ಎರಡು ಮದುವೆ ಆದ ಪೌರಕಾರ್ಮಿಕರಿಗೆ ಕೆಲಸ ಇಲ್ಲ...!
ನೀವು ಪೌರಕಾರ್ಮಿಕ ಕೆಲಸಕ್ಕಾಗಿ ಕಾಯ್ತಿದ್ದೀರಾ..!? ಹಾಗಿದ್ರೇ ನೀವು ಮದುವೆ ಆಗೋ ವಿಚಾರದಲ್ಲಿ ನೀವು ತುಂಬಾ ಜಾಗರೂಕರಾಗಿರಬೇಕು. ಇಲ್ಲ ಅಂದ್ರೇ ನೀವು ಕೆಲಸ ಮಾಡಲು ಆನರ್ಹರಾಗ್ತೀರಿ ಹುಷಾರ.. ಬಿಬಿಎಂಪಿ ಪೌರಕಾರ್ಮಿಕರ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದಾರೆ. ಅದ್ರಲ್ಲಿ ಏನಿದೆ ವಿಷೇಶ ಅಂದ್ರೆ..? ಆ ಬಗ್ಗೆ ವರದಿ ಇದೆ ಮುಂದೆ ಓದಿ.
BBMP Recruitment 2023 : ನೀವು ಪೌರಕಾರ್ಮಿಕ ಕೆಲಸಕ್ಕಾಗಿ ಕಾಯ್ತಿದ್ದೀರಾ..!? ಹಾಗಿದ್ರೇ ನೀವು ಮದುವೆ ಆಗೋ ವಿಚಾರದಲ್ಲಿ ನೀವು ತುಂಬಾ ಜಾಗರೂಕರಾಗಿರಬೇಕು. ಇಲ್ಲ ಅಂದ್ರೇ ನೀವು ಕೆಲಸ ಮಾಡಲು ಆನರ್ಹರಾಗ್ತೀರಿ ಹುಷಾರ.. ಬಿಬಿಎಂಪಿ ಪೌರಕಾರ್ಮಿಕರ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದಾರೆ. ಅದ್ರಲ್ಲಿ ಏನಿದೆ ವಿಷೇಶ ಅಂದ್ರೆ..? ಆ ಬಗ್ಗೆ ವರದಿ ಇದೆ ಮುಂದೆ ಓದಿ.
ಹೌದು.... ಬಿಬಿಎಂಪಿ ಪೌರಕಾರ್ಮಿಕರ ನೇಮಕಾತಿ ಈವರೆಗೆ ಪ್ರಕ್ರಿಯೆಗಷ್ಟೇ ಸೀಮಿತವಾಗಿತ್ತು. ಈಗ ಪೌರ ಕಾರ್ಮಿಕರ ನೇಮಕಾತಿಗೆ ಕೊನೆಗೂ ಬಿಬಿಎಂಪಿ ಚಾಲನೆ ನೀಡಿದೆ. ಬಿಬಿಎಂಪಿಯಲ್ಲಿ ಖಾಲಿ ಇರುವ 3,673 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಅದ್ರೇ ಅದರಲ್ಲಿರುವ ಕೆಲ ಷರತ್ತುಗಳು ಪೌರಕಾರ್ಮಿಕ ಹುದ್ದೆಗಾಗಿ ಕಾಯುತ್ತಿದ್ದವರಲ್ಲಿ ಬೇಸರ ತಂದಿದೆ. ಪೌರಕಾರ್ಮಿಕರು ಮದುವೆ ಆಗ್ಬೇಕಾದ್ರೇ ಕೆಲ ಷರತ್ತುಗಳನ್ನ ನೀಡಲಾಗಿದೆ. ಎರಡು ಮದುವೆಯಾಗಿದ್ರೇ ಅಂತವರು ಅನರ್ಹರಾಗ್ತಾರೆ.
ಇದನ್ನೂ ಓದಿ: ಲಂಚದ ವಿಚಾರದಲ್ಲಿ ಧಮ್ ಇಲ್ಲ, ಬಡವರ ಬದುಕಿನಲ್ಲಿ ಬದಲಾವಣೆ ತರುವ ಧಮ್ ಇದೆ
ಕಲ್ಯಾಣ ಕರ್ನಾಟಕದವರಿಗೂ ಆದ್ಯತೆ : ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಪೈಕಿ 2,600 ಕಾಯಂ ಪೌರಕಾರ್ಮಿಕರಿದ್ದಾರೆ. ಉಳಿದಂತೆ 18 ಸಾವಿರ ಪೌರಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ 3,673 ಪೌರಕಾರ್ಮಿಕ ಹುದ್ದೆಗೆ ಕಾಯಂ ನೇಮಕ ಮಾಡಿಕೊಳ್ಳಲು ಬಿಬಿಎಂಪಿ ಮುಂದಾಗಿದೆ. ಅದರಲ್ಲಿ ಈಗಾಗಲೇ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರನ್ನೇ ನೇಮಕಕ್ಕೆ ಪರಿಗಣಿಸಲಾಗುತ್ತಿದೆ. ಅದರ ಜೊತೆಗೆ 3,673 ಪೌರಕಾರ್ಮಿಕ ಹುದ್ದೆಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದವರಿಗೆ 430 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಉಳಿದ 3,243 ಹುದ್ದೆಗಳನ್ನು ರಾಜ್ಯದ ಇತರ ಜಿಲ್ಲೆಗಳವರಿಗೆ ನಿಗದಿ ಮಾಡಲಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.