ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ಕೊರೊನಾ ಕೇಸ್ ಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಸಧ್ಯ ಪ್ರತಿ ದಿನದ ಕೇಸ್ ಗಳ ಸಂಖ್ಯೆ 1000 ಗಡಿ ದಾಟಿದೆ. ಇದು ಮೂರನೇ ಅಲೆಯ ಮುನ್ಸೂಚನೆಯಾ? ಎಂದು ಪ್ರಶ್ನಿಸಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಹತೋಟಿಗೆ ತರಲು ರಾಜ್ಯ ಸರ್ಕಾರ ಈಗಾಗಲೇ ಸಾಕಷ್ಟು ರೂಲ್ಸ್  ಜಾರಿಗೆ ತಂದಿರೋ, ಮತ್ತಷ್ಟು ಟಫ್ ರೋಲ್ಸ್ ಗೆ(Tough Rolls) ಸಲಹಾ ಸಮಿತಿ ಶಿಫಾರಸ್ಸು ಮಾಡಿದೆ. ನೈಟ್ ಕರ್ಪ್ಯೂ, ಹೋಟಲ್ ಪಬ್ ಬಾರ್ ರೆಸ್ಟೋರೆಂಟ್ ನಲ್ಲಿ ಶೇ.50ರಷ್ಟು ಅವಕಾಶ ನೀಡಿದೆ. ಅಲ್ಲದೆ, ಮದುವೆ ಸಭೆ ಸಮಾರಂಭಗಳಿಗೆ ನಿಗದಿತ ಜನರಿಗೆ ಅವಕಾಶ ನೀಡಲಾಗಿದೆ. ಕೊರೊನಾ ಕೇಸ್ ಗಳ ಸಂಖ್ಯೆ ಏರಿಕೆಯಾಗುತ್ತಿರುವದನ್ನು ಮೂರನೇ ಅಲೆ ಬರೋ ಸಾಧ್ಯತೆ ಇದೆ ಎಂದು ತಜ್ಞರು ಅಂತಿದ್ದಾರೆ.


ಇದನ್ನೂ ಓದಿ : ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆ ಪೋಸ್ಟರ್ ಬಿಡುಗಡೆ ಮಾಡಿದ ಸಿದ್ದಲಿಂಗ ಶ್ರೀಗಳು!


ಫೆಬ್ರವರಿಯಲ್ಲಿ ಮೂರನೇ ಅಲೆ ಕೇಸ್ ಫೀಕ್‌ಗೆ ಹೋಗುವ ಸಾಧ್ಯತೆ ‌ಇದೆ ಎಂದಿದ್ದಾರೆ. ಈಗಾಗಲೇ ಕೇಸ್ ಗಳ ಸಂಖ್ಯೆ ಏರಿಕೆಯಾಗ್ತಿದೆ. ಸರ್ಕಾರ ಜನವರಿ 7ರ ವರಗೆ ಹೊಸ ರೂಲ್ಸ್ ತಂದಿದೆ. ಈ ರೂಲ್ಸ್ ಮುಂದುವರೆಸುವಂತೆ ತಾಂತ್ರಿಕ ಸಲಹಾ ಸಮಿತಿ ತಜ್ಞರ ಸಮಿತಿ ಶಿಫಾರಸ್ಸು ಮಾಡಿದೆ.


ತಜ್ಞರ ಶಿಫಾರಸ್ಸು ಹಿನ್ನೆಲೆ ಬುಧವಾರ ಆರೋಗ್ಯ ಅಧಿಕಾರಿಗಳೊಂದಿಗೆ ಮುಖಮಂತ್ರಿಗಳ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಬಿಬಿಎಂಪಿ(BBMP) ಆರೋಗ್ಯ ಅಧಿಕಾರಿಗಳು, ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಭಾಗವಹಿಸಲಿದ್ದಾರೆ.


