Davanagere- 20 ದಿನದ ಹಿಂದೆ ಆಸ್ಪತ್ರೆಯಿಂದ ಕಳುವಾಗಿದ್ದ ನವಜಾತ ಶಿಶು ಪತ್ತೆ!
Newborn Baby: ಕಳೆದ 20 ದಿನಗಳ ಹಿಂದೆ ಚಾಮರಾಜಪೇಟೆಯ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನವಜಾತ ಶಿಶುವೊಂದು ನಾಪತ್ತೆಯಾಗಿತ್ತು. ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಮಹಿಳೆಯೊಬ್ಬಳು ಆಸ್ಪತ್ರೆಯಲ್ಲಿ ಅನುಮಾನಾಸ್ಪದವಾಗಿ ಓಡಾಡಿದ್ದಳು. ಅಲ್ಲದೆ, ಕೊನೆಗೆ ಅದೇ ಮಹಿಳೆ ಮಗುವೊಂದನ್ನ ಎತ್ತಿಕೊಂಡು ಹೋಗಿದ್ದಳು.
ದಾವಣಗೆರೆ: ಕಳೆದ ಇಪ್ಪತ್ತು ದಿನಗಳ ಹಿಂದೆ ಸರ್ಕಾರಿ ಹೆರಿಗೆ ಆಸ್ಪತ್ರೆಯಿಂದ (Govt Hospital) ನವಜಾತ ಶಿಶುವೊಂದು ನಾಪತ್ತೆಯಾಗಿತ್ತು. ಇದೀಗ ದಾವಣಗೆರೆಯ ಬಸ್ ನಿಲ್ದಾಣದಲ್ಲಿ ನಿಂತಿದ್ದ ವೃದ್ಧೆ ಕೈಗೆ ಮಗು ಕೊಟ್ಟು ಮಹಿಳೆಯೊಬ್ಬಳು ಪರಾರಿಯಾಗಿದ್ದಾಳೆ. ಇಪ್ಪತ್ತು ದಿನಗಳ ಹಿಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಕಳುವಾಗಿದ್ದು ಇದೇ ಮಗು ಎಂದು ಹೇಳಲಾಗುತ್ತಿದೆ.
ವಾಸ್ತವವಾಗಿ, ಕಳೆದ 20 ದಿನಗಳ ಹಿಂದೆ ಚಾಮರಾಜಪೇಟೆಯ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನವಜಾತ ಶಿಶುವೊಂದು (Newborn Baby) ನಾಪತ್ತೆಯಾಗಿತ್ತು. ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಮಹಿಳೆಯೊಬ್ಬಳು ಆಸ್ಪತ್ರೆಯಲ್ಲಿ ಅನುಮಾನಾಸ್ಪದವಾಗಿ ಓಡಾಡಿದ್ದಳು. ಅಲ್ಲದೆ, ಕೊನೆಗೆ ಅದೇ ಮಹಿಳೆ ಮಗುವೊಂದನ್ನ ಎತ್ತಿಕೊಂಡು ಹೋಗಿದ್ದಳು.
ಹರಪನಹಳ್ಳಿ ಮೂಲದ ಇಸ್ಮಾಯಿಲ್ ಜಬೀವುಲ್ಲಾ, ಉಮೇಸಲ್ಮಾ ದಂಪತಿ ಮಗು ಕಳ್ಳತನವಾಗಿತ್ತು. ಮಗು ಕಳ್ಳತನವಾದ (Baby Stolen) ಬಗ್ಗೆ ಮಹಿಳಾ ಪೊಲೀಸ್ ಠಾಣೆ ಹಾಗೂ ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದನ್ನೂ ಓದಿ- Controversy: ಆಜಾನ್ ವಿವಾದ ಹಿನ್ನೆಲೆ: ಮಸೀದಿ-ಮಂದಿರಗಳಿಗೆ ಪೊಲೀಸರು ನೀಡಿದ ನೊಟೀಸ್‌ಗಳೆಷ್ಟು..?
ಮಗು ಪತ್ತೆಗಾಗಿ ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದ್ದರು. ಮಗು ಪತ್ತೆಗಾಗಿ ಪಾಲಕರು ಕೂಡ ಆಸ್ಪತ್ರೆ ಮುಂದೆ ಅಹೋರಾತ್ರಿ ಧರಣಿ ಕೂಡ ನಡೆಸಿದ್ದರು. ಅಲ್ಲದೆ, ಮಗು ಹಾಗೂ ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ 25 ಸಾವಿರ ರೂ. ಬಹುಮಾನ ಕೂಡ ಘೋಷಣೆ ಮಾಡಲಾಗಿತ್ತು.
ಆದರೆ, ಈಗ ಆಶ್ಚರ್ಯಕರ ರೀತಿಯಲ್ಲಿ ಮಗುವೊಂದು ಪತ್ತೆಯಾಗಿದೆ. ದಾವಣಗೆರೆಯ ಬಸ್ ನಿಲ್ದಾಣದಲ್ಲಿ ನಿಂತಿದ್ದ ವೃದ್ಧೆ ಕೈಗೆ ಮಗು ಕೊಟ್ಟು ಮಹಿಳೆಯೊಬ್ಬಳು ಪರಾರಿಯಾಗಿದ್ದಾಳೆ. ಇಸ್ಮಾಯಿಲ್ ದಂಪತಿ ಈ ಮಗು ನಮ್ಮದೇ ಎನ್ನುತ್ತಿದ್ದು ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಮುಂದಾಗಿದ್ದಾರೆ. ಬೇಕಾದರೆ ಡಿಎನ್ಎ ಪರೀಕ್ಷೆ ಮಾಡಿಸಿ ಎಂದು ದಂಪತಿಗಳು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ- BMTCಯಿಂದ ನೂತನ ಆ್ಯಪ್ ಬಿಡುಗಡೆ, ಪ್ರಯಾಣಿಕರಿಗೆ ಮೊಬೈಲ್ ಪಾಸ್
ಇನ್ನೊಂದೆಡೆ ಮಗು ಬಿಟ್ಟು ಹೋದ ಮಹಿಳೆ ಮತ್ತು ಮಗು ತೆಗೆದುಕೊಂಡು ಹೋದ ಮಹಿಳೆ ಬಗ್ಗೆ ಯಾವುದೇ ಸುಳಿವಿಲ್ಲ. ವೈದ್ಯಕೀಯ ಪರೀಕ್ಷೆ ಬಳಿಕವಷ್ಟೇ ಕಳುವಾದ ಮಗು ಇದೇನಾ ಅಥವಾ ಇದು ಬೇರೆ ಮಗುನಾ ಎಂಬುದನ್ನು ತಿಳಿಯಬೇಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.