ಪೋಷಕರಿಗೆ ಮತ್ತೊಂದು ದರ ಏರಿಕೆ ಬಿಸಿ : ವಾಹನ ಶುಲ್ಕ ಹೆಚ್ಚಳಕ್ಕೆ ಖಾಸಗಿ ಶಾಲೆಗಳ ನಿರ್ಧಾರ

 ಈಗ ಮತ್ತೆ ಮೊದಲಿನಂತೆ ಎಲ್ಲಾ ಶಾಲಾ ಕಾಲೇಜುಗಳು ಕಾರ್ಯಾರಂಭ ಮಾಡಿವೆ. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಶಾಲಾ ವಾಹನಗಳತ್ತ ಮುಖ ಮಾಡುವುದು ಕೂಡಾ ಪೋಷಕರಿಗೆ ಅನಿವಾರ್ಯ

Written by - Ranjitha R K | Last Updated : Jul 8, 2022, 09:52 AM IST
  • ಬೆಲೆ ಏರಿಕೆ ಬಿಸಿ ಜನಸಾಮಾನ್ಯನ ಜೇಬು ಸುಡುತ್ತಿದೆ.
  • ದುಬಾರಿ ದುನಿಯಾದಲ್ಲಿ‌ ಪೋಷಕರ ಜೇಬಿಗೆ ಮತ್ತೆ ಕತ್ತರಿ ಬಿದ್ದಿದೆ.
  • ಖಾಸಗಿ ಶಾಲೆಗಳು ವಾಹನ ಶುಲ್ಕ ಹೆಚ್ಚಳ ಮಾಡಲು ನಿರ್ಧಾರ ಮಾಡಿವೆ.
ಪೋಷಕರಿಗೆ ಮತ್ತೊಂದು ದರ ಏರಿಕೆ ಬಿಸಿ :  ವಾಹನ ಶುಲ್ಕ ಹೆಚ್ಚಳಕ್ಕೆ  ಖಾಸಗಿ ಶಾಲೆಗಳ ನಿರ್ಧಾರ  title=
School bus price hike (file photo)

ಬೆಂಗಳೂರು : ಬೆಲೆ ಏರಿಕೆ ಬಿಸಿ ಜನಸಾಮಾನ್ಯನ ಜೇಬು ಸುಡುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆ, ಇದೀಗ ಬಸ್ ದರ ಹೆಚ್ಚಳ, ವಾಹನ ಶುಲ್ಕ ಹೆಚ್ಚಳ ಮುಂತಾದವುಗಳಿಂದ ಜನ ಕಂಗಾಲಾಗುವಂತೆ ಮಾಡಿದೆ. ಈ ದುಬಾರಿ ದುನಿಯಾದಲ್ಲಿ‌ ಪೋಷಕರ ಜೇಬಿಗೆ ಮತ್ತೆ ಕತ್ತರಿ ಬಿದ್ದಿದೆ. ಖಾಸಗಿ ಶಾಲೆಗಳು ವಾಹನ ಶುಲ್ಕ ಹೆಚ್ಚಳ ಮಾಡಲು ನಿರ್ಧಾರ ಮಾಡಿವೆ.   

ಕಳೆದ ಎರಡು ವರ್ಷಗಳಿಂದ ಕರೋನಾ ಹಿನ್ನೆಲೆಯಲ್ಲಿ ಆನ್ಲೈನ್ ತರಗತಿಗಳು ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಶಾಲಾ ವಾಹನದ ಅಗತ್ಯ ಯಾರಿಗೂ ಇರಲಿಲ್ಲ. ಈಗ ಮತ್ತೆ ಮೊದಲಿನಂತೆ ಎಲ್ಲಾ ಶಾಲಾ ಕಾಲೇಜುಗಳು ಕಾರ್ಯಾರಂಭ ಮಾಡಿವೆ. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಶಾಲಾ ವಾಹನಗಳತ್ತ ಮುಖ ಮಾಡುವುದು ಕೂಡಾ ಪೋಷಕರಿಗೆ ಅನಿವಾರ್ಯ. ಆದರೆ ಶಾಲಾ ವಾಹನಗಳ ಶುಲ್ಕ ಏರಿಕೆ ಮಾಡಲು ಖಾಸಗಿ  ಶಾಲೆಗಳು ನಿರ್ಧಾರ ಮಾಡಿವೆ. 

