ಬೆಂಗಳೂರು: ನಾವು ಸಾಮಾನ್ಯವಾಗಿ ಪ್ರಾಣಿಗಳನ್ನು ಮೂಕ ಪ್ರಾಣಿಗಳು ಎಂದು ಆಗಾಗ ಹೇಳುತ್ತಿರುತ್ತೇವೆ,ಆದರೆ ಕೆಲವೊಮ್ಮೆ ಅದರ ವರ್ತನೆಗಳು ಮನುಷ್ಯರನ್ನು ಕೂಡ ಮೀರಿಸುತ್ತವೆ.ಈಗ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಕೋತಿಯೊಂದು ತನ್ನ ಸತ್ತ ಮರಿಯನ್ನು ಹೊತ್ತುಕೊಂಡು ತಿರುಗುತ್ತಿರುವ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Universal Vaccine: ಶೀಘ್ರದಲ್ಲಿಯೇ ಬರಲಿದೆ ಕೊರೊನಾ ವಿರುದ್ಧ ಹೋರಾಡುವ ಸೂಪರ್ ವ್ಯಾಕ್ಸಿನ್, ಯಾವುದೇ ರೂಪಾಂತರಿ ಬಂದ್ರು ಖತಂ!


ವಿಶ್ವದಾದ್ಯಂತ ತಾಯಂದಿರ ದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಮೂಕ ಪ್ರಾಣಿಯೊಂದು ತನ್ನ ಮರಿಗಾಗಿ ಅಲೆದಾಡುತ್ತಿರುವ ದೃಶ್ಯ ಎಲ್ಲರ ಮನಕಲಕುತ್ತದೆ.ಈಗ ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರದಲ್ಲಿ ನಡೆದಿದೆ ಎನ್ನಲಾಗಿದೆ.


ಇದನ್ನೂ ಓದಿ: ಕತಾರ್‌ನಲ್ಲಿ ಆಜಾದಿ ಕಾ ಅಮೃತ್‌ ಮಹೋತ್ಸವ-ಒಡಿಶಾ ಸಂಸ್ಥಾಪನಾ ದಿನ ಆಚರಣೆ


ರಾತ್ರಿ ಸುರಿದ ಮಳೆಯಿಂದಾಗಿ ಕೋತಿ ಮರಿ ಸಾವನ್ನಪಿದೆ ಎನ್ನಲಾಗಿದೆ.ಈಗ ಅದು ಮರದಲ್ಲಿ ತನ್ನ ಮರಿಯನ್ನು ಹೊತ್ತುಕೊಂಡು ತಿರುಗುತ್ತಿರುವ ದೃಶ್ಯ ಅಲ್ಲಿ ನೆರದಿರುವ ಜನರ ಮನ ಕಲುಕುವಂತೆ ಮಾಡಿದೆ. ಮರಿ ಸಾವನ್ನಪ್ಪಿದ್ದರೂ ಕೂಡ ತಾಯಿ ಕೋತಿ ತನ್ನ ಮರಿಯನ್ನು ಅಪ್ಪಿಕೊಂಡು ತಿರುಗಾಡುತ್ತಿರುವುದು ಮಾತೃ ಹೃದಯ ಎಂತಹದ್ದು ಎನ್ನುವುದು ಈ ದೃಶ್ಯ ತೋರಿಸುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.