Egg Price in Karnataka: ಕೋಳಿ ಮೊಟ್ಟೆಗೂ ತಟ್ಟಿದೆ ಬಿಸಿಲ ತಾಪ !

Egg Price in Karnataka: ರಾಜ್ಯಾದ್ಯಂತ ಆವರಿಸಿರುವ ಬಿಸಿಲಿನ ಬೇಗೆಯು ನಮಗಷ್ಟೇ ಅಲ್ಲ ಕೋಳಿ ಮೊಟ್ಟೆಗೂ ತಟ್ಟಿದೆ. 

Written by - Bhavya Sunil Bangera | Last Updated : Apr 6, 2024, 12:42 PM IST
  • ಕೋಳಿ ಮೊಟ್ಟೆಗೂ ತಟ್ಟಿದೆ ಬಿಸಿಲ ತಾಪ
  • ಬಿಸಿಲ ಬೇಗೆಗೆ ಮಾಂಸದ ಕೋಳಿಗಳ ಸಾವು
  • ಕೋಳಿ ಫಾರಂಗಳ ಮೊಟ್ಟೆ ಉತ್ಪಾದನೆಗೂ ಭಾರಿ ಹೊಡೆತ
Egg Price in Karnataka: ಕೋಳಿ ಮೊಟ್ಟೆಗೂ ತಟ್ಟಿದೆ ಬಿಸಿಲ ತಾಪ !   title=

ಬೆಂಗಳೂರು: ಸಿಲಿಕಾನ್ ಸಿಟಿ ಸೇರಿದಂತೆ ಇಡೀ ರಾಜ್ಯವೇ ಫುಲ್ ಹಾಟ್ ಆಗೊಗಿದೆ. ಉರಿ ಉರಿ ಬಿಸಿಲು ಜನರನ್ನು ಸುಡಲು ಆರಂಭಿಸಿದ್ರೆ, ಹೆಚ್ಚಿದ ತಾಪಮಾನದಿಂದ ಮೊಟ್ಟೆ ಉತ್ಪಾದನೆಗೂ ಎಫೆಕ್ಟ್ ತಟ್ಟಿದೆ. ರಾಜ್ಯಾದ್ಯಂತ ಆವರಿಸಿರುವ ಬಿಸಿಲಿನ ಬೇಗೆಯು ನಮಗಷ್ಟೇ ಅಲ್ಲ ಕೋಳಿ ಮೊಟ್ಟೆಗೂ ತಟ್ಟಿದೆ..

ರಾಜ್ಯದಲ್ಲಿ ಬಿಸಿಲ ಝಳಕ್ಕೆ ಮಾಂಸದ ಕೋಳಿಗಳು ಸಾವೀಗಿಡಾಗ್ತಿವೆ. ವಾತಾವರಣದಲ್ಲಿನ ಉಷ್ಣಾಂಶದಲ್ಲಿ 2ರಿಂದ 3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುತ್ತಲೇ ಇದೆ. ರಾಜ್ಯದಲ್ಲಿ ದಿನವೊಂದಕ್ಕೆ 12 ಲಕ್ಷ ಹಾಗೂ ಕಳೆದ 15 ದಿನಗಳ ಒಟ್ಟಾರೆ ಮೊಟ್ಟೆ ಉತ್ಪಾದನೆಯಲ್ಲಿ ಶೇ.15ರಿಂದ 20 ರಷ್ಟು ಇಳಿಕೆ ಕಂಡು ಬಂದಿದೆ. ಪ್ರತಿ ವರ್ಷ ಬೇಸಿಗೆ ಶುರುವಾಗ್ತಾ ಇದ್ದ ಹಾಗೆ ಮೊಟ್ಟೆ ಉತ್ಪಾದನೆಯಲ್ಲಿ ಇಳಿಕೆ ಕಂಡು ಬರುವುದು ಮಾಮೂಳಿ. ಆದರೆ ಈ ಬಾರಿ ಊಹಿಸಲಾರದಷ್ಟು ತಾಪಮಾನ ದಾಖಲಾಗಿದೆ. ಬಿಸಿಲ ಬೇಗೆಯು ಕೇವಲ ಕುಡಿಯುವ ನೀರಿಗಷ್ಟೇ ಅಲ್ಲ ಕೋಳಿ ಫಾರಂಗಳ ಮೊಟ್ಟೆ ಉತ್ಪಾದನೆಗೂ ಹೊಡೆತ ಬಿದ್ದಿದೆ.

ಇದನ್ನೂ ಓದಿ: ಬ್ಲಡ್ ಶುಗರ್‌ ಬೆಳಿಗ್ಗೆ ಹೆಚ್ಚಾಗುತ್ತಾ? ಈ ಹಸಿರು ರಸ ಮಧುಮೇಹಕ್ಕೆ ದಿವೌಷಧಿ.. ಕೂಡಲೇ ನಿಯಂತ್ರಣಕ್ಕೆ ಬರುತ್ತೆ ಸಕ್ಕರೆ ಮಟ್ಟ! ಸೇವಿಸುವ ವಿಧಾನ ಹೀಗಿರಬೇಕು

ಇನ್ನು ಬಿಸಿ ಗಾಳಿ ತಾಪಮಾನ ಏರಿಕೆಯಿಂದ ಕೋಳಿಗಳಿಗೆ ರೋಗ ಭಾದೆ ಹೆಚ್ಚಾಗಿ ಮೊಟ್ಟೆ ಉತ್ಪಾದನೆ ಇಳಿಕೆಯಾಗಿದೆ. ಹೀಗಾಗಿ ಇದೀಗ ಹೊಲ್ ಸೇಲ್ ನಲ್ಲಿ 5.65 ರೂಪಾಯಿ ಒಂದು ಮೊಟ್ಟೆಗೆ ದರ ನಿಗದಿಯಾಗಿದೆ. ಚಿಲ್ಲರೆ ದರ 6.50 ರೂಪಾಯಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಬೇಸಿಗೆಯಲ್ಲಿ ಕೋಳಿಗಳು ಆಹಾರ ಸೇವನೆ ಸಹಜವಾಗಿಯೇ ಕಡಿಮೆ ಇರುತ್ತೆ. ಹೆಚ್ಚಾಗಿ ನೀರು ಕುಡಿಯುತ್ತವೆ. ಇದರಿಂದ ಕೋಳಿಯ ಆಹಾರ ಸೇವನೆಯ ಎಫೆಕ್ಟ್ ನಿಂದ ಮೊಟ್ಟೆ ಇಳುವರಿ ಕುಂಠಿತಗೊಳ್ಳುತ್ತಿದೆ. 

ಒಟ್ಟಿನಲ್ಲಿ ಬೇಸಿಗೆಯಲ್ಲಿ ಬಿಸಿಲಿನ ಝಳ ಒಂದೆಡೆಯಾದರೆ ಕೋಳಿ ಸಾಕಾಣಿಕೆ ಬಲು ದುಬಾರಿಯಾಗಿದೆ. ಕುಡಿಯುವ ನೀರಿಗಷ್ಟೇ ಅಲ್ಲ ಕೋಳಿ ಫಾರಂಗಳ ಮೊಟ್ಟೆ ಉತ್ಪಾದನೆಗೂ ಹೊಡೆತ ಬಿದ್ದಿದೆ.

ಇದನ್ನೂ ಓದಿ: ಮೊಸರು ಖರ್ಜೂರ ಒಟ್ಟಿಗೆ ತಿಂದರೆ ಬೇಸಿಗೆಯಲ್ಲಿ ಕಾಡುವ ಈ ಸಮಸ್ಯೆ ದೂರವಾಗುವುದು! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News