ಬೆಂಗಳೂರು: ‘ಮೈ ಟ್ಯಾಕ್ಸ್ ಮೈ ರೈಟ್’ ಎಂದು ಬೆಂಗಳೂರಿಗರು ಬೆಂಗಳೂರಿನ ಅಭಿವೃದ್ಧಿಗೆ ತೆರಿಗೆ ಹಣ ವಾಪಸ್ ಕೇಳಲಾರಂಭಿಸಿದರೆ ಕಲ್ಯಾಣ ಕರ್ನಾಟಕದ ಪರಿಸ್ಥಿತಿ ಏನಾದೀತು? ಎಂದು ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಪ್ರಶ್ನಿಸಿದ್ದಾರೆ. 


COMMERCIAL BREAK
SCROLL TO CONTINUE READING

ನಾವು ದೇಶದ ಹಿತದಲ್ಲಿ ತೆರಿಗೆ ಕಟ್ಟುತ್ತೇವೆ ಎಂಬುದನ್ನು ನೆನಪಿನಲ್ಲಿ ಇಡಬೇಕು. ಮೈ ಟ್ಯಾಕ್ಸ್ ಮೈ ರೈಟ್ ಕುರಿತು ತಪ್ಪು ಅರ್ಥದಲ್ಲಿ ಮಾತನಾಡಿದರೆ, ದೇಶದ ಹಿತ ಆಗಲಾರದು ಎಂದು ವಿಶ್ಲೇಷಿಸಿದ್ದಾರೆ. ಜಿಡಿಪಿಗೆ ಹೋಲಿಸಿದರೆ ನಮ್ಮ ದೇಶದ ವಿದೇಶಿ ಸಾಲ ಪ್ರಮಾಣ ಕಡಿಮೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 


ಇದನ್ನೂ ಓದಿ : Lok Sabha Election 2024: ಶೀಘ್ರದಲ್ಲೇ ಇನ್ನಷ್ಟು ಜನ ನಮ್ಮ ಪಕ್ಷವನ್ನು ಸೇರಲಿದ್ದಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ


ಬರ ಸಂಬಂಧಿಸಿದ ವಿಚಾರ ಕೃಷಿ ಇಲಾಖೆಯಡಿ ಬರುತ್ತದೆ.ಕರ್ನಾಟಕ,ಆಂಧ್ರ, ಮಹಾರಾಷ್ಟ್ರದ ಬರಗಾಲ ಪರಿಸ್ಥಿತಿ ಸೇರಿ ವಿವಿಧ ಪ್ರಕೃತಿ ವಿಕೋಪಕ್ಕೆ ವಿಚಾರಗಳಿಗೆ ಸಂಬಂಧಿಸಿ ಉನ್ನತಾಧಿಕಾರ ಸಮಿತಿ ಸಭೆ ನಡೆಯಬೇಕಿದೆ.ಆದರೆ,ಅದಕ್ಕಾಗಿ ಚುನಾವಣಾ ಆಯೋಗದ ಅನುಮತಿ ಬೇಕಿದೆ ಎಂದು ತಿಳಿಸಿದ್ದಾರೆ.223 ತಾಲೂಕುಗಳಲ್ಲಿ ಬರಗಾಲ ಇದೆ.ತ್ವರಿತವಾಗಿ ಹಣ ಕೊಟ್ಟಿಲ್ಲವೇಕೆ ಎಂಬ ಪ್ರಶ್ನೆಗೆ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 


ರಾಜ್ಯ ಸರಕಾರವು ಬರ ಪರಿಹಾರವನ್ನು ಕೂಡಲೇ ಕೊಡಬೇಕಿತ್ತು.ಎನ್‍ಡಿಆರ್‍ಎಫ್‍ನಡಿ ಪರಿಹಾರ, ವಿಶೇಷ ಪರಿಹಾರ, ಮಧ್ಯಂತರ ಪರಿಹಾರಕ್ಕೆ ಅವಕಾಶವಿಲ್ಲ. ಪರಿಹಾರ ಕೊಡಲು ಎಸ್‍ಡಿಆರ್‍ಎಫ್‍ನಡಿ ಹಣ ಇರುತ್ತದೆ.ಎಸ್‍ಡಿಆರ್‍ಎಫ್‍ನಡಿ 697 ಕೋಟಿ ಹಣ ಅನುದಾನವಾಗಿ ಕೇಂದ್ರದ ಭಾಗ ಇದ್ದು, ಅದನ್ನು ಮುಂಚಿತವಾಗಿಯೇ ಕೊಡಲಾಗಿದೆ ಎಂದು  ಹೇಳಿದರು. 


ಇದನ್ನೂ ಓದಿ : Lok Sabha Election 2024: ಲೋಕಸಭಾ ಚುನಾವಣೆಗೂ ಮುನ್ನ ಶಾಕಿಂಗ್ ವರದಿ ನೀಡಿದ ಅಮೆರಿಕಾದ ಕಂಪನಿ..!


ಬೆಂಗಳೂರು ನೀರಿನ ಸಮಸ್ಯೆ ಎದುರಿಸುತ್ತಿದೆ. ಇಲ್ಲಿ ಕಾಲರಾ ಹರಡುತ್ತಿದೆ.ಇದು ಕಳವಳಕಾರಿ ಎಂದು ತಿಳಿಸಿದರು. ಕಲುಷಿತ ನೀರು ಜನರನ್ನು ತಲುಪುತ್ತಿದೆ. ಮೇ 2023ರಲ್ಲಿ ವಿವಿಧ ನಿಗಮಗಳ ಅಡಿಯಲ್ಲಿ ನೀರಿಗೆ ಸಂಬಂಧಿಸಿದ 20 ಸಾವಿರ ಕೋಟಿಯ ಯೋಜನೆಗಳನ್ನು ಆರಂಭಿಸಿದ್ದು, ಅವು ಸ್ಥಗಿತವಾಗಿವೆ. ಮನೆಮನೆಗೆ ನಳ್ಳಿನೀರು ನೀಡುವ ಜಲಜೀವನ್ ಮಿಷನ್ ಯೋಜನೆಯೂ ಸ್ಥಗಿತವಾಗಿದೆ. ಕರ್ನಾಟಕ ಸರಕಾರವು ನಿರ್ಮಾಣ ಹಂತದ ಕಾರ್ಮಿಕರ ಸ್ಕಾಲರ್‍ಶಿಪ್ ಕೂಡಾ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