ನಮ್ಮ ಮೆಟ್ರೋಗೆ ಹೆಚ್ಚುವರಿ ಬೋಗಿಗಳ ಸೇರ್ಪಡೆ

BEML ನಿಂದ BMRCLಗೆ ಹೆಚ್ಚುವರಿ ಮೂರು ಬೋಗಿಗಳ ಹಸ್ತಾಂತರ.

Updated: Feb 14, 2018 , 12:19 PM IST
ನಮ್ಮ ಮೆಟ್ರೋಗೆ ಹೆಚ್ಚುವರಿ ಬೋಗಿಗಳ ಸೇರ್ಪಡೆ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪ್ರೇಮಿಗಳ ದಿನದಂದು ನಮ್ಮ ಮೆಟ್ರೋಗೆ BEML ಬೋಗಿಗಳನ್ನು ಉಡುಗೊರೆಯಾಗಿ ನೀಡಿದೆ. 

ನಮ್ಮ ಮೆಟ್ರೋದಲ್ಲಿ ಜನದಟ್ಟಣೆ ಹಿನ್ನೆಲೆಯಲ್ಲಿ ಹೆಚ್ಚುವರಿ ಬೋಗಿಗಳನ್ನು ಸೇರ್ಪಡೆ ಮಾಡಲು BMRCL ನಿರ್ಧರಿಸಿದ್ದು, 150 ಬೋಗಿಗಳಿಗಾಗಿ BEMLಗೆ ಟೆಂಡರ್ ನೀಡಿದೆ. ಮೊದಲ ಹಂತದಲ್ಲಿ BEML ಸಂಸ್ಥೆ BMRCL(ನಮ್ಮ ಮೆಟ್ರೋ)ಗೆ ಇಂದು ಹೆಚ್ಚುವರಿ ಮೂರು ಬೋಗಿಗಳನ್ನು ಹಸ್ತಾಂತರಿಸಿದೆ. ಈ ವೇಳೆ ಕೇಂದ್ರ ಸಚಿವ ಅನಂತ್ ಕುಮಾರ್‌ ಹಾಗೂ ಸಂಸದ ಪಿ.ಸಿ. ಮೋಹನ್ ಭಾಗಿಯಾಗಿದ್ದರು.

ಶೀಘ್ರದಲ್ಲೇ ಎಲ್ಲಾ ಮೆಟ್ರೋಗಳಲ್ಲಿ ಬೋಗಿಗಳನ್ನು 3 ರಿಂದ 6ಕ್ಕೆ ವಿಸ್ತರಿಸಲು ಮೆಟ್ರೋ ನಿಗಮ ನಿರ್ಧಾರ ಮಾಡಿದೆ. ಮಾರ್ಚ್ ಅಂತ್ಯದ ವೇಳೆಗೆ ಈ ಸೌಲಭ್ಯ ಸಾರ್ವಜನಿಕರಿಗೆ ಲಭ್ಯವಾಗಲಿದೆ.