ಗೆಲ್ಲುವುದಕ್ಕೆ ಸ್ವಂತ ಕ್ಷೇತ್ರವಿಲ್ಲದ ವ್ಯಕ್ತಿಗೆ ಮತ್ತೆ ಸಿಎಂ ಕನಸು: ಸಿದ್ದರಾಮಯ್ಯಗೆ ತಿವಿದ ಬಿಜೆಪಿ

2023ರಲ್ಲಿ ಕ್ಷೇತ್ರ ಬದಲಾವಣೆ ಬಗ್ಗೆ ಮಾತನಾಡಿದ್ದ ಸಿದ್ದರಾಮಯ್ಯ ನನಗೆ ಐದಾರು ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಕರೆಯುತ್ತಿದ್ದಾರೆ ಅಂತಾ ಹೇಳಿದ್ದರು. ಈ ಹೇಳಿಕೆ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ ಸಿದ್ದರಾಮಯ್ಯರನ್ನು ಲೇವಡಿ ಮಾಡಿದೆ.

Written by - Zee Kannada News Desk | Last Updated : Jan 24, 2022, 08:35 PM IST
  • ಗೆಲ್ಲುವುದಕ್ಕೊಂದು ಸ್ವಂತ ಕ್ಷೇತ್ರವಿಲ್ಲದ ವ್ಯಕ್ತಿಗೆ ಮತ್ತೆ ಮುಖ್ಯಮಂತ್ರಿಯಾಗುವ ಕನಸು
  • ಐದಾರು ಕಡೆಯಿಂದ ನನಗೆ ಕರೆ ಇದೆ ಎಂದು ಸಿದ್ದರಾಮಯ್ಯ ಮತ್ತೊಂದು ಬುರುಡೆ ಬಿಟ್ಟಿದ್ದಾರೆ
  • ಅವರಿವರನ್ನು ಬೀದಿಗೆ ತಳ್ಳುವ ಬದಲು ಪುತ್ರ ಪ್ರತಿನಿಧಿಸುವ ವರುಣಾ ಕ್ಷೇತ್ರಕ್ಕೆ ಹೋಗಬಹುದಲ್ಲವೇ?
ಗೆಲ್ಲುವುದಕ್ಕೆ ಸ್ವಂತ ಕ್ಷೇತ್ರವಿಲ್ಲದ ವ್ಯಕ್ತಿಗೆ ಮತ್ತೆ ಸಿಎಂ ಕನಸು: ಸಿದ್ದರಾಮಯ್ಯಗೆ ತಿವಿದ ಬಿಜೆಪಿ   title=
ಸಿದ್ದರಾಮಯ್ಯರನ್ನು ಲೇವಡಿ ಮಾಡಿದ ಬಿಜೆಪಿ

ಬೆಂಗಳೂರು: ಮತ್ತೊಮ್ಮೆ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಸುರಕ್ಷಿತ ಕ್ಷೇತ್ರಗಳನ್ನು ಹುಡುಕುತ್ತಿದ್ದಾರೆ. ಮುಂಬರುವ ವಿಧಾಸಭಾ ಚುನಾವಣೆ(Vidhan Sabha Election 2023)ಗೆ ಅವರು ದೇವರಾಜ್ ಅರಸು ಕ್ಷೇತ್ರ ಹುಣಸೂರಿನಿಂದ ಸ್ಪರ್ಧಿಸುತ್ತಾರೆಂಬ ವರದಿಗಳನ್ನು ಉಲ್ಲೇಖಿಸಿ ಬಿಜೆಪಿ ಟೀಕಿಸಿದೆ.

, , 2023 Election

2023ರಲ್ಲಿ ಕ್ಷೇತ್ರ(2023 Election) ಬದಲಾವಣೆ ಬಗ್ಗೆ ಮಾತನಾಡಿದ್ದ ಸಿದ್ದರಾಮಯ್ಯ ನನಗೆ ಐದಾರು ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಕರೆಯುತ್ತಿದ್ದಾರೆ ಅಂತಾ ಹೇಳಿದ್ದರು. ಈ ಹೇಳಿಕೆ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ ಸಿದ್ದರಾಮಯ್ಯ(Siddaramaiah)ರನ್ನು ಲೇವಡಿ ಮಾಡಿದೆ.

ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆ ಬಿಲ್ ಕುಲ್ ಇಲ್ಲ: ಸಚಿವ ಈಶ್ವರಪ್ಪ

‘ಗೆಲ್ಲುವುದಕ್ಕೊಂದು ಸ್ವಂತ ಕ್ಷೇತ್ರವಿಲ್ಲದ ವ್ಯಕ್ತಿಗೆ ಮತ್ತೆ ಮುಖ್ಯಮಂತ್ರಿಯಾಗುವ ಕನಸು. ಸಿದ್ದರಾಮಯ್ಯ(Siddaramaiah) ಅವರನ್ನು ಐದಾರು ಕಡೆಯಿಂದ ಯಾರೂ ಕರೆಯುತ್ತಿಲ್ಲ. ಬದಲಾಗಿ ಐದಾರು ಕಡೆಯಲ್ಲಿ ಸುರಕ್ಷಿತ ಸ್ಥಳ ಹುಡುಕುವುದಕ್ಕೆ ಸಿದ್ದರಾಮಯ್ಯನವೇ ಹೊರಟಿದ್ದಾರೆ’ ಅಂತಾ ಬಿಜೆಪಿ(Karnataka BJP) ವ್ಯಂಗ್ಯವಾಡಿದೆ.   

‘ಐದಾರು ಕಡೆಯಿಂದ ನನಗೆ ಕರೆ ಇದೆ ಎಂದು ಸಿದ್ದರಾಮಯ್ಯ(Siddaramaiah) ಮತ್ತೊಂದು ಬುರುಡೆ ಬಿಟ್ಟಿದ್ದಾರೆ. ಅಂದರೆ ಐದಾರು ಕಡೆ ನಿರಾಶ್ರಿತರ ಶಿಬಿರ ಸೃಷ್ಟಿಯಾಗಲಿದೆ. ಸಿದ್ದರಾಮಯ್ಯನವರೇ ಅವರಿವರನ್ನು ಬೀದಿಗೆ ತಳ್ಳುವ ಬದಲು ನಿಮ್ಮ ಪುತ್ರ ಪ್ರತಿನಿಧಿಸುವ ವರುಣಾ ಕ್ಷೇತ್ರ(Varuna Constituency)ಕ್ಕೆ ಹೋಗಬಹುದಲ್ಲವೇ? ಪುತ್ರ ವ್ಯಾಮೋಹವೇ? #ಬುರುಡೆರಾಮಯ್ಯ’ ಅಂತಾ ಬಿಜೆಪಿ ಕುಟುಕಿದೆ.

ಇದನ್ನೂ ಓದಿ: Anand Singh : ಆನಂದ್ ಸಿಂಗ್ ಉಸ್ತುವಾರಿ ಬದಲಾವಣೆ : ಅಭಿಮಾನಿಗಳಿಂದ ಭುಗಿಲೆದ್ದ ಆಕ್ರೋಶ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News