ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ಹೆಚ್ಚಾಗೊ ಮುನ್ಸೂಚನೆಯ ಎಲ್ಲ ಲಕ್ಷಣಗಳು ಕಾಣುತ್ತಿವೆ. ಕರುನಾಡಿಗೆ ಒಮಿಕ್ರಾನ್ ನಿಂದ ಆಪತ್ತು ಕಾದಿದ್ಯಾ ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಮೂಡಿದೆ. ದೇಶದಲ್ಲೇ ಮೊದಲ ಒಮಿಕ್ರಾನ್ (Omicron cases) ಪ್ರಕರಣ ವರದಿಯಾಗಿದ್ದು ಕರ್ನಾಟಕದಲ್ಲಿಯೇ. ಅಂದಿನಿಂದ ದಿನದಿಂದ ದಿನಕ್ಕೆ ರೂಪಾಂತರದ ಭೀತಿ ಹೆಚ್ಚಾಗುತ್ತಲೇ ಇದೆ.
ಏರುತ್ತಲ್ಲೇ ಇದೆ ಒಮಿಕ್ರಾನ್ ಸೋಂಕಿತರ ಸಂಖ್ಯೆ:
ಮೊದಲು ಮೂರು, ಬಳಿಕ ಐದು, ನಂತರ 6 ಕೇಸ್ ಪತ್ತೆಯಾಗುವ ಮೂಲಕ ಕರುನಾಡಿಗೆ ಒಮಿಕ್ರಾನ್ ಆತಂಕ ತಂದೊಡ್ಡಿದೆ. ಕರ್ನಾಟಕದಲ್ಲಿ ಹೊಸ ಸೋಂಕುಗಳ ದೃಢೀಕರಣದೊಂದಿಗೆ, ಇದುವರೆಗೆ ಕೋವಿಡ್-19 ರ ಒಮಿಕ್ರಾನ್ ರೂಪಾಂತರದ (Karnataka Omicron cases) 13 ಪ್ರಕರಣಗಳನ್ನು ವರದಿ ಮಾಡಿದೆ.
ರಿಪೋರ್ಟ್ ಗಾಗಿ ಆರೋಗ್ಯ ಇಲಾಖೆ ವೈಟಿಂಗ್:
ಒಂದೆಡೆ ಸೋಂಕಿನ ಭೀತಿ ಹೆಚ್ಚಾಗುತ್ತಿದ್ದರೆ, ಇತ್ತ ನೂರಕ್ಕೂ ಹೆಚ್ಚು ಮಂದಿಯ ಜಿನೋಮ್ ಸೀಕ್ವೆನ್ಸಿಂಗ್ ರಿಪೋರ್ಟ್ ಗಾಗಿ (Genome Sequencing Report) ಆರೋಗ್ಯ ಇಲಾಖೆ ಕಾದುಕುಳಿತಿದೆ. ಸರಿಯಾದ ಸಮಯಕ್ಕೆ ಟೆಸ್ಟ್ ರಿಪೋರ್ಟ್ ಕೈ ಸೇರದಿರುವುದು ಸಹ ಆತಂಕ ಹೆಚ್ಚಾಗಲು ಕಾರಣವಾಗುತ್ತಿದೆ.
ಒಬ್ಬ ಸೋಂಕಿತ ದುಬೈಗೆ ಎಸ್ಕೇಪ್:
ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಲ್ಲಿ ಸದ್ಯ ಒಮಿಕ್ರಾನ್ ಹರಡುವಿಕೆ (Omicron Spreading) ಹೆಚ್ಚಗುತ್ತಿದೆ ಎನ್ನಲಾಗಿದೆ. ರಾಜ್ಯದಲ್ಲಿ ಸದ್ಯ 11 ಒಮಿಕ್ರಾನ್ ಸಕ್ರಿಯ ಪ್ರಕರಣಗಳಿವೆ. ಇದೆಲ್ಲದರ ಮಧ್ಯೆ ಒಬ್ಬ ಸೋಂಕಿತ ಸದ್ದೇ ಇಲ್ಲದೆ ದುಬೈಗೆ ಹಾರಿದ್ದಾನೆ. ಎಲ್ಲ ಆತಂಕಗಳ ನಡುವೆ ರಾಜ್ಯದಲ್ಲಿ ಇಬ್ಬರು ಒಮಿಕ್ರಾನ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆ ಯಿಂದ ಡಿಸ್ಚಾರ್ಜ್ ಆಗಿರುವುದು ಕೊಂಚ ನಿರಾಳ ಮೂಡಿಸಿದೆ.
ವಿದೇಶಿ ಪ್ರಯಾಣ ಹಿನ್ನೆಲೆ ಇಲ್ಲದವರಲ್ಲೂ ಒಮಿಕ್ರಾನ್ ಪತ್ತೆ:
ಮೊದ ಮೊದಲು ವಿದೀಶದಿಂದ ಬಂದವರಲ್ಲಿ ವರದಿಯಾಗಿದ್ದ ಕೊರೊನಾ ರೂಪಾಂತರ, ಈಗ ವಿದೇಶಿ ಪ್ರಯಾಣ ಹಿನ್ನೆಲೆ ಇಲ್ಲದವರಲ್ಲೂ ಪತ್ತೆಯಾಗುತ್ತಿದೆ.
ಇದನ್ನೂ ಓದಿ: COVID-19:ಕರ್ನಾಟಕದಲ್ಲಿ 5 ಹೊಸ ಒಮಿಕ್ರಾನ್ ಪ್ರಕರಣಗಳು ವರದಿ
ಬೆಂಗಳೂರಿನ ಮೊದಲ ಎರಡು ಕೇಸ್ ಪೈಕಿ ಒಬ್ಬರಿಗೆ ಟ್ರಾವೆಲ್ ಹಿಸ್ಟರಿ ಇಲ್ಲ. ಡಿಸೆಂಬರ್ 17 ರಂದು ಪತ್ತೆಯಾದ ಎರಡು ಕೇಸ್ ಗಳು ಕೇವಲ ದೆಹಲಿ ಟ್ರಾವೆಲ್ ಹಿಸ್ಟರಿ (Travel history) ಹೊಂದಿದ್ದವು. ದಕ್ಷಿಣ ಕನ್ನಡದಲ್ಲಿ ಪತ್ತೆಯಾದ ಕೇಸ್ ಗಳಿಗೂ ವಿದೇಶಿ ಟ್ರಾವೆಲ್ ಹಿಸ್ಟರಿ ಇಲ್ಲ. ಮಹಾರಾಷ್ಟ್ರದಲ್ಲಿ ಪತ್ತೆಯಾಗ್ತಿರೋ ಕೇಸ್ ಗಳಿಗೂ ವಿದೇಶಿ ಟ್ರಾವೆಲ್ ಹಿಸ್ಟರಿ ಇಲ್ಲದಿರುವುದು ಒಮಿಕ್ರಾನ್ ಸಮುದಾಯಕ್ಕೆ ಹರಡಿರುವ ಆತಂಕಕ್ಕೆ ಕಾರಣವಾಗಿದೆ.
ಕರ್ನಾಟಕದಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿ!?:
ರಾಜ್ಯದಲ್ಲಿ ಒಮಿಕ್ರಾನ್ (Omicron in Karnataka) ