ನೈರ್ಮಲ್ಯ ಯೋಜನೆ: ಪ್ರತ್ಯೇಕ ಹೆಣ್ಣುಮಕ್ಕಳ ಶೌಚಾಗೃಹಕ್ಕೆ ಶೀಘ್ರದಲ್ಲೇ ಚಾಲನೆ

ಪ್ರಾಯೋಗಿಕವಾಗಿ ಇಂತಹ ಶೌಚಾಗೃಹಗಳನ್ನು ಕಲಬುರಗಿ ಜಿಲ್ಲೆ ಹಾಗೂ ಕಲ್ಯಾಣ ಕರ್ನಾಟಕದ ಇತರೆಡೆ ಸ್ಥಾಪಿಸಲು ಈ ಶೌಚಾಗೃಹಗಳನ್ನು ನಿರ್ಮಾಣ ಮಾಡಿರುವ ಸಂಸ್ಥೆಗೆ ಸೂಚಿಸಲಾಗುವುದು- ಸಚಿವ ಪ್ರಿಯಾಂಕ್ ಖರ್ಗೆ 

Written by - Prashobh Devanahalli | Last Updated : Nov 3, 2023, 02:27 PM IST
  • ಈ ಶೌಚಾಗೃಹದಲ್ಲಿ ಹೆಣ್ಣುಮಕ್ಕಳಿಗೆ ಬಟ್ಟೆ ಒಗೆಯುವ ಸ್ಥಳ ಜೊತೆಗೆ ವಿದ್ಯುತ್ ದೀಪ, ಸ್ನಾನಕ್ಕೆ ವ್ಯವಸ್ಥೆ ಒಳಗೊಂಡಿದೆ.
  • ಈ ಶೌಚಾಗೃಹ ಕಾರ್ಖಾನೆಯಲ್ಲಿ ನಿರ್ಮಾಣ ಆಗಲಿದ್ದು, ರಾಜ್ಯದ ಹಿಂದುಳಿದ ಪ್ರದೇಶಗಳಲ್ಲಿ ಕೆಲವೇ ಗಂಟೆಗಳಲ್ಲಿ ಸ್ಥಾಪನೆ ಮಾಡಬಹುದಾಗಿದೆ.
  • ಹೆಣ್ಣು ಮಕ್ಕಳ ಸುರಕ್ಷತೆಗೆ ಈ ಶೌಚಾಗೃಹ ಸಹಕಾರಿಯಾಗಲಿದೆ ಎಂದು ಅಹಿರಿ ಕೊಲಾಬರೆಟಿವ್ ವ್ಯವಸ್ಥಾಪಕ ಮನೋಜ್ ತಿಳಿಸಿದರು.
ನೈರ್ಮಲ್ಯ ಯೋಜನೆ: ಪ್ರತ್ಯೇಕ ಹೆಣ್ಣುಮಕ್ಕಳ ಶೌಚಾಗೃಹಕ್ಕೆ ಶೀಘ್ರದಲ್ಲೇ ಚಾಲನೆ title=

ಬೆಂಗಳೂರು: ದೊಡ್ಡಬಳ್ಳಾಪುರ ಸಮೀಪದ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿನ, ಸಿದ್ಧಗೊಂಡ ಆಧುನಿಕ ಸೌಲಭ್ಯಗಳನ್ನು ಹೊಂದಿದ ಸಂಚಾರಿ ಶೌಚಾಗೃಹವನ್ನು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಗಳ ಸಚಿವರಾದ ಪ್ರಿಯಾಂಕ್‌ ಖರ್ಗೆ ವೀಕ್ಷಿಸಿದರು.

