ಬೆಂಗಳೂರು: ತಾಯಿ-ಮಗಳನ್ನು ಒಂದು ಮಾಡಿ ಪೊಲೀಸರು ಮಾಯವೀಯತೆ ಮೆರೆದಿದ್ದಾರೆ. ಈ ಹೃದಯಸ್ಪರ್ಶಿ ಘಟನೆಗೆ ಬೆಂಗಳೂರಿನ ಪುಲಕೇಶಿ ನಗರ ಪೊಲೀಸ್ ಠಾಣೆ ಸಾಕ್ಷಿಯಾಗಿದೆ.


COMMERCIAL BREAK
SCROLL TO CONTINUE READING

ದೂರದ ತಮಿಳುನಾಡಿನಿಂದ ತಮ್ಮ ಪುತ್ರಿಯನ್ನು ನೋಡಲು ಬೆಂಗಳೂರಿಗೆ ಬಂದಿದ್ದ ವೃದ್ಧೆಯೊಬ್ಬರು ವಿಳಾಸ ತಿಳಿಯದೆ ಕಂಗಾಲಾಗಿದ್ದರು. ಪುತ್ರಿಗಾಗಿ ಹುಡುಕಾಟ ನಡೆಸುತ್ತಿದ್ದ ತಾಯಿಗೆ ಪೊಲೀಸರು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.   


ಇದನ್ನೂ ಓದಿ: Answer Madi Modi: ಪ್ರಧಾನಿ ಮೋದಿಗೆ ಸಿದ್ದರಾಮಯ್ಯರಿಂದ ಪ್ರಶ್ನೆಗಳ ಸುರಿಮಳೆ


ಬೆಂಗಳೂರಿನ ಪುಲಕೇಶಿ ನಗರದಲ್ಲಿ ತಮಿಳುನಾಡಿನ ವೃದ್ಧೆ ಮಗಳ ಮನೆ ಹುಡುಕುತ್ತಿದ್ದರು. ಅವರು ತಮ್ಮ ಮೊಬೈಲ್‍ಅನ್ನು ತಮಿಳುನಾಡಿನಲ್ಲಿಯೇ ಬಿಟ್ಟುಬಂದಿದ್ದರು. ಹೀಗಾಗಿ ಪುತ್ರಿಯ ಮನೆ ವಿಳಾಸದ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ಕಂಗಾಲಾಗಿದ್ದರು. ದಿಕ್ಕುತೋಚದೆ ಮುಂದೇನು ಮಾಡುವುದು ಎಂದು ತಲೆಮೇಲೆ ಕೈಹೊತ್ತು ಕುಳಿತ್ತಿದ್ದ ಅವರಿಗೆ ಪುಲಕೇಶಿ ನಗರದ ಹೊಯ್ಸಳ ಸಿಬ್ಬಂದಿ ಸಹಾಯ ಮಾಡಿದ್ದಾರೆ.    


ವೃದ್ಧೆಗೆ ಮಗಳ ಹೆಸರು ಬಿಟ್ಟರೆ ಬೇರೇನೂ ಗೊತ್ತಿರಲಿಲ್ಲ. ತಮಿಳುನಾಡಿನವರು ಆಗಿದ್ದರಿಂದ ಕನ್ನಡ ಭಾಷೆಯೂ ಬರುತ್ತಿರಲಿಲ್ಲ. ಪುಲಿಕೇಶಿ ನಗರದಲ್ಲಿ ಮಗಳಿಗಾಗಿ ಹುಡುಕಾಡಿ.. ಹುಡುಕಾಡಿ ಸುಸ್ತಾಗಿದ್ದ ವೃದ್ಧೆಯನ್ನು ಗಮನಿಸಿದ ಬೀಟ್‍ನಲ್ಲಿದ್ದ ಹೊಯ್ಸಳ ಸಿಬ್ಬಂದಿ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಉಪಚರಿಸಿದ್ದಾರೆ. ಬಳಿಕ ವೃದ್ಧೆ ತಮ್ಮ ಮಗಳನ್ನು ಹುಡುಕುತ್ತಿರುವ ಮಾಹಿತಿ ತಿಳಿದುಕೊಂಡಿದ್ದಾರೆ. ಸ್ಥಳೀಯರ ಸಹಾಯದಿಂದ ಮಗಳ ವಿಳಾಸ ಪತ್ತೆ ಮಾಡಿದ ಪೊಲೀಸರು ಅವರಿಗೆ ವಿಷಯ ತಿಳಿಸಿ ಠಾಣೆಗೆ ಕರೆಸಿಕೊಂಡಿದ್ದಾರೆ. ತಾಯಿ-ಮಗಳನ್ನು ಒಂದು ಮಾಡುವಲ್ಲಿ ಪುಲಕೇಶಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.


ಇದನ್ನೂ ಓದಿ: InternationalDayOfYoga: ಮೈಸೂರಿನಲ್ಲಿ 'ನಮೋ' ಯೋಗ


ಪೊಲೀಸ್ ಠಾಣೆಗೆ ಬಂದ ಮಗಳು ತಮ್ಮ ತಾಯಿಯನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ. ಬಳಿಕ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಸಿಬ್ಬಂದಿಯ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಹಿರಿಯ ಅಧಿಕಾರಿಗಳು ಸಹ ಮೆಚ್ಚುಗೆ ಸೂಚಿಸಿದ್ದಾರೆ‌. 3 ದಿನಗಳ ಹಿಂದೆ ನಡೆದಿರುವ ಈ ಹೃದಯಸ್ಪರ್ಶಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.