ಮದುವೆ ನಿಶ್ಚಿತವಾಯಿತೆಂದು ಹುಡುಗಿಯನ್ನೇ ಕಿಡ್ನಾಪ್ ಮಾಡಿದ ಕಿರಾತಕರು...!

ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಇಂದು ಬೆಳಿಗ್ಗೆ 5:30 ರ ಸುಮಾರಿಗೆ 18 ವರ್ಷದ ಮಹಿಳೆಯನ್ನು ನಾಟಕೀಯವಾಗಿ ಅಪಹರಿಸಿ ಕಾರಿನಲ್ಲಿ ಕರೆದುಕೊಂಡಿದ್ದಾರೆ.ಆಕೆ ತಂದೆಯೊಂದಿಗೆ ದೇವಸ್ತಾನಕ್ಕೆ ಹೋಗಿದ್ದಳು ಎನ್ನಲಾಗಿದೆ.ವಾಪಸ್ ಬರುವಾಗ ಅವರು ಅಪಹರಿಸಿದ್ದಾರೆ.

Written by - Zee Kannada News Desk | Last Updated : Dec 20, 2022, 04:35 PM IST
  • ಅಪಹರಿಸಿದವರಲ್ಲಿ 24 ವರ್ಷದ ಯುವಕನು ಈ ಹಿಂದೆಯೂ ಕೂಡ ಆಕೆಯನ್ನು ಅಪಹರಿಸಿದ್ದನು,
  • ಆದರೆ ಆಗ ಆಕೆ ಅಪ್ರಾಪ್ತೆಯಾಗಿದ್ದರಿಂದಾಗಿ ಅವನ ಮೇಲೆ ಪೊಕ್ಸೋ ಆರೋಪವನ್ನು ಹೊರಿಸಲಾಗಿತ್ತು.
  • ಈಗ ಆಕೆಯ ಮದುವೆ ನಿಶ್ಚಿತವಾಯಿತು ಎಂದು ತಿಳಿದು ಆಕೆಯನ್ನು ಮತ್ತೊಮ್ಮೆ ಅಪಹರಿಸಿದ್ದಾನೆ
 ಮದುವೆ ನಿಶ್ಚಿತವಾಯಿತೆಂದು ಹುಡುಗಿಯನ್ನೇ ಕಿಡ್ನಾಪ್ ಮಾಡಿದ ಕಿರಾತಕರು...! title=

ಹೈದರಾಬಾದ್: ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಇಂದು ಬೆಳಿಗ್ಗೆ 5:30 ರ ಸುಮಾರಿಗೆ 18 ವರ್ಷದ ಮಹಿಳೆಯನ್ನು ನಾಟಕೀಯವಾಗಿ ಅಪಹರಿಸಿ ಕಾರಿನಲ್ಲಿ ಕರೆದುಕೊಂಡಿದ್ದಾರೆ.ಆಕೆ ತಂದೆಯೊಂದಿಗೆ ದೇವಸ್ತಾನಕ್ಕೆ ಹೋಗಿದ್ದಳು ಎನ್ನಲಾಗಿದೆ.ವಾಪಸ್ ಬರುವಾಗ ಅವರು ಅಪಹರಿಸಿದ್ದಾರೆ.

ಇದನ್ನೂ ಓದಿ : Diabetes Control Tips: ಮಧುಮೇಹವನ್ನು ನಿರ್ವಹಿಸಲು ಇಲ್ಲಿವೆ 5 ಸೂಪರ್‌ ಸಲಹೆಗಳು

ಅಪಹರಿಸಿದವರಲ್ಲಿ 24 ವರ್ಷದ ಯುವಕನು ಈ ಹಿಂದೆಯೂ ಕೂಡ ಆಕೆಯನ್ನು ಅಪಹರಿಸಿದ್ದನು,ಆದರೆ ಆಗ ಆಕೆ ಅಪ್ರಾಪ್ತೆಯಾಗಿದ್ದರಿಂದಾಗಿ ಅವನ ಮೇಲೆ ಪೊಕ್ಸೋ ಆರೋಪವನ್ನು ಹೊರಿಸಲಾಗಿತ್ತು.ಈಗ ಆಕೆಯ ಮದುವೆ ನಿಶ್ಚಿತವಾಯಿತು ಎಂದು ತಿಳಿದು ಆಕೆಯನ್ನು ಮತ್ತೊಮ್ಮೆ ಅಪಹರಿಸಿದ್ದಾನೆ ಎನ್ನಲಾಗಿದೆ.

ಮೂವರು ಪುರುಷರು ಕಾರಿನಿಂದ ಇಳಿದು, ತಂದೆಯನ್ನು ತಳ್ಳಿ ಮಹಿಳೆಯನ್ನು ಹಿಡಿದುಕೊಂಡು ಹೋಗುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತವೆ, ಅವರು ಅವರನ್ನು ಹಿಂಬದಿಯ ಸೀಟಿನಲ್ಲಿ ತಳ್ಳಿ ವೇಗವಾಗಿ ಓಡುತ್ತಾರೆ.

ಇದನ್ನೂ ಓದಿ : ಸೆಕ್ಸ್ ವೇಳೆ ನಿದ್ದೆ ಬರುತ್ತಾ? ಈ ಅಪರೂಪದ ಕಾಯಿಲೆ ನಿಮಗೂ ಇದೆಯಾ ತಿಳಿದುಕೊಳ್ಳಿ

"ಅಪಹರಣಕಾರರಲ್ಲಿ ಒಬ್ಬರು ಮಹಿಳೆಯ ಗ್ರಾಮದವರು ಮತ್ತು ಅವರು ಈ ಹಿಂದೆ ಸ್ನೇಹದಿಂದ ಇದ್ದವರು ಎಂದು ಶಂಕಿಸಲಾಗಿದೆ" ಎಂದು ಇನ್ಸ್‌ಪೆಕ್ಟರ್ ಕಿರಣ್ ಕುಮಾರ್ ಹೇಳಿದ್ದಾರೆ. ಈಗ ಮಹಿಳೆಯ ಪತ್ತೆಗೆ ಪೊಲೀಸರು ಆರು ತಂಡಗಳನ್ನು ರಚಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಹತ್ತು ದಿನಗಳ ಹಿಂದೆ, ರಂಗಾ ರೆಡ್ಡಿ ಜಿಲ್ಲೆಯ 24 ವರ್ಷದ ದಂತವೈದ್ಯೆಯನ್ನು ಆಕೆಯ ಮನೆಯಿಂದ ಅಪಹರಿಸಿದ ಮಾಜಿ ಗೆಳೆಯ, ಆ ದಿನ ಅವಳು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾಳೆಂದು ತಿಳಿದ ನಂತರ 30-40 ಇತರರೊಂದಿಗೆ ಅಡ್ಡಗಟ್ಟಿದನು. ಬಳಿಕ ಯುವತಿ ಮನೆಗೆ ಮರಳಿದ್ದಳು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News