ಬೆಟ್ಟದಷ್ಟು ನೋವು ಹೊತ್ತಿರುವ ನವೀನ್ ಕುಟುಂಬ, ಸರ್ಕಾರಕ್ಕೆ ಮಾಡಿರುವ ಒಂದು ಮನವಿ ಇದು
ಉಕ್ರೇನ್ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ವಿದ್ಯಾರ್ಥಿ ನವೀನ್ ಅವರ ತಂದೆಯ ಮೇಲೆ ದುಃಖದ ಮಡುಗಟ್ಟಿದೆ. ಹೇಗಾದರೂ ಮಾಡಿ ನವೀನ್ ಶವವನ್ನು ಸರ್ಕಾರ ವಾಪಸ್ ತರುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಬೆಂಗಳೂರು : ಉಕ್ರೇನ್‌ನಲ್ಲಿ ರಷ್ಯಾದ ದಾಳಿಗೆ (Ukraine Russia War)ಬಲಿಯಾದ ರಾಜ್ಯದ ವಿದ್ಯಾರ್ಥಿ ನವೀನ್ ತಂದೆ ಶೇಖರಪ್ಪ ಜ್ಞಾನ್ ಗೌಡ ಅವರು, ತಮ್ಮ ಮಗನ ಸಾವಿನಿಂದ ತೀವ್ರ ಆಘಾತಕ್ಕೊಳಗಾಗಿದ್ದಾರೆ (Naveen Death in Ukraine). ಇದೀಗ ಹೇಗಾದರೂ ಮಾಡಿ ನವೀನ್ ಮೃತದೇಹವನ್ನು ದೇಶಕ್ಕೆ ತರುವಂತೆ, ನವೀನ್ ತಂದೆ ಸರ್ಕಾರವನ್ನು ಮನವಿ ಮಾಡಿದ್ದಾರೆ. ಪ್ರಧಾನ ಮಂತ್ರಿ ಕೂಡಾ ನವೀನ್ ಕುಟುಂಬದ ಮನವಿಯನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ.
ಘಟನೆಯ ಹಿಂದಿನ ದಿನ ಕೂಡಾ ಮನೆಯವರಿಗೆ ಫೋನ್ ಕರೆ ಮಾಡಿದ್ದ ನವೀನ್ ತಾನು ಸುರಕ್ಷಿತವಾಗಿರುವುದಾಗಿ ಹೇಳಿದ್ದರು (Naveen family). ಅಲ್ಲದೆ ತಮಗೆ ಊಟ ತಿಂಡಿಯ ಸಮಸ್ಯೆಯೂ ಇಲ್ಲ ಎಂದು ಹೇಳಿದ್ದರು. ಅಗತ್ಯ ಸಾಮಗ್ರಿಗಳಿಗೆ ಕೂಡಾ ಕೊರತೆಯಿಲ್ಲ ಎಂದಿದ್ದರು. ಆದರೆ, ಇದಾದ ಮಾರನೆ ದಿನವೇ ನವೀನ್ ಸಾವನ್ನಪ್ಪಿರುವ ಸುದ್ದಿ ಬಂದಿದೆ (Naveen death).
