BS Yadiyurappa Resignation: BSY ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾರಣವೇನು? ಇಲ್ಲಿದೆ ಡೀಟೇಲ್ಸ್

BS Yadiyurappa Resignation - ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅವರ 4ನೇ ಕಾರ್ಯಕಾಲ ಕೂಡ ಬೇಗನೆ ಮುಕ್ತಾಯಗೊಂಡಿದೆ. ಇಂತಹ ಪ್ರಬಲ ನಾಯಕ 'ರಾಜಾಹುಲಿ' ಎಂದೇ ಖ್ಯಾತ BSY ಕೇವಲ ಎರಡು ವರ್ಷಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗೆ ಏಕೆ  ರಾಜೀನಾಮೆ ನೀಡಿದರು? ಆ ವಿಶೇಷ ಕಾರಣಗಳು ಯಾವುವು? ಯಾವ ಕಾರಣದಿಂದ ಹೈ ಕಮಾಂಡ್ಅವರಿಗೆ ರಾಜೀನಾಮೆಯನ್ನು ನೀಡಲು ಸೂಚಿಸಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

Written by - Nitin Tabib | Last Updated : Jul 26, 2021, 05:21 PM IST
  • ರಾಜ್ಯದ CM ಆಗಿ ಬಿ.ಎಸ್. ಯಡಿಯೂರಪ್ಪ ಅವರ 4ನೇ ಕಾರ್ಯಕಾಲ ಕೂಡ ಬೇಗನೆ ಮುಕ್ತಾಯಗೊಂಡಿದೆ.
  • ಲಿಂಗಾಯತ ಸಮುದಾಯದ ಪ್ರಬಲ ನಾಯಕ BSY ಕೇವಲ ಎರಡು ವರ್ಷಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗೆ ಏಕೆ ರಾಜೀನಾಮೆ ನೀಡಿದರು?
  • ಆ ವಿಶೇಷ ಕಾರಣಗಳು ಯಾವುವು? ಯಾವ ಕಾರಣದಿಂದ ಹೈ ಕಮಾಂಡ್ಅವರಿಗೆ ರಾಜೀನಾಮೆಯನ್ನು ನೀಡಲು ಸೂಚಿಸಿದೆ?
BS Yadiyurappa Resignation: BSY ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾರಣವೇನು? ಇಲ್ಲಿದೆ ಡೀಟೇಲ್ಸ್

ನವದೆಹಲಿ: BS Yadiyurappa Resignation - ಜುಲೈ 26, 2019ರಂದು ರಾಜ್ಯದ ಕಾಂಗ್ರೆಸ್-JD(S) ನೇತೃತ್ವದ ಸರ್ಕಾರ ಉರುಳಿದ ಬಳಿಕ  B.S. ಯಡಿಯೂರಪ್ಪ 4ನೇ ಬಾರಿಕೆ ಕರ್ನಾಟಕದ ಮುಖ್ಯಮಂತ್ರಿಯಾಗಿ (Karnataka CM) ಅಧಿಕಾರ ಸ್ವೀಕರಿಸಿದ್ದರು. ಆದರೆ, ಅವರ ನಾಲ್ಕನೇ ಅವಧಿಯೂ ಕೂಡ ಹೆಚ್ಚುಕಾಲ ಮುಂದುವರೆದಿಲ್ಲ. ಅವರು ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದ ಅವಧಿ ವಿವಾದಗಳಿಂದ ತುಂಬಿದ್ದ ಹಿನ್ನೆಲೆ ಯಡಿಯೂರಪ್ಪ ಮನನೊಂದು ಹಟಾತ್ ರಾಜೀನಾಮೆ ಘೋಷಿಸುವ ನಿರ್ಧಾರ ಕೈಗೊಂಡರಾ? ಎಂಬಿತ್ಯಾದಿ ಪ್ರಶ್ನೆಗಳು (Reasons For Yadiyurappa's Resignation) ಜನರ ಮನಸ್ಸಿನಲ್ಲಿ ಮೂಡಿವೆ.

