ಕತಾರ್: ಉತ್ಕಲಿಕಾ ಕತಾರ್ ಸಮುದಾಯದ ವತಿಯಿಂದ ಕತಾರ್‌ನಲ್ಲಿ ವಿಶೇಷವಾಗಿ ಆಜಾದಿ ಕಾ ಅಮೃತ್ ಮಹೋತ್ಸವ ಹಾಗೂ ಒಡಿಶಾ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಭಾರತೀಯ ರಾಯಭಾರಿ ಡಾ ದೀಪಕ್ ಮಿತ್ತಲ್ ಉದ್ಘಾಟಿಸಿದರು.
ಇದನ್ನು ಓದಿ: NRIಗಳಿಗಾಗಿ ಕರ್ನಾಟಕದಲ್ಲಿ ಜಾರಿಯಾಗಿದೆ ನೀತಿಗಳು: ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್
ಒಡಿಶಾದಲ್ಲಿ ಏಪ್ರಿಲ್ 1ರಂದು ಸಂಸ್ಥಾಪನಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕತಾರ್‌ನಲ್ಲಿ ನೆಲೆಸಿರುವ ಉತ್ಕಲಿಕಾ ಕತಾರ್ ಸಮುದಾಯದ ಸದಸ್ಯರು ಆಜಾದಿ ಕಾ ಅಮೃತ ಮಹೋತ್ಸವ ಮತ್ತು ಒಡಿಶಾ ಸಂಸ್ಥಾಪನಾ ದಿನವನ್ನು ಒಟ್ಟಾಗಿ ಆಚರಿಸಿದ್ದಾರೆ.
ಇನ್ನು ಈ ಕಾರ್ಯಕ್ರಮವನ್ನು ಉತ್ಕಲಿಕಾ ಸಮುದಾಯದ ಅಧ್ಯಕ್ಷ ಡಾ. ಬಸಂತ್ ಕುಮಾರ್ ಸ್ವಾಗತಿಸಿದರು. ಇದೇ ವೇಳೆ 2021ರ ಅವಧಿಯಲ್ಲಿ ನಡೆದ ರಸಪ್ರಶ್ನೆ ಮತ್ತು ಚರ್ಚಾ ಸ್ಪರ್ಧೆಯ ವಿಜೇತರಿಗೆ ಟ್ರೋಫಿಗಳು ಮತ್ತು ಪ್ರಮಾಣ ಪತ್ರಗಳನ್ನು ಭಾರತೀಯ ರಾಯಭಾರಿ ಡಾ ದೀಪಕ್ ಮಿತ್ತಲ್ ವಿತರಿಸಿದರು.
ಇದನ್ನು ಓದಿ: Sundar Pichai: ಗೂಗಲ್ ದೈತ್ಯ ಸಿಇಒ ಸುಂದರ್ ಪಿಚೈ ಆಸ್ತಿ ಮೌಲ್ಯ ಎಷ್ಟು ಗೊತ್ತಾ?
ಇದೇ ವೇದಿಕೆಯಲ್ಲಿ ಸಾಂಸ್ಕೃತಿಕ ವೈವಿಧ್ಯತೆ ಒಳಗೊಂಡ ಕಾರ್ಯಕ್ರಮಗಳು ನಡೆದವು. ಇನ್ನು ಮಾಹಿತಿ, ಸಂಸ್ಕೃತಿ ಮತ್ತು ಶಿಕ್ಷಣದ ಸಂಚಾಲಕ ಕುಲ್ಜೀತ್ ಸಿಂಗ್ ಅರೋರಾ, ಐಸಿಬಿಎಫ್‌ನ ಅಧ್ಯಕ್ಷ ವಿನೋದ್ ವಿ ನಾಯರ್, ಐಸಿಸಿ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.