ದಾವಣಗೆರೆ: ಮಗಳಿಗಾಗಿ ನಿರ್ಮಾಣ ಮಾಡಿದ ಮನೆಗೆ ನರೇಂದ್ರ ಮೋದಿಯವರ ಹೆಸರನ್ನು ನಾಮಕರಣ ಮಾಡಿ ವ್ಯಕ್ತಿಯೊಬ್ಬರು ಅಭಿಮಾನ ಮೆರೆದಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗೌಡರ ಹಾಲೇಶ್‌ ಎಂಬವರು ಮೋದಿ ಹೆಸರಿಟ್ಟಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: Happy Birthday Anushka Sharma: ಎಂದಿಗೂ ನೋಡಿರದ ಅನುಷ್ಕಾ ಶರ್ಮಾ ಅಪರೂಪದ ಫೋಟೋಗಳು!


ಗೌಡರ ಹಾಲೇಶ್ ಅವರು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿ ವಾಸವಾಗಿರುವ ತಮ್ಮ ಪುತ್ರಿ ಭುವನೇಶ್ವರಿ ಎಂಬವರಿಗಾಗಿ ಚನ್ನಗಿರಿಯಲ್ಲಿ ಮನೆ‌‌ ನಿರ್ಮಾಣ ಮಾಡಿದ್ದಾರೆ. ಈ ಮನೆಗೆ ಹೆಸರೇನು ಇಡುವುದು ಎಂದು ಯೋಚಿಸುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಇಡುವುದಾಗಿ ತೀರ್ಮಾನ ಮಾಡಿದ್ದಾರೆ.  ಹಾಲೇಶ್ ಅವರು ಪ್ರಧಾನಿ ಮೋದಿಯವರ ಅಪ್ಪಟ ಅಭಿಮಾನಿಯಾಗಿದ್ದಾರೆ. 


ಮನೆ‌ ನಿರ್ಮಾಣ ಮಾಡಿದ‌ ಬಳಿಕ ಅದಕ್ಕೆ ನಾಮಕರಣ ಮಾಡಲು ಸೂಕ್ತ ಹೆಸರಿಗಾಗಿ ಹಾಲೇಶ್‌ ಹುಡುಕಾಟ ನಡೆಸಿದ್ದರಂತೆ. ಈ ಸಂದರ್ಭದಲ್ಲಿ ಸಿಕ್ಕ ಹೆಸರುಗಳೆಲ್ಲಾ ಇವರಿಗೆ ಇಷ್ಟವಾಗಿರಲಿಲ್ಲ. ಅಂತಿಮವಾಗಿ ಪ್ರಧಾನಿ ಹೆಸರಿಟ್ಟರೆ ಒಳಿತಾಗುತ್ತದೆಯೇ ಎಂದು ಜ್ಯೋತಿಷಿಗಳ ಬಳಿ ಕೇಳಿದಾಗ, ಅದಕ್ಕೆ ಅಭ್ಯಂತರವೇನು ಇಲ್ಲ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ಹೊಸ ಮನೆಗೆ ʼನರೇಂದ್ರ ಮೋದಿ ನಿಲಯʼ ಎಂದು ಹೆಸರಿಟ್ಟಿದ್ದಾರೆ. 


ಗೇಟ್‌ಗೆ ಮೋದಿ ಭಾವಚಿತ್ರ ಅಳವಡಿಕೆ: 
ಚನ್ನಗಿರಿಯ ಕಗತೂರು ರಸ್ತೆಯಲ್ಲಿ ನಿರ್ಮಿಸಲಾದ ಈ ಹೊಸ ಮನೆ ನೋಡಲು ಅಂದವಾಗಿದೆ. ಇನ್ನು ಈ ಮನೆ ಗೇಟ್‌ ಬಳಿ ಮೋದಿ ಭಾವಚಿತ್ರವನ್ನು ಅಳವಡಿಸಿದ್ದಾರೆ. ಸದ್ಯ ಈ ಮನೆ ಎಲ್ಲರ ಆಕರ್ಷಣೆಗೆ ಒಳಗಾಗಿದ್ದು, ಸಖತ್‌ ಸುದ್ದಿಯಾಗಿದೆ. 


ಇದನ್ನು ಓದಿ: ಮೋದಿ ಗುಣಗಾನ ಮಾಡಿದ್ದ Kili Paul ಮೇಲೆ ಕಿಡಿಗೇಡಿಗಳಿಂದ ಹಲ್ಲೆ


ಮೇ 3ರಂದು ಗೃಹ ಪ್ರವೇಶ: 
ಪ್ರಧಾನಿ ಮೋದಿಯವರ ಹೆಸರಿಟ್ಟಿರುವ ಈ ಮನೆಯ ಗೃಹ ಪ್ರವೇಶಕ್ಕೆ ದಿನ ನಿಗದಿಯಾಗಿದ್ದು, ಮೇ 3ರಂದು ಕಾರ್ಯಕ್ರಮ ನಡೆಯಲಿದೆ. ಗೃಹ ಪ್ರವೇಶಕ್ಕೆ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಆಗಮಿಸಲಿದ್ದಾರೆ.  
 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.