ಗ್ರಾಮೀಣ ಭಾಗಗಳಲ್ಲಿ ಲಭ್ಯವಿರುವ ಸ್ಥಳಗಳಲ್ಲಿ ಈ ಶೌಚಾಲಯಗಳನ್ನು ಸುಲಭವಾಗಿ ಸ್ಥಾಪಿಸಬಹುದಾಗಿದ್ದು, ರಾಜ್ಯದ ವಿವಿದೆಡೆ ಇಂತಹ ಶೌಚಾಲಯಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಈ ಸಂದರ್ಭದಲ್ಲಿ ಹೇಳಿದರು. 

ಇದನ್ನೂ ಓದಿ- ಬರ ಅಧ್ಯಯನ ಪ್ರವಾಸದಿಂದ ಬಿಜೆಪಿ ನಾಯಕರು ಏನು ಕಡಿದು ಕಟ್ಟೆ ಹಾಕಲಿದ್ದಾರೆ?

ಪ್ರಾಯೋಗಿಕವಾಗಿ ಇಂತಹ ಶೌಚಾಗೃಹಗಳನ್ನು ಕಲಬುರಗಿ ಜಿಲ್ಲೆ ಹಾಗೂ ಕಲ್ಯಾಣ ಕರ್ನಾಟಕದ ಇತರೆಡೆ ಸ್ಥಾಪಿಸಲು ಈ ಶೌಚಾಗೃಹಗಳನ್ನು ನಿರ್ಮಾಣ ಮಾಡಿರುವ ಸಂಸ್ಥೆಗೆ ಸೂಚಿಸಲಾಗುವುದು ಎಂದೂ ಸಚಿವರು ತಿಳಿಸಿದರು.

ಈ ಶೌಚಾಗೃಹದಲ್ಲಿ ಹೆಣ್ಣುಮಕ್ಕಳಿಗೆ ಬಟ್ಟೆ ಒಗೆಯುವ ಸ್ಥಳ ಜೊತೆಗೆ ವಿದ್ಯುತ್ ದೀಪ, ಸ್ನಾನಕ್ಕೆ ವ್ಯವಸ್ಥೆ ಒಳಗೊಂಡಿದೆ. ಈ ಶೌಚಾಗೃಹ ಕಾರ್ಖಾನೆಯಲ್ಲಿ ನಿರ್ಮಾಣ ಆಗಲಿದ್ದು, ರಾಜ್ಯದ ಹಿಂದುಳಿದ ಪ್ರದೇಶಗಳಲ್ಲಿ ಕೆಲವೇ ಗಂಟೆಗಳಲ್ಲಿ ಸ್ಥಾಪನೆ ಮಾಡಬಹುದಾಗಿದೆ. ಹೆಣ್ಣು ಮಕ್ಕಳ ಸುರಕ್ಷತೆಗೆ ಈ ಶೌಚಾಗೃಹ ಸಹಕಾರಿಯಾಗಲಿದೆ ಎಂದು, ಅಹಿರಿ ಕೊಲಾಬರೆಟಿವ್ ವ್ಯವಸ್ಥಾಪಕ ಮನೋಜ್ ತಿಳಿಸಿದರು. 

ಇದನ್ನೂ ಓದಿ- ಸೋದರತ್ತೆ ಮಸಲತ್ತು: ಗಂಡನ ಮನೆಯವರ ಅನುಮಾನಕ್ಕೆ ಚೆಂದುಳ್ಳಿ ಚೆಲುವೆ ನೇಣಿಗೆ ಶರಣು

ಸಚಿವರೊಂದಿಗೆ ಪಂಚಾಯತ್‌ ರಾಜ್‌ ಆಯುಕ್ತರಾದ  ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ನರೇಗ ಆಯುಕ್ತ ಪವನ್‌ ಕುಮಾರ್‌ ಮಾಲ್‌ಪಾಟೀಲ್‌, ಗ್ರಾಮೀಣ ನೀರು ಸರಬರಾಜು ಇಲಾಖೆಯ ಆಯುಕ್ತ ನಾಗೇಂದ್ರ ಪ್ರಸಾದ್‌, ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಕೆ.ಅನುರಾಧಾ ಇದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News