ಉಡುಪಿ: ಉಡುಪಿಯಲ್ಲಿ ಎರಡು ಒಮಿಕ್ರಾನ್ ಕೇಸ್(Omicron Variant) ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮರಾವ್​ ಹೇಳಿದ್ದಾರೆ. ಕರಾವಳಿ ಜಿಲ್ಲೆಯಲ್ಲಿ ಪತ್ತೆಯಾಗಿರುವ ಒಮಿಕ್ರಾನ್ ಪ್ರಕರಣಗಳ ಬಗ್ಗೆ ಸೋಮವಾರ ಸುದ್ದಿಗಾರರಿಗೆ ಅವರು ಮಾಹಿತಿ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಒಮಿಕ್ರಾನ್ ಸೋಂಕು ಪತ್ತೆಯಾಗಿರುವ ಇಬ್ಬರೂ ಸಂಪೂರ್ಣ ಆರೋಗ್ಯಕರವಾಗಿದ್ದಾರೆ. ಒಬ್ಬರು ಕ್ಯಾನ್ಸರ್ ಪೀಡಿತರರಾಗಿದ್ದರೂ ಆರೋಗ್ಯ ಬಿಗಡಾಯಿಸಿಲ್ಲ. ಈ ಇಬ್ಬರೂ ಸಂಪೂರ್ಣ ಆರೋಗ್ಯಕರವಾಗಿದ್ದಾರೆ. ಇಬ್ಬರಿಗೂ ಎರಡು ಡೋಸ್ ಕೋವಿಶೀಲ್ಡ್ ವ್ಯಾಕ್ಸಿನೇಶನ್(Covishield Vaccine) ಆಗಿದೆ. ಲಸಿಕೆ ತೆಗೆದುಕೊಂಡ ಕಾರಣ ಯಾವುದೇ ದುಷ್ಪರಿಣಾಮ ಆಗಿಲ್ಲ. ಇವರಿಬ್ಬರ ಪ್ರಾಥಮಿಕ ಸಂಪರ್ಕದಲ್ಲಿದ್ದ ಯಾರಿಗೂ ಪಾಸಿಟಿವ್ ಇಲ್ಲ. ಸುತ್ತಮುತ್ತ ನಡೆಸಿದ 2 ಸಾವಿರ ಟೆಸ್ಟ್ ರಿಪೋರ್ಟ್ ನೆಗೆಟಿವ್ ಇದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ಕನ್ನಡ ಧ್ವಜಕ್ಕೆ ಅವಮಾನ: ಕಿಡಗೇಡಿಗಳನ್ನು ಗುಂಡಿಕ್ಕಿ ಸಾಯಿಸಿ ಎಂದ ಕೆ.ಎಸ್.ಈಶ್ವರಪ್ಪ


Omicron Variant Case)ಗಳ ಸಂಖ್ಯೆ ಈಗ ಕನಿಷ್ಠ 167 ಆಗಿದೆ. ಕೇಂದ್ರ ಮತ್ತು ರಾಜ್ಯ ಅಧಿಕಾರಿಗಳ ಪ್ರಕಾರ ಮಹಾರಾಷ್ಟ್ರ (54), ದೆಹಲಿ (24), ರಾಜಸ್ಥಾನ (17) ಮತ್ತು ಕರ್ನಾಟಕ (19), ತೆಲಂಗಾಣ (20), ಗುಜರಾತ್ (11), ಕೇರಳ (15), ಆಂಧ್ರಪ್ರದೇಶ (1), ಚಂಡೀಗಢ (1), ತಮಿಳುನಾಡು (1) ಮತ್ತು ಪಶ್ಚಿಮ ಬಂಗಾಳ (4) ಪ್ರಕರಣಗಳು ಪತ್ತೆಯಾಗಿವೆ.


ಇದನ್ನೂ ಓದಿ: ನಟ ಪುನೀತ್ ರಾಜ್‍ಕುಮಾರ್ ನಾಮಫಲಕ ಕೆಡವಿದ ಕಿಡಿಗೇಡಿಗಳು: ಗ್ರಾಮಸ್ಥರ ಆಕ್ರೋಶ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.