ಬೆಂಗಳೂರು: ಇತಿಹಾಸ ಪ್ರಸಿದ್ಧ ದೇವಾಲಯವನ್ನೇ ಟಾರ್ಗೆಟ್ ಮಾಡಿ ಶನಿ ದೇವನ ಪೂಜೆಗೆ ಮಾಂಸದ ತುಂಡುಗಳನ್ನಿಟ್ಟ ಹೂವಿನ ಹಾರವನ್ನು ತಂದುಕೊಟ್ಟು ಮೂರ್ತಿಯನ್ನು ಬಿನ್ನ ಮಾಡಲು ಯತ್ನಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ.


COMMERCIAL BREAK
SCROLL TO CONTINUE READING

ಇತಿಹಾಸ ಪ್ರಸಿದ್ದ ಕನಸವಾಡಿಯ ಶನಿಮಹಾತ್ಮ ದೇವಾಲಯದಲ್ಲಿ ಶನಿದೇವನ ಪೂಜೆಗಾಗಿ ಹೂವಿನ ಹಾರದ ಮಧ್ಯೆ ಮಾಂಸವನ್ನು ಮಿಶ್ರಣ ಮಾಡಿ ಆ ಹಾರವನ್ನು ದೇಗುಲದ ಸಿಬ್ಬಂದಿಗೆ ನೀಡಿ ಕಿಡಿಗೇಡಿಗಳು ಪರಾರಿ ಆಗಿದ್ದಾರೆ. ಆದರೆ, ದೇವಾಲಯದ ಗರ್ಭಗುಡಿ ತಲುಪುವ ಮುನ್ನವೇ ಹಾರದ ಅಸಲಿಯತ್ತು ಬಯಲಿಗೆ ಬಂದಿದೆ. 


ಇದನ್ನೂ ಓದಿ- ಬೆಂಗಳೂರಿನ 28 ಕ್ಷೇತ್ರಗಳಲ್ಲಿ 20 ಕ್ಷೇತ್ರ ಗೆಲ್ಲಲು ಬಿಜೆಪಿ ಭರ್ಜರಿ ಪ್ಲ್ಯಾನ್‌


ದೇವಾಲಯಕ್ಕೆ‌‌ ಬಂದ ಇಬ್ಬರು ಅಪರಿಚಿತ ಯುವಕರಿಂದ ಈ ಕೃತ್ಯ ನಡೆದಿದೆ ಎನ್ನಲಾಗುತ್ತಿದ್ದು, ದೇವಾಲಯದ ಸಿಬ್ಬಂದಿಗೆ ದೇವರ ಪೂಜೆಗಾಗಿ ಕವರ್ ನಲ್ಲಿ ಹಾರಗಳಿದೆ ಎಂದು ಕೊಟ್ಟು ಎಸ್ಕೇಪ್ ಆಗಿದ್ದರು. ಆದರೆ, ಈ ವೇಳೆ ಗರ್ಭಗುಡಿಯ ಒಳಗಡೆ ಹೂವಿನ ಹಾರಗಳನ್ನು ಕೊಂಡೊಯ್ಯುವಾಗ ಮಾಂಸ ಹಾರದಿಂದ ಕೆಳಗೆ ಬಿದ್ದಿದೆ. ಹೂವಿನ ಹಾರದ ಮಧ್ಯೆ ಬರುವ ಪ್ಲಾಸ್ಟಿಕ್ ಪೇಪರ್ ಒಳಗಡೆ ಖದೀಮರು ಮಾಂಸದ ತುಂಡುಗಳನ್ನಿಟ್ಟಿದ್ದರು ಎಂದು ತಿಳಿದುಬಂದಿದ್ದು, ತಕ್ಷಣವೇ ಅದನ್ನು ಹೊರ ಬಿಸಾಡಿದ ದೇವಾಲಯದ ಸಿಬ್ಬಂದಿ ದೇವಸ್ಥಾನವನ್ನು ಶುಚಿಗೊಳಿಸಿದ್ದಾರೆ.


ಇದನ್ನೂ ಓದಿ- ಆರೋಗ್ಯ ಮತ್ತು ಕುಂಟುಬ ಕಲ್ಯಾಣ ಇಲಾಖೆಯಲ್ಲಿ  ಮಾ.3ರಂದು ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ


ಇನ್ನು ಘಟನೆ ಕುರಿತಂತೆ ಅಪರಿಚಿತ ಯುವಕರ ವಿರುದ್ದ ದೊಡ್ಡಬೆಳವಂಗಲ‌ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಘಟನೆ ಬೆನ್ನಲ್ಲೇ ತಕ್ಷಣ ಎಚ್ಚೆತ್ತಿರುವ ಆಡಳಿತ ಮಂಡಳಿ ದೇವಸ್ಥಾನದಲ್ಲಿ ಪೇಪರ್ ಒಳಗೊಂಡ ಹಾರಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಇನ್ನು ಈ ಕ್ಷೇತ್ರದ ದೇವರ ಮಹಿಮೆಯಿಂದಲೇ ನಡೆಯಬೇಕಿದ್ದ ಅಚಾತುರ್ಯ ತಪ್ಪಿದೆ.  ಗರ್ಭಗುಡಿ ಪ್ರವೇಶಕ್ಕು ಮುನ್ನವೆ ಹಾರದ ಅಸಲಿಯತ್ತು ಬೆಳಕಿಗೆ ಬಂದಿದೆ ಎಂದು ಭಕ್ತಾದಿಗಳು ನಿಟ್ಟುಸಿರು ಬಿಟ್ಟಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.