Pratap Simha : 'ಮಂಡ್ಯ ಜನರ ಹೋರಾಟಕ್ಕೆ ಸಿಕ್ಕ ಜಯ'..!

ದಸರಾ ದೊಳಗಡೆ ಸಾರ್ವಜನಿಕರ ಸೇವೆಗೆ ಬಿಡುವ ತಿರ್ಮಾನ ಮಾಡಲಾಗಿದೆ. ಅದೇ ರೀತಿ ಕಾಮಗಾರಿ ನಡೆಯುತ್ತಿದೆ. ರೆಷ್ಟ್ ಏರಿಯಾ, ಎಂಟ್ರಿ ಎಕ್ಸಿಟ್ ಬಗ್ಗೆ ನಡೆಯುತ್ತಿದೆ. ಅದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗಿದೆ ಅಕ್ಟೋಬರ್ ಅಂತ್ಯದೊಳಗೆ ಮುಗಿಯಲಿದೆ. ಜನರಿಗೆ ಯಾವುದೇ ತೊಂದರೆಯಾಗದ ರೀತಿ ತಲುಪಲು ಅನುಕೂಲ ಮಾಡಲಾಗುತ್ತಿದೆ. ಹಾಗಾಗಿ ತ್ವರಿತ ಗತಿಯಲ್ಲಿ ಕೆಲಸ ನಡೆಯುತ್ತಿದೆ ಎಂದರು. 

Written by - Zee Kannada News Desk | Last Updated : Jun 25, 2022, 03:09 PM IST
  • ಮೈಸೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ
  • ಅಕ್ಟೋಬರ್ ನಲ್ಲಿ ಮೈಸೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಆರಂಭ
  • ಈ ಕುರಿತು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ
Pratap Simha : 'ಮಂಡ್ಯ ಜನರ ಹೋರಾಟಕ್ಕೆ ಸಿಕ್ಕ ಜಯ'..! title=

ಮಂಡ್ಯ : ಅಕ್ಟೋಬರ್ ನಲ್ಲಿ ಮೈಸೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಆರಂಭವಾಗಲಿದೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. 

ಈ ಕುರಿತು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ದಸರಾ ದೊಳಗಡೆ ಸಾರ್ವಜನಿಕರ ಸೇವೆಗೆ ಬಿಡುವ ತಿರ್ಮಾನ ಮಾಡಲಾಗಿದೆ. ಅದೇ ರೀತಿ ಕಾಮಗಾರಿ ನಡೆಯುತ್ತಿದೆ. ರೆಷ್ಟ್ ಏರಿಯಾ, ಎಂಟ್ರಿ ಎಕ್ಸಿಟ್ ಬಗ್ಗೆ ನಡೆಯುತ್ತಿದೆ. ಅದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗಿದೆ ಅಕ್ಟೋಬರ್ ಅಂತ್ಯದೊಳಗೆ ಮುಗಿಯಲಿದೆ. ಜನರಿಗೆ ಯಾವುದೇ ತೊಂದರೆಯಾಗದ ರೀತಿ ತಲುಪಲು ಅನುಕೂಲ ಮಾಡಲಾಗುತ್ತಿದೆ. ಹಾಗಾಗಿ ತ್ವರಿತ ಗತಿಯಲ್ಲಿ ಕೆಲಸ ನಡೆಯುತ್ತಿದೆ ಎಂದರು. 

