ಮೈಸೂರು : ರೈತರ ದೃಷ್ಟಿಯಿಂದ ಈ ಕಾರ್ಯಾಗಾರ ಅತ್ಯಂತ ಮಹತ್ವದ್ದು. ಆಣೆಕಟ್ಟೆಗಳ ಧೀರ್ಘಾವಧಿ ಸುರಕ್ಷತೆ, ಬಲವರ್ಧನೆ ದೃಷ್ಟಿಯಿಂದ ಗೋಷ್ಠಿ ಆಯೋಜನೆ ಮಾಡಲಾಗಿದೆ. ಅನೇಕ ನೀರಾವರಿ ತಜ್ಞರು ನಿಮಗೆ ಸಾಕಷ್ಟು ಸಲಹೆ ನೀಡಲಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ನಗರದ KRSನ ಖಾಸಗಿ ಸಮುದಾಯ ಭವನದಲ್ಲಿ ನಡೆಯುತ್ತಿರುವ ಒಂದು ದಿನದ ವಿಚಾರ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಸಚಿವ ಕಾರಜೋಳ, ಮೈಸೂರು ಅರಸರನ್ನ ನಾವು ಸ್ಮರಿಸಲೇ ಬೇಕು. ದೇಶದ ಅಭಿವೃದ್ಧಿಯಲ್ಲಿ ಮುಂಚೂಣೆಯಲ್ಲಿ ಇರುವವರು ನಾಲ್ವಡಿ ಕೃಷ್ಣರಾಜ ಒಡೆಯರ್, ನೀರಾವರಿ, ಶಿಕ್ಷಣ, ಔದ್ಯೋಗಿಕ ಕ್ಷೇತ್ರದ ಸಾಧನೆ ಮೈಲಿಗಲ್ಲು. ಅದನ್ನ ಉಳಿಸಿಕೊಂಡು ಹೋಗುವುದೇ ನಮ್ಮ ಸಾಮಾಜಿಕ ಹೊಣೆಗಾರಿಕೆ. ಇವತ್ತು 231 ಡ್ಯಾಂಗಳು ರಾಜ್ಯದಲ್ಲಿವೆ. ಇನ್ನು 10 ಲಕ್ಷ ಹೆಕ್ಟೇರ್ ಗೆ ನೀರಾವರಿ ಒದಗಿಸುವ ಅವಶ್ಯಕತೆ ಇದೆ. ನೀರಾವರಿ ಯೋಜನೆ ಪೂರ್ಣಗೊಳಿಸಿದರೆ ಬಡತನ ನಿರ್ಮೂಲನೆ. ಈಗಾಗಲೇ ಕಾವೇರಿ ಬೇಸನ್ನಿನ್ನಲ್ಲಿ ನೀರಾವರಿ ಯೋಜನೆ ಪೂರ್ಣವಾಗಿದೆ. ನೀರು ಹಂಚಿಕೆಗೆ, ಯೋಜನೆ ಜಾರಿಗೆ ನೆರೆ ರಾಜ್ಯಗಳಿಂದ ತೊಡಕು. ಆದರೂ ಅದನ್ನ ಮೆಟ್ಟಿನಿಂತು ಯೋಜನೆ ಅನುಷ್ಠಾನಕ್ಕೆ ಕ್ರಮ. ನ್ಯಾಯಾಲಯದಲ್ಲಿರುವ ಯೋಜನೆ ಇತ್ಯರ್ಥಕ್ಕೂ ನಮ್ಮ ಸರ್ಕಾರ ಬದ್ಧ. ಮನುಷ್ಯನ ದುರಾಸೆಯಿಂದ ಅಣೆಕಟ್ಟೆ, ನಾಲೆಗಳು, ಹಳ್ಳ-ಕೊಳ್ಳಗಳ ಒತ್ತುವರಿ. ಇದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಪ್ರತಿಯೊಬ್ಬರೂ ಒತ್ತುವರಿ ತೆರವಿಗೆ ಸಹಕರಿಸಬೇಕು. ಜಲಮೂಲ ಕಲುಷಿತಗೊಳಿಸೋದನ್ನ ನಿಲ್ಲಿಸಬೇಕು. ಕೈಗಾರಿಕೆಗಳಿಂದಲೂ ಕಲುಷಿತ ನೀರು ಬಿಡುಗಡೆಗೆ ಕಡಿವಾಣ ಅಗತ್ಯ. ಈ ಕಾರ್ಯಾಗಾರ ಯಶಸ್ವಿಯಾಗಲಿ ಎಂದರು.