BSY ಕರ್ನಾಟಕದ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ ಧೀಮಂತ ನಾಯಕರಾಗಿದ್ದಾರೆ. 2007ರಲ್ಲಿ ಪ್ರಥಮ ಬಾರಿಗೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದರು. ಆದರೆ, ಕೇವಲ ಒಂದೇ ವಾರದಲ್ಲಿ ಅವರು ಮುಖ್ಯಮಂತ್ರಿ ಕುರ್ಚಿಯೀಂದ ಕೆಳಗಿಳಿದರು. ಬಳಿಕ ಅವರು 2008 ರಿಂದ 2011ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆದರೆ, ಭ್ರಷ್ಟಾಚಾರದ ಆರೋಪದ ಹಿನ್ನೆಲೆ ಅವರಿಗೆ ರಾಜಿನಾಮೆ ನೀಡುವ ಕಾಲ ಬಂದೊದಗಿತು. ಇದರ ನಂತರ 2018ರಲ್ಲಿ ಅವರು ಕೇವಲ ಎರಡು ದಿನಗಳ ಅವಧಿಗೆ ಮುಖ್ಯಮಂತ್ರಿಯಾದರು. ಬಹುಮತ ಸಾಬೀತುಪಡಿಸಲು ಸಾಧ್ಯವಾಗದ ಕಾರಣ ಅವರು ಮತ್ತೆ ರಾಜೀನಾಮೆ ನೀಡಿದರು. ಆದರೆ, ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ BSY ಕಾಂಗ್ರೆಸ್ ಹಾಗೂ JDS ಪಕ್ಷದ 13 ಶಾಸಕರ ಬೆಂಬಲದೊಂದಿಗೆ ಮತ್ತೆ ಮುಖ್ಯಮಂತ್ರಿಯಾಗಿದ್ದರು.

ಇದಾದ ಬಳಿಕ ಯಡಿಯೂರಪ್ಪ 2023 ಅಂದರೆ ಮುಂದಿನ ವಿಧಾನ ಸಭೆ ಚುನಾವಣೆಗಳವರೆಗೆ ಸಿಎಂ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಹಾಗೆ ನಡೆದಿಲ್ಲ. ಏಕೆಂದರೆ ಇಂದು ಮತ್ತೊಮ್ಮೆ BSY ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರನ್ನು ಕುರ್ಚಿಯಿಂದ ಕೆಳಗಿಳಿಸಲು ಕಾರಣಗಳಾದರೂ ಯಾವುವು ಎಂಬ ಕುತೂಹಲ ಜನರ ಮನಸ್ಸಿನಲ್ಲಿ ಮೂಡಿವೆ.

1. ಆರಂಭದಿಂದಲೇ BSYಗೆ ಪಕ್ಷದಲ್ಲಿ ವಿರೋಧ ಎದುರಾಗಿತ್ತು. ಪಕ್ಷದ ಹಿರಿಯ ನಾಯಕರು ಆರಂಭದಿಂದಲೇ ಅವರನ್ನು ವಿರೋಧಿಸಿದ್ದರು. ಯಡಿಯೂರಪ್ಪ ಅವರು ಪಕ್ಷದ ಹಿರಿಯ ನಾಯಕರನ್ನು ಕಡೆಗಣಿಸಿ, ಹೊಸಬರಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು.

2. ಕಳೆದ ಒಂದು ವರ್ಷದಿಂದ ಪಕ್ಷದ ಹೈಕಮಾಂಡ್ BSY ಮೇಲೆ ಒತ್ತಡ ಹೇರಿತ್ತು. ಪಕ್ಷದಲ್ಲಿನ ನಾಯಕರು ಯಡಿಯೂರಪ್ಪಗೆ ಸಂಬಂಧಿಸಿದಂತೆ ತಮ್ಮ ಅಸಮಾಧಾನ ಹೊರ ಹಾಕಲು ಆರಂಭಿಸಿದಾಗ ಮತ್ತು ಅವರಲ್ಲಿನ ಕೆಲವರು ಹೈಕಮಾಂಡ್ ಈ ಕುರಿತು ದೂರು ನೀಡಿದ ಬಳಿಕ ಯಡಿಯೂರಪ್ಪ ಮೇಲೆ ಒತ್ತಡ ಬೀಳಲಾರಂಭಿಸಿತ್ತು. ಈ ಹಿನ್ನೆಲೆ ಯಡಿಯೂರಪ್ಪ ಶೀಘ್ರದಲ್ಲಿಯೇ ರಾಜೀನಾಮೆ ನೀಡಬಹುದು ಎಂಬ ಚರ್ಚೆಗಳು ಆರಂಭಗೊಂಡಿದ್ದವು.

3. ರಾಜ್ಯಸಭೆಯ ಚುನಾವಣೆಗಳ ಸಂದರ್ಭದಲ್ಲಿ ಯಡಿಯೂರಪ್ಪಾ ಕೇಂದ್ರಕ್ಕೆ ತಮ್ಮ ಪರವಾಗಿ ಹಲವಾರು ಹೆಸರುಗಳನ್ನು ಸೂಚಿಸಿದ್ದರು. ಆದರೆ, ಪಕ್ಷದ ಹೈ ಕಮಾಂಡ್ (BJP High Command) ಯಡಿಯೂರಪ್ಪ ಮಾಡಿದ್ದ ಶಿಫಾರಸ್ಸುಗಳನ್ನು ಕಡೆಗಣಿಸಿತ್ತು ಮತ್ತು ಇದರಿಂದ ಡಿಯೂರಪ್ಪಾ ಪಕ್ಷದ ಹೈಕಮಾಂಡ್ ಫೇವರಿಟ್ ಆಗಿ ಉಳಿದಿಲ್ಲ ಎಂಬುದು ಸ್ಪಷ್ಟವಾಗಿತ್ತು. ಅಷ್ಟೇ ಅಲ್ಲ ಇದು ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಸ್ಪಷ್ಟ ಸಂಕೇತವಾಗಿತ್ತು ಎಂದರೆ ತಪ್ಪಾಗಲಾರದು.

