ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರಸ್ತೆಗಳಲ್ಲಿ ವಜ್ರ, ವೈಡೂರ್ಯ ಮಾರಾಟ ಮಾಡ್ತಿದ್ರು: ಈಶ್ವರಪ್ಪ ವ್ಯಂಗ್ಯ
ಸಿದ್ದರಾಮಯ್ಯ CM ಅಗಿದ್ದ ಕಾಲದಲ್ಲಿ ವಜ್ರ, ವೈಡೂರ್ಯಗಳು ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದರು. ಯಾರ ಮನೆಗೂ ಬೀಗ ಹಾಕ್ತಾ ಇರಲಿಲ್ಲ. ಆಗ ಇಡೀ ರಾಜ್ಯವೇ ವಿಜಯನಗರ ಸಾಮ್ರಾಜ್ಯ ಅಗಿತ್ತು’ ಅಂತಾ ವ್ಯಂಗ್ಯವಾಡಿದ್ದಾರೆ.
ಬೆಂಗಳೂರು: ರಾಜ್ಯ ಸರ್ಕಾರ(BJP Government) ಸಾಲದಲ್ಲಿ ಮುಳುಗಿದೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa)ತಿರುಗೇಟು ನೀಡಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಸಿದ್ದರಾಮಯ್ಯ ಮುಖ್ಯಮಂತ್ರಿ ಅಗಿದ್ದ ಕಾಲದಲ್ಲಿ ವಜ್ರ, ವೈಡೂರ್ಯಗಳು ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದರು. ಯಾರ ಮನೆಗೂ ಬೀಗ ಹಾಕ್ತಾ ಇರಲಿಲ್ಲ. ಆಗ ಇಡೀ ರಾಜ್ಯವೇ ವಿಜಯನಗರ ಸಾಮ್ರಾಜ್ಯ ಅಗಿತ್ತು’ ಅಂತಾ ವ್ಯಂಗ್ಯವಾಡಿದ್ದಾರೆ.
ಸರ್ಕಾರದಲ್ಲ ಈಗ ಮಾತ್ರ ಸಾಲ ಮಾಡ್ತಿರೋದಾ..? ಸಿದ್ದರಾಮಯ್ಯ(Siddaramaiah) ಸಿಎಂ ಅಗಿದ್ದಾಗ 1 ರೂ. ಸಾಲವನ್ನೂ ಮಾಡಿಲ್ಲವೆಂದು ಬಹಿರಂಗವಾಗಿ ಹೇಳಲಿ. ಸರ್ಕಾರ ಅಂದರೆ ಸಾಲ ಮಾಡೋದು ಇರುತ್ತೇ.. ಸಾಲ ತೀರಿಸೋದು ಇರುತ್ತೆ. ಅರ್ಥ ಸಚಿವರಾಗಿದ್ದ ಅವರಿಗೆ ನಾನು ಹೇಳೋಕೆ ಅಗುತ್ತಾ? ಅವರೇ ಅರ್ಥ ಮಾಡ್ಕೋಬೇಕು. LKG ಸ್ಟೂಡೆಂಟ್ ಅಗಿರೋ ಸಿದ್ದರಾಮಯ್ಯರಿಗೆ ಪಾಠ ಹೇಳೋಕೆ ನಾನು LKG ಟೀಚರ್ ಅಲ್ಲ ಅಂತಾ ಕುಟುಕಿದ್ದಾರೆ.
ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರ ಬಳಿ ಬಿಜೆಪಿ ಬಿಟ್ಟು ಬರುವ ಶಾಸಕರ, ಸಚಿವರ ಪಟ್ಟಿ ಇದೆ: ಜಿ.ಪರಮೇಶ್ವರ್ ಹೊಸ ಬಾಂಬ್
ಸಿದ್ದರಾಮಯ್ಯ ಸಾಲ ಮಾಡದೇ ಅಡಳಿತ ನಡೆಸಿದ್ದರೆ ಯಾಕೇ ಸೋಲಬೇಕಿತ್ತು? ಯಾಕೇ ಸರ್ಕಾರ ಕಳೆದುಕೊಂಡ್ರೀ..? ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾಕೇ ಸೋತ್ರಿ..? ಸಿಎಂ ಸ್ಥಾನವನ್ನು ಏಕೆ ಕಳೆದುಕೊಂಡ್ರೀ....? ಅಂತಾ ಪ್ರಶ್ನಿಸಿರುವ ಈಶ್ವರಪ್ಪ(KS Eshwarappa), ಸೋತ ಮೇಲೆ ಬಹಳ ಪಾಠ ಹೇಳೋ ಅಭ್ಯಾಸ ಸಿದ್ದರಾಮಯ್ಯ ಕಲಿತಿದ್ದಾರೆ ಅಂತಾ ಟೀಕಿಸಿದ್ದಾರೆ.
ಸಿದ್ದರಾಮಯ್ಯ(Siddaramaiah) ಮತ್ತು ಕಾಂಗ್ರೆಸ್(Congress) ನಾಯಕರಿಗೆ ರಾಜ್ಯದ ಜನ ಎಲ್ಲಾ ಪಾಠಗಳಿಗೆ ಉತ್ತರ ಕೊಡುತ್ತಿದ್ದಾರೆ. ಇವರ ಆಟಗಳನ್ನು ಜನ ಒಪ್ಪುವುದಿಲ್ಲ. ಸರ್ಕಾರಕ್ಕೆ ಪಾಠ ಮಾಡುವುದನ್ನು ಬಿಟ್ಟು, ತಪ್ಪುಗಳನ್ನು ಬಹಿರಂಗವಾಗಿ ತಿಳಿಸಿ ಹೋರಾಟ ಮಾಡಿ ಒಪ್ಪಿಕೊಳ್ಳುತ್ತೇವೆ. ಸುಖಾಸುಮ್ಮನೇ ರಾಜಕೀಯ ಮಾಡುವುದನ್ನು ಬಿಡಬೇಕೆಂದು ಈಶ್ವರಪ್ಪ ಹೇಳಿದ್ದಾರೆ.
ಇದನ್ನೂ ಓದಿ: ಬಿಡಿಎ ಕರ್ಮಕಾಂಡ ಮೂರೇ ದಿನದಲ್ಲಿ ದಾಖಲಾಯ್ತು 8 ಎಫ್ಐಆರ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.