ಬೆಂಗಳೂರು : ಈಗ ಯಾರ್ಯಾರು ಪಕ್ಷದ ಸೂಚನೆ ಮೀರಿ ಮಾತನಾಡಿದ್ದಾರೋ ಅವರಿಗೆಲ್ಲಾ ನೋಟಿಸ್ ನೀಡುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಇನ್ನು ಅಧಿಕಾರ ಹಂಚಿಕೆ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್ ಅಧಿಕಾರ ಎನ್ನುವುದು ಆಸ್ತಿಯಲ್ಲ ಹಂಚಿಕೊಳ್ಳುವುದಕ್ಕೆ ಎಂದಿದ್ದಾರೆ. 


COMMERCIAL BREAK
SCROLL TO CONTINUE READING

ಯಾರೇ ಆಗಲಿ ಪಕ್ಷದ ಸೂಚನೆ ಮೀರಿ ಹೇಳಿಕೆಗಳನ್ನು ನೀಡಿದರೆ ನೋಟೀಸ್ ನೀಡುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಕೆಲವು ಶಾಸಕರು ನಿಮ್ಮ ಪರವಾಗಿ ಲಾಬಿ ಮಾಡಿ ಮಾತನಾಡುತ್ತಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಡಿಕೆಶಿ ಈ ರೀತಿ ಉತ್ತರಿಸಿದ್ದಾರೆ. 


ಇದನ್ನೂ ಓದಿ : ಒಂದೇ ದಾರಿಯಲ್ಲಿ ಕೆಟ್ಟು ನಿಂತ ಎರಡು 'ಚಿಗರಿ'!: ಅವ್ಯವಸ್ಥೆಗೆ ಮತ್ತೊಂದು ಹೆಸರೇ BRTS


ಇನ್ನು ಐದು ವರ್ಷ ನಾನೇ ಸಿಎಂ ಎನ್ನುವ ಸಿದ್ದರಾಮಯ್ಯ ಅವರ ಹೇಳಿಕೆಯ ಬಗ್ಗೆಯೂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಿದ ನಂತರ, ಇಬ್ಬರೂ ಸೇರಿ ಪ್ರಮಾಣವಚನ ಸ್ವೀಕರಿಸಿದ್ದೇವೆ. ಆಗ ನಾವು ಯಾರಿಗೂ ಏನನ್ನೂ ಹೇಳಿರಲಿಲ್ಲ. ಸುಮ್ಮನೆ ಇಲ್ಲದ ವಿಷಯ ಸೃಷ್ಟಿ ಮಾಡಿಕೊಳ್ಳಬಾರದು. ಈ ಪ್ರಶ್ನೆಯ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ. 


ಅಲ್ಲದೆ, ಅಧಿಕಾರ ಎನ್ನುವುದು ಆಸ್ತಿಯಲ್ಲ, ಅದನ್ನು ಹಚಿಕೊಳುವುದಕ್ಕೆ ಎಂದು ಅಧಿಕಾರ ಹಂಚಿಕೆ ಬಗೆಗಿನ ಪ್ರಶ್ನೆಗೆ ಉತ್ತರಿಸಿದ್ದಾರೆ. 


ಇದನ್ನೂ ಓದಿ : ನೈರ್ಮಲ್ಯ ಯೋಜನೆ: ಪ್ರತ್ಯೇಕ ಹೆಣ್ಣುಮಕ್ಕಳ ಶೌಚಾಗೃಹಕ್ಕೆ ಶೀಘ್ರದಲ್ಲೇ ಚಾಲನೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.