ಇದನ್ನೂ ಓದಿ : ಧಾರವಾಡದಲ್ಲಿ ಅಗಸ್ಟ್ 13 ಹಾಗೂ 14 ರಂದು ವಿಶ್ವದ ಬೃಹತ್ ಯೋಗಾಥಾನ್

ಡೀಸೆಲ್‌, ವಾಹನದ ಬಿಡಿ ಭಾಗಗಳು, insurance, ಸರ್ವಿಸ್ ಚಾರ್ಜ್ ಎಲ್ಲವೂ  ದುಬಾರಿಯಾಗಿರುವ ಕಾರಣ  ಶಾಲಾ ವಾಹನ ದರ ಏರಿಕೆ ಮಾಡುವುದು ಅನಿವಾರ್ಯ ಎಂಬ  ತೀರ್ಮಾನ ಖಾಸಗಿ ಶಾಲೆಗಳದ್ದು . ಈ ನಿಟ್ಟಿನಲ್ಲಿ  ಸಭೆ ನಡೆಸಿರುವ ಖಾಸಗಿ ಶಾಲೆಗಳು  ದರ ಏರಿಕೆ ಮಾಡಲು ತೀರ್ಮಾನಿಸಿವೆ. ಪ್ರತಿ ಶಾಲೆಯಲ್ಲಿ 15 ರಿಂದ‌‌ 20ರಷ್ಟು ವಾಹನ ಶುಲ್ಕ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. 

ಖಾಸಗಿ ಶಾಲೆಗಳ ಈ‌ ನಿರ್ಧಾರಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ.  ಈಗಾಗಲೇ ಖಾಸಗಿ ಶಾಲೆಯಗಳು ಶುಲ್ಕವನ್ನು ಕೂಡಾ ಜಾಸ್ತಿ ಮಾಡಲು ಮುಂದಾಗಿವೆ. ಕಳೆದ ಎರಡು ವರ್ಷದಿಂದ ಕೊರೊನಾದಿಂದ ಸಂಕಷ್ಟ ಎದುರಾಗಿದೆ. ಈಗಷ್ಟೇ ಚೇತರಿಕೆ ಕಾಣುತ್ತಿದ್ದು, ಈ ಸಂದರ್ಭದಲ್ಲಿ ಶಾಲಾ ವಾಹನಗಳ ದರ ಏರಿಕೆ ಮಾಡುವುದು ಬೇಡ ಎನ್ನುವುದು ಪೋಷಕರ ಅಭಿಪ್ರಾಯ. ಮುಂದಿನ ವರ್ಷ ಶುಲ್ಕ ಹೆಚ್ಚಳ ಮಾಡಿದರೆ ಸೂಕ್ತ ಎನ್ನುತ್ತಿರುವ ಪೋಷಕರು, ದರ ಜಾಸ್ತಿ ಮಾಡುವ ಖಾಸಗಿ ಶಾಲೆಗಳ ವಿರುದ್ಧ ಸರ್ಕಾರ ಕ್ರಮಕ್ಕೆ ಮುಂದಾಗಬೇಕು ಎಂದು‌ ಒತ್ತಾಯಿಸಿದ್ದಾರೆ. 

ಇದನ್ನೂ ಓದಿ : 'ಪಿಎಸ್ಐ ಅಕ್ರಮ ನೇಮಕ ಪ್ರಕರಣದ ಎಲ್ಲಾ ಬಂಧಿತರಿಂದ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿ'

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News