/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಕೊಟ್ಟಾಗಿದೆ. ಈಗ ಕರ್ನಾಟಕದ ಮುಂದಿನ ಸಿಎಂ ಯಾರಾಗ್ತಾರೆ ಎಂಬ ಕುತೂಹಲ ಪ್ರತಿಯೊಬ್ಬರಲ್ಲೂ ಮೂಡಿದೆ. ಮುಂದಿನ ಸಿಎಂ ಆಯ್ಕೆ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಕೂಡಾ ತಲೆ ಕೆಡಿಸಿಕೊಂಡಿದೆ. ಯಾರಿಗೆ ಸಿಎಂ ಪಟ್ಟ ಸಿಗುತ್ತೆ ಅನ್ನೋದು ಇನ್ನೂ ಕೂಡ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ಈ ಮಧ್ಯೆ ಬಿಜೆಪಿ ವರಿಷ್ಟರ ಗಮನ ಐವರು ನಾಯಕರ ಮೇಲಿದೆ ಎನ್ನಲಾಗಿದೆ. ಈ ಐವರಲ್ಲಿಯೇ ಒಬ್ಬರಿಗೆ ಮುಖ್ಯಮಂತ್ರಿ ಪಟ್ಟ ಖಚಿತ ಎನ್ನಲಾಗುತ್ತಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Pralhad Joshi), ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಬಸವರಾಜ್ ಬೊಮ್ಮಾಯಿ, ಮುರುಗೇಶ್ ನಿರಾಣಿ ಹಾಗೂ ಅರವಿಂದ್ ಬೆಲ್ಲದ್ ಈ ಐವರು ನಾಯಕರ ಮೇಲೆ ಹೈಕಮಾಂಡ್ ಕಣ್ಣಿಟ್ಟಿದೆ ಅಂತಾ ತಿಳಿದುಬಂದಿದೆ. ಯಾರು ಸಿಎಂ ಆದರೆ ಪಕ್ಷಕ್ಕೆ ಹೆಚ್ಚಿನ ಲಾಭ ಎಂಬ ಲೆಕ್ಕಾಚಾರ ಮಾಡಿ ಆಯ್ಕೆ ನಡೆಯಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಬಿಎಸ್​ವೈ ಬಗ್ಗೆ ಅನುಕಂಪವಿದೆ, ರಾಜೀನಾಮೆಯ ಕಾರಣ ಬಹಿರಂಗಪಡಿಸಲಿ: ಸಿದ್ದರಾಮಯ್ಯ

ಬಿ.ಎಲ್.ಸಂತೋಷ್ ಮುಖ್ಯಮಂತ್ರಿ..?

ಸಿಎಂ ಸ್ಥಾನಕ್ಕೆ ಬಿಎಸ್​ವೈ (BSY) ರಾಜೀನಾಮೆ ನೀಡುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ ಎಂಬ ಚರ್ಚೆ ಜೋರಾಗಿದೆ. ಧರ್ಮೇಂದ್ರ ಪ್ರಧಾನ್ ಅವರನ್ನು ಕರ್ನಾಟಕ ಸಿಎಂ ಆಯ್ಕೆಯ ವೀಕ್ಷಕರಾಗಿ ನೇಮಕ ಮಾಡಲಾಗಿದೆ. ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ವೀಕ್ಷಕರಾಗಿ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ನಿನ್ನೆ ರಾತ್ರಿಯೇ ಬೆಂಗಳೂರಿಗೆ ಬಿ.ಎಲ್.ಸಂತೋಷ್(BL Santhosh) ಆಗಮಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ. ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ನಿಂದ ಅಚ್ಚರಿಯ ನಿರ್ಧಾರ ಬರಲಿದೆ ಅಂತಾ ಹೇಳಲಾಗ್ತಿದೆ. ಹೀಗಾಗಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಬಿ.ಎಲ್.ಸಂತೋಷ್ ಆಯ್ಕೆಯಾಗುತ್ತಾರಾ..? ಅನ್ನೋ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಜೆ.ಪಿ.ನಡ್ಡಾ ಶಹಬ್ಬಾಸ್ ಗಿರಿ..!

ಇಂದು ಸಂಜೆ ಬಿಜೆಪಿ ಶಾಸಕಾಂಗ ಸಭೆ, ಸಿಎಂ ಆಯ್ಕೆ..?