ಚರ್ಚೆಗೆ ಬರುವ ಪ್ರಮುಖ ವಿಚಾರಗಳು ಹೀಗಿವೆ


- ಜನವರಿ 7ರ ಬಳಿಕವೂ ಮತ್ತಷ್ಟು ಟಫ್ ರೂಲ್ಸ್
- ನೈಟ್ ಕರ್ಪ್ಯೂ ಹೀಗೆ ಮುಂದುವರೆಸುವ ಸಾಧ್ಯತೆ
- ಹೋಟಲ್ ಪಬ್ ಬಾರ್ ಅಂಡ್ ರೆಸ್ಟೋರೆಂಟ್ ಶೇ. 50-50 ಸೇವೆ  ಮುಂದುವರೆಸುವ ಸಾಧ್ಯತೆ
- ಮುಂದಿನ ಬೆಳವಣಿಗೆ ನೋಡಿಕೊಂಡು ರೂಲ್ಸ್ ಸಡಿಲಿಕೆ ಅಥವ ಹೇರಿಕೆ
-  ಬೆಂಗಳೂರು ‌ನಗರ ಮತ್ತೊಮ್ಮೆ ಕೊರೋನಾ ಹಟ್ ಸ್ಟಾಟ್ ಸಾಧ್ಯತೆ ಇದ್ದು ಹೆಚ್ಚಿನ ನಿಗಾ ಇಡುವ ಬಗ್ಗೆ ಚರ್ಚೆ
- ಬೆಂಗಳೂರಿನಲ್ಲಿ‌ ಈ ರೂಲ್ಸ್ ಫೆಬ್ರವರಿವರೆಗೆ ಮುಂದುವರೆಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ಸಾಧ್ಯತೆ


ಜನವರಿ 7ರವೆಗೆ ಈಗಿನ ರೂಲ್ಸ್ ಇರಲಿದೆ. ಜ. 7ರ ಬಳಿಕವೂ ಇದೇ ರೂಲ್ಸ್(Rolls) ಸರ್ಕಾರ ಮುಂದುವರೆಸುತ್ತಾ? ಅಥವಾ ಸಡಲಿಕೆ‌ ಮಾಡೋಣ ಅಂತಾ ಮುಂದಾಗುತ್ತಾ? ಎಂಬುವುದು ಸಂಬಿಯಲ್ಲಿ ತೀರ್ಮಾನವಾಗಲಿದೆ.


ಇದನ್ನೂ ಓದಿ : ಮೇಕೆದಾಟು ಪಾದಯಾತ್ರೆಗೆ ಡಿಕೆಶಿ ನಡಿಗೆ ತಾಲೀಮು!: ಸುಳ್ಳಿನಜಾತ್ರೆ ಎಂದು ಬಿಜೆಪಿ ವ್ಯಂಗ್ಯ


ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ರೂಲ್ಸ್ ಸಡಿಲಿಕೆ ಮಾಡುವ ನಿರ್ಧಾರದಿಂದ ಹಿಂದೆ ಸರಿಯಲಿದೆ. ಈಗಿನ ಟಫ್ ರೂಲ್ಸ್ ಜೊತೆಗೆ ಇನ್ನಷ್ಟು ಟಫ್ ರೂಲ್ಸ್ ಜಾರಿ ಮಾಡುವ ಸಾಧ್ಯತೆ ಇದೆ. ಮನರಂಜನಾ ಕಾರ್ಯಕ್ರಮಕ್ಕೂ ಮುಂದೆ ಬ್ರೇಕ್ ಬೀಳಬಹುದು? ಹೆಚ್ಚಿನ ಜನ ಸೇರುವ ಸ್ಪೋರ್ಟ್ಸ್‌ ಆ್ಯಕ್ಟಿವಿಟೀಸ್ ಗೆ ಬ್ರೇಕ್ ಹಾಕುವ ಸಾಧ್ಯತೆ ಇದೆ. ನೈಟ್ ಕರ್ಫ್ಯೂ ಸಮಯ ಮತ್ತಷ್ಟು ಹೆಚ್ಚಿಸುವ ಬಗ್ಗೆ ಚರ್ಚೆ ಮಾಡಬಹುದು. ಜನ ಹೆಚ್ಚಾಗಿ ಸೇರದಂತೆ ಇನ್ನಷ್ಟು ರೂಲ್ಸ್ ಜಾರಿಗೆ ತರುವ ಆಲೋಚನೆ ಮಾಡಬಹುದು. ಮುಂದಿನ ಗುರುವಾರದೊಳಗೆ ಸರ್ಕಾರದಿಂದ ಹೊಸ ರೂಲ್ಸ್ ಏನು ಅನ್ನೋದು ಸ್ಪಷ್ಟವಾಗಲಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.