ಬೆಂಗಳೂರು : ಡಿಕೆ ಶಿವಕುಮಾರ್ ಎಕ್ಸ್ ಪರ್ಟ್ ಇದ್ದಾರೆ. ಏನೇ ಬಂದರೂ ಅದನ್ನು ತಿರುಚುವುದು ಅವರ ಮನಸ್ಸಲ್ಲಿ ಬಂದಿದೆ. ಅಗ್ನಿಪತ್ ಯೋಜನೆ ಇವತ್ತಿಂದಲ್ಲ, ಹತ್ತನ್ನೆರಡು ವರ್ಷಗಳಿಂದ ಯೋಜನೆ ಮಾಡಬೇಕು ಅಂತ ಯೋಚನೆ ಮಾಡಿದ್ದಾರೆ. ಈಗಾಗಲೇ ಚೀನಾ ನಮಗೆ ದೊಡ್ಡ ಸವಾಲೆಸುಯುತ್ತಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ದೊಡ್ಡಬಳ್ಳಾಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಆರ್ ಅಶೋಕ್, ಈಗಿರುವ ನಮ್ಮ ಸೈನ್ಯದ ವಯೋಮಿತಿ ಅಂದ್ರೆ ಆವರೇಜ್  40-50 ವರ್ಷ ವಯಸ್ಸು, ಯುದ್ದದಲ್ಲಿ ಚೀನಾವನ್ನು ಎದುರಿಸಲು ಯುವಕರ ಶಕ್ತಿ ಹೆಚ್ಚು ಬೇಕು. ಆ ದೃಷ್ಟಿಯಿಂದ ಈ ಅಗ್ನಿಪತ್ ಯೋಜನೆ ಮಾಡಿರೋದು. ಸೈನ್ಯಕ್ಕೆ ಎಲ್ಲಾ ತರಹದ ವಿದ್ಯಾಭ್ಯಾಸ ಮಾಡಿರುವ ಯುವಕರನ್ನು ತೆಗೆದುಕೊಳ್ಳಲಿದ್ದಾರೆ. ಅವರಿಗೆ ಎಲ್ಲಾ ರೀತಿಯ ಸರ್ಕಾರಿ ಹುದ್ದೆಗಳಲ್ಲಿ ಅವಕಾಶ ಕೊಡಬೇಕು ಅನ್ನೋದು ನನ್ನ ಅಭಿಪ್ರಾಯ. ಯಾರೋ ಹೇಳಿದ್ರು ಅಂತ ಬಿಜೆಪಿ ಆಫೀಸ್ ಕಾಯೋದು ಅನ್ನೋ ಹೇಳಿಕೆ ಸರಿಯಲ್ಲ. ಅವರ ವಿದ್ಯಾನುಸಾರ ಹಾಗೂ ಅನುಭವ ಮೂಲಕ ಎಲ್ಲಾ ರಾಜ್ಯದಲ್ಲಿ ಸರ್ಕಾರಿ ಉದ್ಯೋಗ ನೀಡಬೇಕು ಎಂದರು.


ಇದನ್ನೂ ಓದಿ : Pratap Simha : 'ಮಂಡ್ಯ ಜನರ ಹೋರಾಟಕ್ಕೆ ಸಿಕ್ಕ ಜಯ'..!


ಕಾಂಗ್ರೆಸ್ ನವರು ಬಣ್ಣ ಕಟ್ಟುತ್ತಿರುವುದು ತಪ್ಪು, ದೇಶದ ಸಮಗ್ರತೆ ಬಹಳ‌ ಮುಖ್ಯ. ದೇಶದ ಎದುರಾಳಿಗಳನ್ನು ಎದುರಿಸುವುದು ಬಹಳ ಮುಖ್ಯ. ಅದನ್ನ ಬಿಟ್ಟು ಉಳಿದ ಎಲ್ಲವನ್ನು ಹೇಳುವುದು ಕಾಂಗ್ರೆಸ್ ನ ಪರಿಪಾಠ. ಈ ರೀತಿ ಹೇಳಿ ಹೇಳಿ ಕಾಂಗ್ರೆಸ್ ಮೂಲೆ ಗುಂಪಾಗಿದೆ. ಇದ್ರಿಂದ ಮಹಾರಾಷ್ಟ್ರ ಸರ್ಕಾರ ಕೂಡ ಪತನಗೊಳ್ಳುತ್ತಿದೆ, ಕಾಂಗ್ರೆಸ್ ಎಲ್ಲೂ ಉಳಿಯಲ್ಲ. ದೇಶದಲ್ಲಿ ಸಮಗ್ರತೆಯಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ ಎಂದರು ಹೇಳಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.