ಬೆಳಗಾವಿ : ಕುಂದಾ ನಗರಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ನಾಳೆ ಮಹಾರಾಷ್ಟ್ರ ಸರ್ಕಾರ ವಿರುದ್ಧ ಖಂಡನಾ ನಿರ್ಣಯವನ್ನು ಉಭಯ ಸದನಗಳಲ್ಲಿ ಮಂಡಿಸಲು ಸರ್ಕಾರ ತೀರ್ಮಾನ ಮಾಡಿದೆ.


COMMERCIAL BREAK
SCROLL TO CONTINUE READING

ಮಹಾರಾಷ್ಟ್ರ, ಕೇರಳ ಹಾಗೂ ಕರ್ನಾಟಕ ಗಡಿ ವಿಚಾರವಾಗಿ ನಿಳುವಳಿ ಸೂಚನೆ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರ ಹಾಗೂ ಅವರ ನಡೆ ವಿರುದ್ಧ ಉಭಯ ಸದನ ಮೂಲಕ ಖಂಡನಾ ನಿರ್ಣಯ ಮಂಡಿಸೋಣ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು, ಇದಕ್ಕೆ ಎಲ್ಲಾ ಸದಸ್ಯರ ಒಪ್ಪಿಗೆ ವಿಧಾನಸಭೆಯಲ್ಲಿ ದೊರಕಿದ್ದು, ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಾಸ್ ಮಾಡಿ ಕಲಿಸೋಣ ಎನ್ನುವ ಮೂಲಕ ಶಾಸಕರ ಒಗ್ಗಟ್ಟು ಪ್ರದರ್ಶನ ಮಾಡಲಾಯಿತು.


ಇದನ್ನೂ ಓದಿ : Diabetes Control Tips: ಮಧುಮೇಹವನ್ನು ನಿರ್ವಹಿಸಲು ಇಲ್ಲಿವೆ 5 ಸೂಪರ್‌ ಸಲಹೆಗಳು


ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಪತ್ರ ಮುಂದಿನ ದಿನದದಲ್ಲಿ ಅತೀ ಮುಖ್ಯ ದಾಖಲೆ!


"ಇತ್ತೀಚಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃವದ ಸಭೆಯಲ್ಲಿ ಮಹಾರಾಷ್ಟ್ರದ ಸಚಿವರು ಕರ್ನಾಟಕಕ್ಕೆ ಬರುವ ವಿಚಾರವಾಗಿ ನಿಮ್ಮ ಚೀಫ್ ಸೆಕ್ರೆಟರಿಯಿಂದ ಪತ್ರ ಬರೆಸಬಾರದಿತ್ತು ಎಂದು ಹೇಳಿದ್ದರು,ಅದಕ್ಕೆ ಅವರು ಬರೋದೇ ತಪ್ಪು. ನಮ್ಮವರು ಯಾರಾದರೂ ಬರ್ತೀವಿ ಅಂದಿದ್ವಾ? ನೀವು ಬರೋದನ್ನು ನಿಯಂತ್ರಣ ಮಾಡಬೇಕಿತ್ತು. ಆದರೆ ಅದು ಆಗದಿದ್ದಾಗ ಕಾನೂನು ಪ್ರಕಾರ ಬರೆದಿದ್ದೇವೆ ಅದು ಸರಿ ಇದೆ ಎಂದಿದ್ದೇವೆ." ಸಿಎಂ ಬೊಮ್ಮಾಯಿ 


ಇದನ್ನೂ ಓದಿ : ಸೆಕ್ಸ್ ವೇಳೆ ನಿದ್ದೆ ಬರುತ್ತಾ? ಈ ಅಪರೂಪದ ಕಾಯಿಲೆ ನಿಮಗೂ ಇದೆಯಾ ತಿಳಿದುಕೊಳ್ಳಿ


"ಆ ಪತ್ರ ಭವಿಷ್ಯದಲ್ಲಿ ಮುಖ್ಯ ದಾಖಲೆ ಆಗಲಿದೆ. ಮಹಾರಾಷ್ಟ್ರ ಹೇಗೆ ಕಾನೂನು ‌ವಿರುದ್ಧ ಹೋಗುತ್ತಿದೆ. ಹಾಗೂ ಕಾನೂನು ಸುವ್ಯವಸ್ಥೆಗೆ ಹೇಗೆ‌ ಧಕ್ಕೆ ಉಂಟು ಮಾಡುತ್ತಿದೆ ಅನ್ನುದಕ್ಕೆ ಪತ್ರ ದಾಖಲೆ ಆಗುತ್ತದೆ.ಮಹಾಮೇಳಕ್ಕೂ ಅವಕಾಶ ಕೊಟ್ಟಿಲ್ಲ. ಯಾವುದೇ ಕಾರಣಕ್ಕಾಗಿ ಅವಕಾಶ ಕೊಡ ಬಾರದು ಎಂಬ ದಿಟ್ಟ ನಿಲುವು ಕೈಗೊಂಡಿದ್ದೇವೆ.ಆದರೂ ಎಂಪಿ ಬರುತ್ತೇವೆ ಎಂದಾಗ ಅವರು ಬಂದರೆ ಬಂಧನ ಮಾಡುತ್ತೇವೆ ಎಂದು ‌ಸಂದೇಶ ಕೊಟ್ಟಿದ್ದೇವೆ. ಇನ್ನೊಂದು ರಾಜ್ಯಕ್ಕೆ ‌ನುಗ್ಗಿ ಬರುತ್ತೇವೆ ಎಂಬ ಪ್ರವೃತ್ತಿ ಖಂಡನೀಯ. ಅವರ ಧೋರಣೆ ಏನು ಎಂದು ಜಗತ್ತಿಗೆ ಗೊತ್ತಾಗುತ್ತಿದೆ.ನಮ್ಮ ಗಡಿ ರಕ್ಷಣೆ ನಾವು ಮಾಡುತ್ತೇವೆ. ಗಡಿಯಲ್ಲಿ ಇದ್ದ ಕನ್ನಡಿಗರಿಗೆ ತೊಂದರೆ ಕೊಟ್ಟರೆ ಸುಮ್ಮನಿರಲ್ಲ ಎಂಬ ಸಂದೇಶ ಕೊಟ್ಟಿದ್ದೇವೆ", ಸಿಎಂ ಬೊಮ್ಮಾಯಿ ತಿಳಿಸಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.