ಬೆಂಗಳೂರು :  ಮಾರ್ಚ್ ೨೧ ರಿಂದ ೨೮ ರವರೆಗೆ ಮೆಜೆಸ್ಟಿಕ್ ನಿಂದ  ನಾಯಂಡಹಳ್ಳಿವರೆಗೆ ಮೆಟ್ರೋ (Metro) ಸಂಚಾರ ಸ್ಥಗಿತಗೊಳ್ಳಲಿದೆ. ಈ ಬಗ್ಗೆ ಬಿಎಂಆರ್'ಸಿಎಲ್  ಮಾಧ್ಯಮ  ಪ್ರಕಟಣೆ ಬಿಡುಗಡೆ ಮಾಡಿದೆ. ಮೈಸೂರು ರಸ್ತೆ-ಕೆಂಗೇರಿ ವಿಸ್ತೃತ ಮಾರ್ಗದಲ್ಲಿ ಸಿಗ್ನಲಿಂಗ್ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಂಚಾರದಲ್ಲಿ ವ್ಯತ್ಯಯ  ಉಂಟಾಗಲಿದೆ. 


COMMERCIAL BREAK
SCROLL TO CONTINUE READING

ಮಾಗಡಿ (Magadi) ರಸ್ತೆಯಿಂದ ಮೈಸೂರು  ರಸ್ತೆ ಮಾರ್ಗದಲ್ಲಿ ಸಿಗ್ನಲಿಂಗ್ ವ್ಯವಸ್ಥೆಗೆ ಕಾಮಗಾರಿ ನಡೆಸುವ ಅಗತ್ಯವಿದೆ. ಕಾಮಗಾರಿ ಹಿನೆಲೆಯಲ್ಲಿ ಮೆಜೆಸ್ಟಿಕ್ ನಿಂದ ನಾಯಂಡಹಳ್ಳಿವರೆಗೆ  ಮೆಟ್ರೋ (Metro) ಸಂಚಾರ ಸಂಪೂರ್ಣ ವಾಗಿ ಸ್ಥಗಿತಗೊಳ್ಳಲಿದೆ. ಅಲ್ಲದೆ ಮೆಜೆಸ್ಟಿಕ್ ನಿಂದ ಮೈಸೂರು ಮೆಟ್ರೋ ರಸ್ತೆವರೆಗೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. 


ಇದನ್ನೂ ಓದಿ HD Kumaraswamy: 'ರಮೇಶ್ CD ಮಾಹಿತಿ ಕೊಟ್ಟಿದ್ದು ನಾನು; ಮಹಾನಾಯಕ ಯಾರೆಂದು ಗೊತ್ತು'


ಬಿಎಂಆರ್ ಸಿ ಎಲ್  (BMRCL) ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿದೆ.  ಮಾರ್ಚ್ ೨೯ ರಿಂದ ಮತ್ತೆ ಪೂರ್ಣ ಪ್ರಮಾಣದಲ್ಲಿ ಮೆಟ್ರೋ ಸಂಚಾರ ಆರಂಭವಾಗಲಿದೆ. ಇನ್ನು ಮೆಜೆಸ್ಟಿಕ್ ನಿಂದ  (Megestic) ಬೈಯಪ್ಪನ ಹಳ್ಳಿ ವರೆಗಿನ ಮಾರ್ಗದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ. ಈ ಮಾರ್ಗದಲ್ಲಿ ಎಂದಿನಂತೆ ಸಂಚಾರ ನಡೆಯಲಿದೆ. 


ಇದನ್ನೂ ಓದಿRamesh Jarkiho: ಸಚಿವ ಸ್ಥಾನ ಕಳೆದುಕೊಂಡ 'ಸಾಹುಕಾರ್'ಗೆ ಬಿಜೆಪಿಯಿಂದ ಮತ್ತೊಂದು ಶಾಕ್!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