ಬೆಂಗಳೂರು : ದೇಶದ ಕೆಲವು ರಾಜ್ಯಗಳಲ್ಲಿ H3N2 ವೇರಿಯಂಟ್  ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಂದು ತಜ್ಞ ವೈದ್ಯರೊಂದಿಗೆ ಸರ್ಕಾರ ಸಭೆ ನಡೆಸಿದೆ. ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ  ಸುಧಾಕರ್,  
ಕೆಲವು ದಿನಗಳಿಂದ H3N2 ಪ್ರಕರಣಗಳು ದೇಶದಲ್ಲಿ ವರದಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆತಂಕ ಇರುವುದರಿಂದ ಸಭೆ ನಡೆಸಿದ್ದೇವೆ. ಆದರೆ ಗಾಬರಿ ಪಡುವ ಯಾವುದೇ ಸ್ಥಿತಿ ನಿರ್ಮಾಣವಾಗಿಲ್ಲ ಎಂದಿದ್ದಾರೆ. ಮುಂಜಾಗ್ರತಾ ಕ್ರಮ‌ವಹಿಸಬೇಕು ಎನ್ನುವುದನ್ನು ಕೂಡಾ ಸಚಿವರಿ ಇದೇ ವೇಳೆ ಸೂಚಿಸಿದ್ದಾರೆ. 


COMMERCIAL BREAK
SCROLL TO CONTINUE READING

ಇಂದು  H3N2 ಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡುವುದಾಗಿ ಸಚಿವರು ಹೇಳಿದ್ದಾರೆ. H3N2 ರೋಗಲಕ್ಷಣಗಳು ಕೋವಿಡ್ ರೀತಿಯಲ್ಲೇ ಇದ್ದು, ಕೋವಿಡ್ ಗೆ ಕೊಡುತ್ತಿದ್ದ ಚಿಕಿತ್ಸೆಯನ್ನೇ ಮುಂದುವರೆಸುತ್ತಿರುವುದಾಗಿ ತಿಳಿಸಿದ್ದಾರೆ. 


ಇದನ್ನೂ ಓದಿ : ಕೇವಲ 700 ಗ್ರಾಂ ಮಗುವಿಗೆ ಮರುಜನ್ಮ ನೀಡಿದ ಗದಗ ಜಿಮ್ಸ್ ವೈದ್ಯರು


ಆರೋಗ್ಯ ಸಚಿವರು ಹೇಳಿದ್ದೇನು ? : 
1. ಎಲ್ಲಾ ಹೆಲ್ತ್ ಕೇರ್ ಸಿಬ್ಬಂದಿ ಕಡ್ಡಾಯವಾಗಿ ಇನ್ನು ಮುಂದೆ ಮಾಸ್ಕ್ ಧರಿಸಬೇಕು
2. ಆರೋಗ್ಯ ಸಿಬ್ಬಂದಿ ಕಡ್ಡಾಯವಾಗಿ ವ್ಯಾಕ್ಸೀನ್ ತೆಗೆದುಕೊಳ್ಳಬೇಕು. ವರ್ಷದಲ್ಲಿ ಒಂದು  ಬಾರಿ ಲಸಿಕೆ ಪಡೆಯುವುದು ಕಡ್ಡಾಯ.
3.ಸರ್ಕಾರದಿಂದಲೇ ವ್ಯಾಕ್ಸಿನೇಷನ್‌ ಕೊಡಲಾಗುವುದು. 
4. ಕೇಂದ್ರ ಸರ್ಕಾರ ಪ್ರತಿವಾರ 25 ಟೆಸ್ಟ್ ಮಾಡಲು ಸೂಚಿಸಿದೆ.
5. ಸ್ಯಾರಿ, ILR ಟೆಸ್ಟ್ ಮಾಡಲು ಸೂಚಿಸಿದೆ
6. 15 ವರ್ಷದ ಕೆಳಗಿನ ಮಕ್ಕಳಿಗೆ ಈ ವೇರಿಯೆಂಟ್ ಅಪಾಯ ಇದೆ, ಮಕ್ಕಳು ಶಾಲೆಗಳಲ್ಲಿ ಒಟ್ಟಿಗೆ  ಕುಳಿತುಕೊಳ್ಳುವುದರಿಂದ  ಅಪಾಯ ಹೆಚ್ಚು.
7. 65 ವರ್ಷ ಮೇಲ್ಪಟ್ಟ ವಯೋವೃದ್ದರು, ಗರ್ಭಿಣಿಯರಿಗೂ ಇದೆ ಅಪಾಯ. 
8. ಶುಚಿತ್ವಕ್ಕೆ ಹೆಚ್ಚು ಮಹತ್ವ ಕೊಡಬೇಕು, ಸೀನುವಾಗ ಕೆಮ್ಮುವಾಗ ಮಾಸ್ಕ್ ಹಾಕಬೇಕು, ಸಾರ್ವಜನಿಕ ಅಂತರ ಕಾಪಾಡಬೇಕು
9. ಸೋಂಕು ಬಂದಿರುವವರು ಅಂಟಿ ಬಯೋಟಿಕ್ಸ್ ತೆಗೆದುಕೊಳ್ತಿದ್ದಾರೆ. ಈ ಕ್ರಮ   ಸರಿಯಲ್ಲ.
10. ತಮ್ಮ ವೈಯಕ್ತಿಕ ಚಿಕಿತ್ಸೆ ಮಾಡುವ ಬದಲು ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ಸಲಹೆ.


ಇದನ್ನೂ ಓದಿ : ಕೋವಿಡ್ ಬಳಿಕ ದೇಶದಲ್ಲಿ ಮತ್ತೊಂದು ವೈರಸ್ ಕಾಟ : ಇಂದು ಗೈಡ್ ಲೈನ್ಸ್ ಬಿಡುಗಡೆ ಸಾಧ್ಯತೆ


ಫೆಬ್ರವರಿಯಿಂದಲೇ ತಾಪಮಾನ ಹೆಚ್ಚಾಗಿದೆ. ಬಿಸಿಲಿನ ತಾಪಮಾನಕ್ಕೆ ಜನ ಬಳಲುತ್ತಿದ್ದಾರೆ. ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ವರೆಗೆ ಬಿಸಿಲಿನಲ್ಲಿ ಹೋಗೋದು ಕಡಿಮೆ ಮಾ ಡುವಂತೆ ಅವರು ಮನವಿ ಮಾಡಿದ್ದಾರೆ.  ಅಲ್ಲದೆ, ಬೇಸಿಗೆಯಲ್ಲಿ ಹೆಚ್ಚು ನೀರನ್ನು ಸೇವಿಸಬೇಕು. ಕನಿಷ್ಠ 2-3 ಲೀಟರ್ ನೀ ರು ಸೇವಿಸಬೇಕು. ಅದರಲ್ಲೂ ಎಳನೀರು, ಮಜ್ಜಿಗೆ ಸೇವಿಸುವುದು ಉತ್ತಮ ಎಂದಿದ್ದಾರೆ. 
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.