ಇದನ್ನೂ ಓದಿ : ಪೋಷಕರಿಗೆ ಮತ್ತೊಂದು ದರ ಏರಿಕೆ ಬಿಸಿ : ವಾಹನ ಶುಲ್ಕ ಹೆಚ್ಚಳಕ್ಕೆ ಖಾಸಗಿ ಶಾಲೆಗಳ ನಿರ್ಧಾರ


ಮುಂದುವರೆದು ಮಾತನಾಡಿದ ಅವರು, ಮಳೆ ಹಾನಿ, ಅತೀವೃಷ್ಟಿ ಸಂಬಂಧ ಸಿಎಂ ಮಧ್ಯಾಹ್ನ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸುವ, ನಿರ್ವಹಣೆ ಬಗ್ಗೆ ಚರ್ಚೆ ಮಾಡಲಾಗುತ್ತೆ. ಕಾವೇರಿ ತಾಯಿ ಈ ಬಾರಿ ಕರುಣೆ ತೋರಿದ್ದಾರೆ. ಇನ್ನು ನಾಲ್ಕೈದು ದಿನಗಳಲ್ಲಿ ಅಣೆಕಟ್ಟು ಭರ್ತಿಯಾಗಲಿದೆ. ಮುಂದಿನ ವಾರ ಬಾಗಿನ ಅರ್ಪಿಸಲು ಕ್ರಮವಹಿಸುತ್ತೇವೆ. ಈ ಬಗ್ಗೆ ಸಿಎಂ ಜೊತೆ ಚರ್ಚಿಸುತ್ತೇನೆ. KRS ಡ್ಯಾಂನ ಬದಲಾವಣೆ ಕಾಮಗಾರಿ ಪ್ರಗತಿಯಲ್ಲಿದೆ. ಅದನ್ನ ಬೇಗ ಮುಗಿಸಿ, ನೀರು ಸೋರಿಕೆ ತಡೆಗಟ್ಟಲಾಗುವುದು.80 ವರ್ಷದ ಹಳೇ ಗೇಟುಗಳಾದ್ರಿಂದ ಅವುಗಳನ್ನ ಬದಲಿಸುವ ಅವಶ್ಯಕತೆ ಇತ್ತು. ಹೀಗಾಗಿ 58 ಕೋಟಿ ವೆಚ್ಚದಲ್ಲಿ ಗೇಟ್ ಗಳ ಬದಲಾವಣೆ. ಹಳೇ ಗೇಟ್ ಗಳನ್ನ ಮಾರಾಟ ಮಾಡಬಾರದು. ಅದನ್ನ ಮ್ಯೂಸಿಯಂ ಮಾಡಿ ಸಂಗ್ರಹಿಸಿಡುವಂತೆ ಸಲಹೆ ಕೊಟ್ಟಿದ್ದೇನೆ. ಇವತ್ತು ನೀರಿಗಾಗಿ ರಾಜ್ಯ ರಾಜ್ಯಗಳ ನಡುವೆ ಘರ್ಷಣೆ ನಡೀತ್ತಿದೆ. ಹೀಗಾಗಿ ನೀರು ಪೋಲಾಗದಂತೆ, ಸೋರಿಕೆಯಾಗದಂತೆ ತಡೆಯೋದು ಎಲ್ಲರ ಜವಾಬ್ದಾರಿ. ಈ ಬಗ್ಗೆ ಎಲ್ಲರೂ ಕ್ರಮ ವಹಿಸಬೇಕು. ಪ್ರವಾಹ ಸಂದರ್ಭದಲ್ಲಿ ಉಂಟಾಗಬಹುದಾದ ಪ್ರತಿಕೂಲ ಪರಿಣಾಮಗಳ ನಿರ್ವಹಣೆ ಕುರಿತು ಪಾಲುದಾರರ ಪಾತ್ರದ ಬಗ್ಗೆ ಅರಿವು ಮೂಡಿಸುವುದು ಈ ಕಾರ್ಯಾಗಾರದ ಉದ್ದೇಶ ಎಂದು ಹೇಳಿದ್ದಾರೆ. 


ಇದನ್ನೂ ಓದಿ : ಎಸಿಬಿ ರದ್ದುಗೊಳಿಸಿ ಲೋಕಾಯುಕ್ತ ಮುಂದುವರೆಯಲಿ: ಭಾಸ್ಕರ್ ರಾವ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