ಬೆಂಗಳೂರು: ಬಿಜೆಪಿ ಕಾರ್ಯಕರ್ತ ಎನ್.ಎಸ್.ವಿನಯ್ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. 


COMMERCIAL BREAK
SCROLL TO CONTINUE READING

 ಕೆ.ಎಸ್.ಈಶ್ವರಪ್ಪ ಆಪ್ತ ಎನ್.ಎಸ್.ವಿನಯ್ ಯಡಿಯೂರಪ್ಪಗೆ ಈ ರೀತಿ ಪತ್ರ ಬರೆದಿದ್ದಾನೆ, ನಾನು ನಿಷ್ಠಾವಂತ ಬಿಜೆಪಿ ಕಾರ್ಯಕರ್ತ, ನೀವು ನನ್ನ ನೆರವಿಗೆ ನಿಲ್ಲಬೇಕಿತ್ತು. ಆದರೆ, ನನ್ನ ಕಿಡ್ನಾಪ್ ಪ್ರಕರಣದ ರೂವಾರಿಗಳ ನೆರವಿಗೆ ನಿಂತಿದ್ದೀರಿ, ಇದರಿಂದ ನೊಂದು ತಮಗೆ ಪತ್ರ ಬರೆಯುತ್ತಿದ್ದೇನೆ. ಇನ್ನಾದರೂ ನೀವು ನನ್ನ ರಕ್ಷಣೆಗೆ ಬನ್ನಿ ಎಂದು ಇಡೀ ಪ್ರಕರಣ ವಿವರಿಸಿರುವ ಎನ್.ಎಸ್.ವಿನಯ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. 


ನನ್ನ ಮೇಲೆ ಮಾರಣಾಂತಿಕ ಹಲ್ಲೆ ಆಗಿದೆ. ನಮ್ಮ ತಂದೆ-ತಾಯಿ ಹಾಗೂ ಗುರುಹಿರಿಯರ ಆಶೀರ್ವಾದದಿಂದ ನಾನು ಬದುಕುಳಿದಿರುವುದೇ ಹೆಚ್ಚು. ಆ ಘಟನೆಯಿಂದ ನನಗೆ ಗಂಭೀರವಾದ ಅಪಘಾತವಾದ ಕಾರಣ ನಾನು ಎರಡು ಬಾರಿ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿರುತ್ತೇನೆ. 


ಬಿಜೆಪಿ ರಾಜ್ಯಾಧ್ಯಕ್ಷರು, ಒಮ್ಮೆ ಮುಖ್ಯಮಂತ್ರಿಯಾಗಿದ್ದವುರು ಹಾಗೂ ಪಕ್ಷದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾದ ನೀವು ಪಕ್ಷದ ಸಾಮಾನ್ಯ ಕಾರ್ಯಕರ್ತರ ನೋವಿಗೆ ಸ್ಪಂಧಿಸುತ್ತಿರಾ ಎಂದು ಬವಿಸಿರುತ್ತೇನೆ. ಈಗಾಗಲೇ ನಿಮ್ಮ ಆಪ್ತ ಸಹಾಯಕರಾದ ಎನ್.ಆರ್. ಸಂತೋಷ್ ನಿಂದ ಇಡೀ ರಾಜ್ಯದ ಬಿಜೆಪ್ ಪಕ್ಷ, ನಾಯಕರು  ಹಾಗೂ ಕಾರ್ಯಕರ್ತರು ತಲೆತಗ್ಗಿಸುವಂತೆ ಮಾಡಿರುವುದು ಅತ್ಯಂತ ನೋವಿನ ಸಂಗತಿ. ಈಗ ಮತ್ತೆ ಅದಕ್ಕೆ ಅವಕಾಶ ಕೊಡದೆ ನನ್ನ ಮೇಲೆ ಕೊಲೆ ಯತ್ನ ಕಿಡ್ನಾಪ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಎನ್.ಆರ್. ಸಂತೋಷ್ ರವರನ್ನು ಪೋಷಿಸದೆ ನಿಷ್ಪಕ್ಷಪಾತ ತನಿಖೆಗೆ ಅನುವು ಮಾಡಿಕೊಟ್ಟು ರಾಜ್ಯದ ಜನತೆಯ ಮುಂದೆ ಕ್ರಿಮಿನಲ್ಗಳನ್ನು ನಾವು ಎಂದಿಗೂ ಪೋಷಿಸುವುದಿಲ್ಲ ಹಾಗೂ ರಕ್ಷಿಸುವುದಿಲ್ಲ ಎಂದು ಜನರಿಗೆ ಮನದಟ್ಟು ಮಾಡಿಕೊಡಿ ಎಂದು ಮನವಿ ಸಲ್ಲಿಸಿ ವಿನಯ್ ಪತ್ರ ಬರೆದಿದ್ದಾರೆ.