New CM Of Karnataka: ರಾಜ್ಯದ 23ನೇ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಆಯ್ಕೆ
New CM Of Karnataka: ಕರ್ನಾಟಕದಲ್ಲಿ ಹೊಸ ಮುಖ್ಯಮಂತ್ರಿಗಳ ಆಯ್ಕೆಗೆ ಶಾಸಕರ ಸಭೆ ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್‌ನಲ್ಲಿ ಪ್ರಾರಂಭವಾಗಿದೆ. ಈ ಸಭೆಯಲ್ಲಿ ಹೊಸ ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ್ ಬೊಮ್ಮಾಯಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.
ಬೆಂಗಳೂರು: New CM Of Karnataka - ಕರ್ನಾಟಕದಲ್ಲಿ ಹೊಸ ಮುಖ್ಯಮಂತ್ರಿ ಆಯ್ಕೆಗಾಗಿ ನಡೆದಿದ್ದ ಶಾಸಕರ ಸಭೆ ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್‌ನಲ್ಲಿ ಮುಕ್ತಾಯಗೊಂಡಿದೆ. ಈ ಸಭೆಯಲ್ಲಿ ಪಾಲ್ಗೊಳ್ಳಲು ಪಕ್ಷದ ವೀಕ್ಷಕರಾದ ಧರ್ಮೇಂದ್ರ ಪ್ರಧಾನ್ (Dharmendr Pradhan) ಮತ್ತು ಜಿ ಕಿಶನ್ ರೆಡ್ಡಿ (G.Kishan Reddy) ಹಾಗೂ ಕರ್ನಾಟಕದ ಪಕ್ಷದ ಉಸ್ತುವಾರಿ ಅರುಣ್ ಸಿಂಗ್ ಉಪಸ್ಥಿತರಿದ್ದರು.
ಈ ಮೊದಲು ನಿರೀಕ್ಷಿಸಲಾದಂತೆ ಕರ್ನಾಟಕದ ನೂತನ ಮುಖ್ಯಮಂತ್ರಿ ಲಿಂಗಾಯತ ಸಮುದಾಯಕ್ಕೆ ಸೇರಿದ ವ್ಯಕ್ತಿಯೇ ಆಗಿರಲಿದ್ದಾರೆ ಎಂಬುದು ಸಾಬೀತಾಗಿದೆ. ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಎರಡು ಹೆಸರುಗಳ ಪೈಕಿ ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಅವರ ಹೆಸರು ನೂತನ ಮುಖ್ಯಮಂತ್ರಿಗೆ ಅಂತಿಮಗೊಳಿಸಲಾಗಿದೆ. ಈ ಕುರಿತು ಪಕ್ಷದ ವೀಕ್ಷಕರಾಗಿ ರಾಜ್ಯಕ್ಕೆ ಆಗಮಿಸಿರುವ ಧರ್ಮೇಂದ್ರ ಅಧಿಕೃತ ಘೋಷಣೆ ಮಾಡಿದ್ದಾರೆ. ಹೀಗಾಗಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಅರವಿಂದ್ ಬೆಲ್ಲದ (Aravind Bellad) ಅವರಿಗೆ ಹಿನ್ನಡೆಯಾಗಿದ್ದು, ಇದುವರೆಗೆ ನಡೆದ ರಾಜಕೀಯ ಪ್ರಹಸನ ಕೊನೆಗೂ ಅಂತ್ಯವಾಗಿದೆ.
ಇದನ್ನೂ ಓದಿ-ಸಿಎಂ ರೇಸ್‌ನಲ್ಲಿ ಐವರು ನಾಯಕರು: ಇಂದು ಸಂಜೆಯೇ ಘೋಷಣೆ ಸಾಧ್ಯತೆ..?
61 ವರ್ಷದ ಬಸವರಾಜ್ ಬೊಮ್ಮಾಯಿ ಓರ್ವ ಮೃದುಭಾಷಿ ವ್ಯಕ್ತಿಯಾಗಿದ್ದು, ಮಾತಿನ ಮೇಲೆ ಅವರಿಗೆ ತುಂಬಾ ಹಿಡಿತ ಇದೆ. ಕನ್ನಡ, ಹಿಂದಿ ಹಾಗೂ ಇಂಗ್ಲೀಶ್ ಮೂರೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು. ಅಮಿತ್ ಷಾ ಅವರ ಜೊತೆಗೆ ಬೊಮ್ಮಾಯಿ ಉತ್ತಮ ಸಂಬಂಧ ಹೊಂದಿದ್ದಾರೆ. ಆದರೆ, ಬಸವರಾಜ್ ಬೋಮ್ಮಾಯಿ ಅವರು RSS ಹಿನ್ನೆಲೆಯನ್ನು ಹೊಂದಿಲ್ಲ. ಭಾರತೀಯ ಜನತಾ ಪಕ್ಷಕ್ಕೆ (BJP) ಬರುವ ಮುನ್ನ ಅವರು ಜನತಾದಳ ಸೆಕ್ಯೂಲರ್ ನಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ-ಅಭಿಮಾನ ಅತಿರೇಕಕ್ಕೆ ಹೋಗಬಾರದೆಂದು ಮನವಿ ಮಾಡಿದ ಬಿ.ಎಸ್.ಯಡಿಯೂರಪ್ಪ.!
ಸಿಎಂ ಸ್ಥಾನದ ಎರಡನೇ ಆಕಾಂಕ್ಷಿಯಾಗಿದ್ದ 51 ವರ್ಷದ ಅರವಿಂದ್ ಬೆಲ್ಲದ ಕೂಡ ಲಿಂಗಾಯತ ಸಮುದಾಯದಿಂದಲೇ ಬಂದವರಾಗಿದ್ದಾರೆ. ವಿದೇಶದಲ್ಲಿ ವ್ಯಾಸಂಗ ಮಾಡಿರುವ ಬೆಲ್ಲದ ಓರ್ವ ಯಶಸ್ವಿ ಉದ್ಯಮಿಯಾಗಿದ್ದಾರೆ. 2013 ಹಾಗೂ 2018ರ ಚುನಾವಣೆಗಳಲ್ಲಿ ಅವರು ಚುನಾಯಿತಗೊಂಡಿದ್ದಾರೆ. ಆದರೆ, ಲಿಂಗಾಯತ ಸಮುದಾಯದ ಸ್ವಾಮೀಜಿಗಳು ಹಾಗೂ ಸಾಧು-ಸಂತರಲ್ಲಿ ಇವರು ಕಡಿಮೆ ಗುರುತಿಸಿಕೊಂಡಿದ್ದಾರೆ. ಇನ್ನೊಂದೆಡೆ ಮಾಧ್ಯಮಗಳಲ್ಲಿ ಯಡಿಯೂರಪ್ಪ ಅವರ ವಿರುದ್ಧದ ಟೀಕೆ ಇವರಿಗೆ ಮುಳುವಾಗಿದೆ ಎಂದರೆ ತಪ್ಪಾಗಲಾರದು.
ಇದನ್ನೂ ಓದಿ-ಬಿಎಸ್ವೈ ಬಗ್ಗೆ ಅನುಕಂಪವಿದೆ, ರಾಜೀನಾಮೆಯ ಕಾರಣ ಬಹಿರಂಗಪಡಿಸಲಿ: ಸಿದ್ದರಾಮಯ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.