: ಉಡುಪಿಯಲ್ಲಿ ಭಾರೀ ಮಳೆ..!

ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಭಾನುವಾರ ಅಕಾಲಿಕ ಮಳೆ

Last Updated : Feb 21, 2021, 05:47 PM IST
  • ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಭಾನುವಾರ ಅಕಾಲಿಕ ಮಳೆ
  • ಮಧ್ಯಾಹ್ನ 2 ಗಂಟೆ ಸುಮಾರಿಗೆ ಆರಂಭಗೊಂಡ ವರುಣನ ಅಬ್ಬರ
  • ಒಂದು ಗಂಟೆಗೂ ಅಧಿಕ ಕಾಲ ಎಡೆಬಿಡದೆ ಸುರಿದ ಮಳೆ
Heavy Rainfall: ರಾಜ್ಯದಲ್ಲಿ ವರುಣನ ಅಬ್ಬರ: ಉಡುಪಿಯಲ್ಲಿ ಭಾರೀ ಮಳೆ..! title=

ಉಡುಪಿ: ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಭಾನುವಾರ ಮಧ್ಯಾಹ್ನ ವೇಳೆ ದಿಢೀರ್‌ ಆಗಿ ಅಕಾಲಿಕ ಮಳೆಯಾಗಿದೆ‌.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಆರಂಭಗೊಂಡ ವರುಣನ ಅಬ್ಬರ(Heavy Rainfall) ಒಂದು ಗಂಟೆಗೂ ಅಧಿಕ ಕಾಲ ಎಡೆಬಿಡದೆ ಸುರಿದಿದೆ.

DK Shivakumar: ಕೈ ತೊರೆದು ಕಮಲ ಸೇರಿದವರಿಗೆ ಮರಳಿ ಕಾಂಗ್ರೆಸ್ ಗೆ ಆಹ್ವಾನ ನೀಡಿದ ಡಿಕೆಶಿ!

ಉಡುಪಿ ನಗರ, ಮಣಿಪಾಲ, ಬ್ರಹ್ಮಾವರ, ಕುಂದಾಪುರ(Kundapura), ಕಾಪು, ಕಾರ್ಕಳ, ಹೆಬ್ರಿ ತಾಲೂಕಿನ ವಿವಿಧೆಡೆ ಅಕಾಲಿಕ ಮಳೆಯಾಗಿರುವ ವರದಿಯಾಗಿದೆ. ಅಕಾಲಿಕ ಮಳೆಗೆ ಸಿಲುಕಿದ ದ್ವಿಚಕ್ರ ವಾಹನ ಸವಾರರು ಹಾಗೂ ಸಾರ್ವಜನಿಕರು ಮನೆಗೆ ತೆರಳಲು ಪರದಾಡುವಂತಾಯಿತು.

Siddaramaiah: 'ದುಡ್ಡಿಲ್ಲ ಅಂದ್ರೆ ಕುರ್ಚಿ ಬಿಟ್ಟು ಇಳಿಯಪ್ಪ ಯಡಿಯೂರಪ್ಪ, ನಾವ್ಯಾರಾದ್ರೂ ಬರ್ತೀವಿ'

ಭಾನುವಾರ ರಜಾ ದಿನ ಹಾಗೂ ವಿವಿಧ ಶುಭ ಸಮಾರಂಭಗಳಿದ್ದು, ಮಧ್ಯಾಹ್ನದ ಅಕಾಲಿಕ ಮಳೆಯಿಂದಾಗಿ ಕೆಲವೆಡೆ ಸಮಸ್ಯೆಯಾಗಿದೆ. ಸಾರ್ವಜನಿಕ(Public)ರು‌ ಮಳೆಯಲ್ಲಿ ನೆನೆದುಕೊಂಡು ಹೋಗುತ್ತಿರುವ ದೃಶ್ಯ ನಗರದ ಅಲ್ಲಲ್ಲಿ ಕಂಡುಬಂತು.

ಪಂಚಮಸಾಲಿ 2A ಮೀಸಲಾತಿ: -ಸ್ವಾಮೀಜಿಗಳಿಗೆ ಮಾತುಕತೆಗೆ ಬನ್ನಿ ಬಸವರಾಜ್‌ ಬೊಮ್ಮಾಯಿ

ಉಡುಪಿಯಲ್ಲಿ ದಿಢೀರ್ ಆಗಿ ಮಳೆಯಾಗಿದೆ. ಬೆಳಿಗ್ಗಿನಿಂದ ಬಿಸಿಲಿನಿಂದ ಕೂಡಿದ್ದ ವಾತಾವರಣ ಮಧ್ಯಾಹ್ನ ಆಗುತ್ತಿದ್ದಂತೆ ಮೋಡದಿಂದ ಮುಸುಕಿದೆ. ಉಡುಪಿ(Udupi) ನಗರ ಸಹಿತ ಮಣಿಪಾಲ, ಬ್ರಹ್ಮಾವರ, ಕುಂದಾಪುರ, ಕಾಪು, ಕಾರ್ಕಳ, ಹೆಬ್ರಿ ತಾಲೂಕಿನ ಹಲವೆಡೆ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

ಮಹಾರಾಷ್ಟ್ರದಿಂದ ಬರುವವರ COVID-19 RT-PCR report ಸಲ್ಲಿಕೆ ಕಡ್ಡಾಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News