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಇಂದು ಸಂಜೆ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದೆ. ಸಭೆ ನಡೆಯುವ ಬಗ್ಗೆ ಶಾಸಕಾಂಗ ಪಕ್ಷದ ಕಚೇರಿಯ ಬದಲು ರಾಜ್ಯ ಬಿಜೆಪಿ ಕಚೇರಿಯಿಂದ ಬಿಜೆಪಿ(BJP) ಶಾಸಕರಿಗೆ ಮಾಹಿತಿ ರವಾನಿಸಲಾಗಿದೆಯಂತೆ. ಸಂಜೆ 7 ಗಂಟೆಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಯಲಿದ್ದು, ಶಾಸಕರ ಸಮ್ಮುಖದಲ್ಲಿಯೇ ನೂತನ ಮುಖ್ಯಮಂತ್ರಿಯ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.BJP Meeting

ಇಕ್ಕಟ್ಟಿನಲ್ಲಿರುವ ವಲಸಿಗ ಶಾಸಕರು

ಮೈತ್ರಿ ಸರ್ಕಾರವನ್ನು ಬೀಳಿಸಿ ಬಿಜೆಪಿ ಸೇರಿರುವ ವಲಸಿಗ ಶಾಸಕರಿಗೆ ದೊಡ್ಡ ಇಕ್ಕಟ್ಟು ಎದುರಾಗಿದೆ. ಬಿಜೆಪಿ ಸರ್ಕಾರ ರಚಿಸಲು ನೆರವಾದ ಕಾಂಗ್ರೆಸ್-ಜೆಡಿಎಸ್ ವಲಸಿಗ ಶಾಸಕರಿಗೆ ಬಿ.ಎಸ್.ಯಡಿಯೂರಪ್ಪ(BS Yediyurappa) ಎಲ್ಲ ರೀತಿಯ ಸ್ಥಾನಮಾನ ನೀಡಿದ್ದರು. ಇದೀಗ ಅವರು ರಾಜೀನಾಮೆ ನೀಡಿರುವುದರಿಂದ ವಲಸಿಗ ಶಾಸಕರು ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ. ನೂತನ ಸಿಎಂ ಘೋಷಣೆಯಾಗಿ, ಹೊಸ ಸಚಿವ ಸಂಪುಟ ರಚನೆಯಾಗಲಿದೆ. ಈ ವೇಳೆ ತಮಗೆ ಸೂಕ್ತ ಸ್ಥಾನಮಾನ ಸಿಗದಿದ್ದರೆ ಏನು ಅಂತಾ ಅವರು ತಲೆಕೆಡಿಸಿಕೊಂಡಿದ್ದಾರೆ.     

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
BJP High command shortlists 5 names for karnataka cm post
News Source: 
Home Title: 

ಸಿಎಂ ರೇಸ್‌ನಲ್ಲಿ ಐವರು ನಾಯಕರು: ಇಂದು ಸಂಜೆಯೇ ಘೋಷಣೆ ಸಾಧ್ಯತೆ..?

ಸಿಎಂ ರೇಸ್‌ನಲ್ಲಿ ಐವರು ನಾಯಕರು: ಇಂದು ಸಂಜೆಯೇ ಘೋಷಣೆ ಸಾಧ್ಯತೆ..?
Caption: 
ಯಾರಾಗ್ತಾರೆ ಕರ್ನಾಟಕದ ನೂತನ ಸಿಎಂ..?
Yes
Is Blog?: 
No
Tags: 
Facebook Instant Article: 
Yes
Highlights: 

ಸಿಎಂ ಆಯ್ಕೆ ವಿಚಾರದಲ್ಲಿ ಐವರು ನಾಯಕರ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಹೈಕಮಾಂಡ್

ಅಚ್ಚರಿಯ ಆಯ್ಕೆಯಲ್ಲಿ ಮುಖ್ಯಮಂತ್ರಿಯಾಗುತ್ತಾರಾ ಬಿ.ಎಲ್.ಸಂತೋಷ್..?

ಅತಂತ್ರ ಪರಿಸ್ಥಿತಿಯಲ್ಲಿರುವ ವಲಸಿಗ ಶಾಸಕರಿಗೆ ಸಿಗುತ್ತಾ ಸೂಕ್ತ ಸ್ಥಾನಮಾನ..?

Mobile Title: 
ಸಿಎಂ ರೇಸ್‌ನಲ್ಲಿ ಐವರು ನಾಯಕರು: ಇಂದು ಸಂಜೆಯೇ ಘೋಷಣೆ ಸಾಧ್ಯತೆ..?
Zee Kannada News Desk
Publish Later: 
No
Publish At: 
Tuesday, July 27, 2021 - 12:53
Created By: 
Puttaraj K Alur
Updated By: 
Puttaraj K Alur
Published By: 
Puttaraj K Alur
Request Count: 
1
Is Breaking News: 
No