ಇದನ್ನೂ ಓದಿ- Breaking News: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬಿ.ಎಸ್.ಯಡಿಯೂರಪ್ಪ

4. ಕಳೆದ ಕೆಲವು ತಿಂಗಳುಗಳಿಂದ ರಾಜ್ಯದ BJP ಮುಖಂಡರು ಯಡಿಯೂರಪ್ಪ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿದ್ದರೂ ಕೂಡ ಪಕ್ಷದ ಹೈಕಮಾಂಡ್ ಯಾರ ವಿರುದ್ಧವೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಪಕ್ಷದ ಹೈಕಮಾಂಡ್‌ನ ಆದೇಶದ ಮೇರೆಗೆ ಇದೆಲ್ಲವೂ ನಡೆಯುತ್ತಿದೆ ಎಂದೇ ಬಿಂಬಿಸಲಾಗಿತ್ತು. ಅವರು ಇನ್ನು ಮುಂದೆ ಪಕ್ಷದ ಹೈಕಮಾಂಡ್‌ನ ಆಯ್ಕೆಯಾಗಿಲ್ಲ ಎಂಬ ಎರಡನೇ ಸಂಕೇತ ಇದಾಗಿತ್ತು. 

5. ರಾಜ್ಯದ ಪಕ್ಷದ ಮುಖಂಡರಷ್ಟೇ ಅಲ್ಲ, ರಾಜಕೀಯವಲಯದಲ್ಲಿಯೂ ಕೂಡ ಯಡಿಯೂರಪ್ಪಾ (BS Yadiyurappa) ಅವರ ಪುತ್ರ ಬಿ.ವೈ ವಿಜಯೇಂದ್ರ ಅವರು ಪ್ರಾಕ್ಸಿ ಮುಖ್ಯಮಂತ್ರಿ ರೂಪದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಚರ್ಚೆಗಳ ಜೊತೆಗೆ ಭ್ರಷ್ಟಾಚಾರದ ಆರೋಪಗಳು ಕೂಡ ಕೇಳಿಬಂದಿದ್ದವು.

ಇದನ್ನೂ ಓದಿ- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಜೆ.ಪಿ.ನಡ್ಡಾ ಶಹಬ್ಬಾಸ್ ಗಿರಿ..!

6.  ಬಿ.ಎಸ್ ಯಡಿಯೂರಪ್ಪಾ ಅವರ ಜಾಗದಲ್ಲಿ ರಾಜ್ಯದಲ್ಲಿ ಎರಡನೇ ಹಂತದ ನಾಯಕತ್ವ ರೂಪಿಸಲು ಹೈಕಮಾಂಡ್ ನಿರ್ಧರಿಸಿದ್ದು, ಅವರ ನೇತೃತ್ವದಲ್ಲಿಯೇ ಮುಂದಿನ ಅಂದರೆ 2023ರ ರಾಜ್ಯ ಚುನಾವಣೆಗಳನ್ನು ಎದುರಿಸಲು ಬಯಸಿದೆ ಎಂಬ ಚರ್ಚೆಗಳು ಕೂಡ ಬಿ ಎಸ್ ವೈ ರಾಜೀನಾಮೆಗೆ ಒಂದು ಕಾರಣ ಎಂದೂ ಹೇಳಲಾಗುತ್ತಿದೆ.

7. ರಾಜ್ಯದ ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಗಳ ಪ್ರಕಾರ, ಬಿ.ಎಸ್. ಯಡಿಯೂರಪ್ಪಾ ಹೈಕಮಾಂಡ್ ಸೇರಿದಂತೆ RSS ಬೆಂಬಲವನ್ನು ಕೂಡ ಕಳೆದುಕೊಂಡಿದ್ದು, ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿಯಾಗಿ ಬರುವ ವ್ಯಕ್ತಿ RSS ಬೆಂಬಲದ ವ್ಯಕ್ತಿಯೇ ಅಗಿರಲಿದ್ದಾರೆ ಎಂಬ ಚರ್ಚೆಗಳು ಇದೀಗ ಆರಂಭಗೊಂಡಿವೆ.

ಇದನ್ನೂ ಓದಿ- BS Yediyurappa : ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ? ಇಂದು ಸಂಜೆ ತೀರ್ಮಾನ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News