BMTCಯಿಂದ ನೂತನ‌ ಆ್ಯಪ್ ಬಿಡುಗಡೆ, ಪ್ರಯಾಣಿಕರಿಗೆ ಮೊಬೈಲ್ ಪಾಸ್

Tummoc App ಮೂಲಕ ಮೊಬೈಲ್ ಆಧಾರಿತ ಡಿಜಿಟಲ್ ಪಾಸ್ ಅನ್ನು ಪರಿಚಯಿಸಲಾಗಿದೆ. ಪ್ರಯಾಣಿಕರು ಈ ಮೊಬೈಲ್ ಅಪ್ಲಿಕೇಶನ್ ಮೂಲಕ  ಆನ್ ಲೈನ್ ನಲ್ಲಿ ಪಾಸ್ ಖರೀದಿಸಬಹುದು. 

Written by - Zee Kannada News Desk | Last Updated : Apr 6, 2022, 11:05 AM IST
  • ಬಿಎಂಟಿಸಿಯಿಂದ ನೂತನ ಆ್ಯಪ್ ಬಿಡುಗಡೆ
  • ಪ್ರಯಾಣಿಕರಿಗೆ ಡಿಜಿಟಲ್ ಪಾಸ್ ಪರಿಚಯ
  • ಆನ್ ಲೈನ್ ನಲ್ಲಿ ಪಾಸ್ ಖರೀದಿ ಸಾಧ್ಯ
BMTCಯಿಂದ ನೂತನ‌ ಆ್ಯಪ್ ಬಿಡುಗಡೆ, ಪ್ರಯಾಣಿಕರಿಗೆ ಮೊಬೈಲ್ ಪಾಸ್  title=
BMTC Digital Pass (File photo)

ಬೆಂಗಳೂರು : ಬಿಎಂಟಿಸಿಯಿಂದ ನೂತನ  ಆ್ಯಪ್ ಬಿಡುಗಡೆ ಮಾಡಲಾಗಿದೆ (BMTC APP). Tummoc App ಅನ್ನು ಬಿಡುಗಡೆ ಮಾಡಲಾಗಿದೆ.  ಈ  ಆ್ಯಪ್  ಮೂಲಕ ಮೊಬೈಲ್ ಆಧಾರಿತ ಡಿಜಿಟಲ್ ಪಾಸ್ ಪರಿಚಯಿಸಲಾಗಿದೆ (BMTC Digital Pass).  ಶಾಂತಿನಗರದಲ್ಲಿ ಇರುವ BMTC ಸಂಸ್ಥೆಯಲ್ಲಿ ಈ ಆ್ಯಪ್ ಬಿಡುಗಡೆ ಮಾಡಲಾಗಿದೆ. 

ಬಿಎಂಟಿಸಿ ಪ್ರಯಾಣಿಕರಿಗೆ   ಡಿಜಿಟಲ್ ಪಾಸ್  ಅನ್ನು ಪರಿಚಯಿಸಲಾಗಿದೆ (BMTC Digital Pass). Tummoc App ಮೂಲಕ ಮೊಬೈಲ್ ಆಧಾರಿತ ಡಿಜಿಟಲ್ ಪಾಸ್ ಅನ್ನು ಪರಿಚಯಿಸಲಾಗಿದೆ.  ಪ್ರಯಾಣಿಕರು ಈ ಮೊಬೈಲ್ ಅಪ್ಲಿಕೇಶನ್ (Mobile App)ಮೂಲಕ  ಆನ್ ಲೈನ್ ನಲ್ಲಿ ಪಾಸ್ ಖರೀದಿಸಬಹುದು. ಪ್ರಯಾಣದ ವೇಳೆ ಮೊಬೈಲ್ ಮೂಲಕವೇ  ಪ್ರಯಾಣಿಕರು ಪಾಸ್ ತೋರಿಸಬಹುದು. 

ಇದನ್ನೂ ಓದಿ : Robbery: ಸಿಗರೇಟ್‌ ಶೋಕಿಗಾಗಿ ಮಾಜಿ ಸಿಎಂ ಮನೆ ಬಳಿ ಕಳ್ಳತನಕ್ಕೆ ಯತ್ನ: ಓರ್ವ ಬಂಧನ

ಪ್ರಯಾಣಿಕರಿಗೆ ಸುಲಭವಾಗಿ ಪಾಸ್ ಖರೀದಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಈ ಸೌಲಭ್ಯವನ್ನು ಪರಿಚಯಿಸಲಾಗಿದೆ. ದೈನಿಕ, ವಾರ, ಮಾಸಿಕ ಪಾಸ್ ಗಳನ್ನು ಮೊಬೈಲ್ ಆಧಾರಿತ ಆ್ಯಪ್  ಮೂಲಕ ಪಾಸ್ ಖರೀದಿ ಮಾಡಬಹುದು.  ಪ್ರತಿ ಪಾಸಿಗೂ  unique ID ಹಾಗೂ Dynamic QR ಕೋಡ್ ಇರಲಿದೆ. 

ಪ್ಲೇ ಸ್ಟೋರ್ ನಿಂದ Tummoc ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳಬೇಕು (App download). ಭದ್ರತಾ ವೈಶಿಷ್ಟ್ಯಗಳನ್ನು ಬಳಸಿಕೊಂಡು ಈ ಡಿಜಿಟಲ್ ಪಾಸ್ ಅಭಿವೃದ್ಧಿ ಮಾಡಿಕೊಳ್ಳಬಹುದು. 

ಇದನ್ನೂ ಓದಿ : ಆಜಾನ್ ವಿರುದ್ಧ ಪ್ರಶಾಂತ್ ಸಂಬರಗಿ ನೇತೃತ್ವದ ನಿಯೋಗದಿಂದ ಕಮೀಷನರ್‌ಗೆ ದೂರು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News