ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡಿದ್ದ ಆರೋಪಿಗೆ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದ ಸಿಎಂಎಂ ನ್ಯಾಯಾಲಯ

ಬೆಂಗಳೂರು ರವರಿಗೆ 1 ವರ್ಷ ಕಾರಾಗೃಹ ಶಿಕ್ಷೆ ಮತ್ತು 5,000/-ರೂ ದಂಡ ವಿಧಿಸಿ, ದಂಡ ಕಟ್ಟಲು ತಪ್ಪಿದಲ್ಲಿ ಹೆಚ್ಚುವರಿಯಾಗಿ 30 ದಿನಗಳ ಕಾಲ ಕಾರಾಗೃಹ ಶಿಕ್ಷೆಯನ್ನು ವಿಧಿಸಿ ದಿನಾಂಕ:20-02-2023 ರಂದು ಮಾನ್ಯ ಸಿಎಂಎಂ ನ್ಯಾಯಾಲಯವು ಆದೇಶಿಸಿರುತ್ತದೆ .

Written by - Zee Kannada News Desk | Last Updated : Feb 23, 2023, 11:14 PM IST
ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡಿದ್ದ ಆರೋಪಿಗೆ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದ ಸಿಎಂಎಂ ನ್ಯಾಯಾಲಯ title=
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ.96 ಓಕಳಿಪುರಂ, 1ನೇ ಮುಖ್ಯರಸ್ತೆ, ಬಿಡಿಎ ನಿವೇಶನ ಸಂಖ್ಯೆ: 25 ರ ಮಾಲೀಕರಾದ ಬೆಂಗಳೂರು ನಗರ, ಓಕಳಿಪುರಂ, ನಿವಾಸಿ ಮುದ್ದುಕೃಷ್ಣ ಟಿ.ಎಲ್ ಬಿನ್ ಲೇಟ್ ಟಿ.ಎ.ಎಲ್ ನಾಯ್ಡು ವಯಸ್ಸು 72 ವರ್ಷ, ಎಂಬುವರು ಸರ್ಕಾರಿ ಸ್ವತ್ತಾದ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಅನಧಿಕೃವಾಗಿ ಕಟ್ಟಡ ನಿರ್ಮಾಣ ಮಾಡಿದ್ದು ಸದರಿ ರವರ ವಿರುದ್ಧ ಬಿಎಂಟಿಎಫ್ ಪೊಲೀಸ್ ಠಾಣೆ ಮೊ.ಸಂ.: 28/2014 ಕಲಂ: 436(ಎ) ಕೆ.ಎಂ.ಸಿ ಆಕ್ಟ್ ರೀತ್ಯಾ ದಿನಾಂಕ 30-05-2014 ರಂದು ಪ್ರಕರಣ ದಾಖಲಾಗಿ - ಬಿಎಂಟಿಎಫ್ ಪೊಲೀಸ್‌ ಠಾಣೆಯಲ್ಲಿ ತನಿಖೆ ಕೈಗೊಳ್ಳಲಾಗಿತ್ತು.

ಸದರಿ ಪ್ರಕರಣದಲ್ಲಿ ತನಿಖೆಯನ್ನು ಕೈಗೊಂಡು ಸಾಕ್ಷಾಧಾರಗಳನ್ನು ಮತ್ತು ದಾಖಲಾತಿಗಳನ್ನು ಸಂಗ್ರಹಿಸಿ ಆರೋಪಿಯ ವಿರುದ್ಧ ಮಾನ್ಯ ಸಿ.ಎಂ.ಎಂ ನ್ಯಾಯಾಲಯ, ಬೆಂಗಳೂರು ರಲ್ಲಿ ಸದರಿ ಪ್ರಕರಣದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದು, ಘನ ನ್ಯಾಯಾಲಯವು ವಿಚಾರಣೆ ನಡೆಸಿದ್ದು, ವಿಚಾರಣಾ ಕಾಲದಲ್ಲಿ ಆರೋಪಿಯು ಸರ್ಕಾರಿ ಸ್ವತ್ತಾದ ರಾಜಕಾಲುವೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡಿರುವುದು ಧೃಡಪಟ್ಟಿದ್ದರಿಂದ ಸದರಿ ಆರೋಪಿ ಮುದ್ದುಕೃಷ್ಣ ಟಿ.ಎಲ್ ಬಿನ್ ಲೇಟ್ ಟಿ.ಎ.ಎಲ್ ನಾಯ್ಡು ವಯಸ್ಸು 72 ವರ್ಷ, ಓಕಳಿಪುರಂ, ಬೆಂಗಳೂರು ರವರಿಗೆ 1 ವರ್ಷ ಕಾರಾಗೃಹ ಶಿಕ್ಷೆ ಮತ್ತು 5,000/-ರೂ ದಂಡ ವಿಧಿಸಿ, ದಂಡ ಕಟ್ಟಲು ತಪ್ಪಿದಲ್ಲಿ ಹೆಚ್ಚುವರಿಯಾಗಿ 30 ದಿನಗಳ ಕಾಲ ಕಾರಾಗೃಹ ಶಿಕ್ಷೆಯನ್ನು ವಿಧಿಸಿ ದಿನಾಂಕ:20-02-2023 ರಂದು ಮಾನ್ಯ ಸಿಎಂಎಂ ನ್ಯಾಯಾಲಯವು ಆದೇಶಿಸಿರುತ್ತದೆ .

ಸದರಿ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀಮತಿ ಸವಿತ ರವರು ಕೈಗೊಂಡ ಉತ್ತಮ ತನಿಖೆಗಾಗಿ ಮತ್ತು ತನಿಖೆಗೆ ಸಹಕರಿಸಿದ ಸಿಬ್ಬಂದಿಯವರಿಗೆ ಶ್ರೀ ಡಾ.ಕೆ.ರಾಮಚಂದ್ರ ರಾವ್ ಐ.ಪಿ.ಎಸ್, ಎಡಿಜಿಪಿ, ಬಿಎಂಟಿಎಫ್ ರವರು ಪ್ರಶಂಸೆಯನ್ನು ವ್ಯಕ್ತಪಡಿಸಿರುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News