ಇದನ್ನೂ ಓದಿ : ರಾಜ್ಯದಲ್ಲಿ 202 ಹೊಸ ಕರೋನವೈರಸ್ ಪ್ರಕರಣ ದಾಖಲು
ನವೀನ್ ಮರಳಿ ಬರಬೇಕೆಂದು ಕುಟುಂಬಸ್ಥರು ಬಯಸಿದ್ದರು :
ಉಕ್ರೇನ್ ನಲ್ಲಿ (Ukraine) ಪರಿಸ್ಥಿತಿ ಹದಗೆಡುತ್ತಿದ್ದು,ಭಾರತಕ್ಕೆ ಮರಳಿ ಬರುವಂತೆ ನವೀನ್ ಕುಟುಂಬಸ್ಥರು ಹೇಳಿದ್ದರು. ಆದರೆ ಕಾಲೇಜಿಗೆ ರಜೆ ಘೋಷಿಸಿರಲಿಲ್ಲ. ಇಂತಹ ಪರಿಸ್ತಿತಿಗಳು ಎದುರಾಗುತ್ತಲೇ ಇರುತ್ತವೆ, ಮಾತುಕತೆ ಮೂಲಕ ಬಗೆಹರಿಯುತ್ತವೆ ಎಂದು ಕಾಲೇಜು ಕೂಡಾ ಪದೇ ಪದೇ ಹೇಳುತ್ತಿತ್ತು. ಆದರೆ ಪರಿಸ್ಥಿತಿ ಕೈ ಮೀರಿದಾಗ, ವಾಪಸ್ ಬಾರದ ಹೊರತು ಯಾವುದೇ ದಾರಿ ಇರಲಿಲ್ಲ .
ನವೀನ್ ಸಾವಿನೊಂದಿಗೆ ಮುರಿದು ಬಿಟ್ಟು ಹೆತ್ತವರ ಕನಸು :
ನವೀನ್ ಸಾವಿನೊಂದಿಗೆ ಅವರ ತಂದೆಯ ಕನಸಿನ ಗೋಪುರ ಕೂಡಾ ಮುರಿದುಬಿತ್ತು. ನವೀನ್ ಬಾಲ್ಯದಿಂದಲೂ ಡಾಕ್ಟರ್ ಆಗಬೇಕೆಂಬ ಆಸೆ ಹೊತ್ತಿದ್ದರು. ಆದರೆ ದೇಶದಲ್ಲಿ ಮೆಡಿಕಲ್ ಕಾಲೇಜಿನಲ್ಲಿ ಅಡ್ಮಿಷನ್ ಸಿಗದೇ ಹೋದಾಗ, ಒಂದಿಷ್ಟು, ಸಾಲ ಮಾಡಿ ವಿದೇಶಕ್ಕೆ ಕಳುಹಿಸಿದ್ದರು. ಇದೀಗ ನವೀನ್ ಸಾವಿನೊಂದಿಗೆ ಹೆತ್ತವರ ಕನಸು ಕೂಡಾ ಕೊಚ್ಚಿ ಹೋಗಿದೆ. ತಮ್ಮ ಪುತ್ರ ನವೀನ್ ನನ್ನು ಕಳೆದು ಕೊಂಡಾಯಿತು (Naveen Father). ಆದರೆ ಇನ್ನು ಯಾವ ತಂದೆ ತಾಯಿಗೂ ಈ ನೋವು ಸಿಗಬಾರದು ಎನ್ನುತ್ತಾರೆ ನವೀನ್ ತಂದೆ.
ಇದನ್ನೂ ಓದಿ :ನವೀನ್ ಸಾವಿಗೆ ರಷ್ಯಾ ಸೇನೆ ಎಷ್ಟು ಹೊಣೆಯೋ, ಬಿಜೆಪಿ ಸರ್ಕಾರವೂ ಅಷ್ಟೇ ಹೊಣೆ: ಸಿದ್ದರಾಮಯ್ಯ
ಪ್ರಧಾನಿ ಮೋದಿ ಸಂತಾಪ :
21 ವರ್ಷದ ಭಾರತೀಯ ವಿದ್ಯಾರ್ಥಿ ನವೀನ್ ಶೇಖರಪ್ಪ ಶೆಲ್ ದಾಳಿಗೆ ಗುರಿಯಾಗಿ ಮಂಗಳವಾರ, ಉಕ್ರೇನ್‌ನಲ್ಲಿ ಸಾವನ್ನಪ್ಪಿದರು. ನವೀನ್ ಕರ್ನಾಟಕದ ನಿವಾಸಿ. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆದ ಯುದ್ಧದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಕ್ಕೆ ಪ್ರಧಾನಿ ಮೋದಿ (PM Narendra Modi)ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತ ನವೀನ್ ತಂದೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿ ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.