ಇದನ್ನೂ ಓದಿ : ಬಿಬಿಎಂಪಿ ವಾರ್ಡ್ ವಿಂಗಡಣೆ ಅಧಿಕಾರ ಪಿಪಾಸು ಬಿಜೆಪಿಯ ವಿಕೃತಿ: ಎಚ್‌ಡಿಕೆ ಆಕ್ರೋಶ

ಇನ್ನು ಮುಂದುವರೆದು ಮಾತನಾಡಿದ ಅವರು, ಮಂಡ್ಯ ಜನರ ಹೋರಾಟಕ್ಕೆ ಸಿಕ್ಕ ಜಯ. ಎಕ್ಸ್‌ಪ್ರೆಸ್‌ ಹೈವೇನಲ್ಲಿ ಸಂಚರಿಸಲು ಸ್ಥಳೀಯರಿಗೂ ಅವಕಾಶ ನೀಡಲಾಗುತ್ತದೆ. ರಾಷ್ತ್ರೀಯ ಹೆದ್ದಾರಿಯಲ್ಲಿ ಎಂಟ್ರಿ-ಎಕ್ಸಿಟ್ಗಾಗಿ 1201 ಕೋಟಿ ರೂ. ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಈ ಹಿಂದೆ ಮಂಡ್ಯ ಜನರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸ್ಥಳೀಯರಿಗೂ ಅವಕಾಶ ಕಲ್ಪಿಸುವಂತೆ ಹೋರಾಟ ನಡೆಸಿದ್ದರು. ಈಗ ಈ ಹೋರಾಟಕ್ಕೆ ಜಯ ಸಿಕ್ಕಿದೆ. ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ದಲ್ಲಿ ಎಂಟ್ರಿ-ಎಕ್ಸಿಟ್ ಕೊಡಲಾಗಿದೆ.ಎಂಟ್ರಿ-ಎಕ್ಸಿಟ್ಗಾಗಿ ಹೊಸ ಪ್ಯಾಕೇಜ್ ಕೂಡ ಘೋಷಣೆ ಮಾಡಲಾಗಿದೆ. ಇದಕ್ಕಾಗಿ 1201 ಕೋಟಿ ಬಿಡುಗಡೆ, ದಿಲೀಪ್ ಬಿಲ್ಡ್ ಕಾನ್ ರವರೆ ನೀಡಿ ಕೆಲಸ ಮಾಡಿಸಲು ಸಿದ್ದತೆ ನಡೆಯುತ್ತಿದೆ. ಅದಷ್ಟು ಬೇಗಾ ಕಾಮಗಾರಿ ಮುಗಿಯುತ್ತದೆ. ಮದ್ದೂರಿನಲ್ಲಿ ಶಿಂಷಾ ನದಿಗೆ ಬ್ರೀಡ್ಜ್ ಬೇಕು ಎಂದು ಹೋರಾಟ ಮಾಡಿದ್ರು. ನಾನು ಅದನ್ನ ಮಾಡಿಕೊಡುವುದಾಗಿ ಭರವಸೆ ಕೊಟ್ಟಿದ್ದೆ. ಅದರಂತೆ ಅಲ್ಲಿಯೂ ಕಾಮಗಾರಿ ಪ್ರಾರಂಭವಾಗಿದೆ. ನಾನು ಏನೇನು ಪ್ರಾಮೀಸ್ ಮಾಡಿದ್ದಿನೋ ಅದನ್ನೇಲ್ಲ ಮಾಡ್ತೇನೆ ಎಂದು ಭರವಸೆ ನೀಡಿದ್ದಾರೆ. 

ಇದನ್ನೂ ಓದಿ : ಕರ್ನಾಟಕ ಶಿಕ್ಷಣ ಇಲಾಖೆಗೆ ‘ಸಾಕ್ಷರತಾ ಇಲಾಖೆ’ ಎಂದು ಮರು ನಾಮಕರಣ

ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ಮಾತನಾಡಲು ನಿರಾಕರಿಸಿದ ಪ್ರತಾಪ್ ಸಿಂಹ, ನಾನು ಕೆಲಸದ ವಿಚಾರವಾಗಿ ಬಂದಿದ್ದೇನೆ. ಅದನ್ನ ಬಿಟ್ಟು ಬೇರೆ ಮಾತನಾಡಲ್ಲ ಎಂದು ಸಂಸದೆ ಸುಮಲತಾ ಬಗ್ಗೆ ಮಾತನಾಡದೇ ಹೊರತು ಹೋದರು.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News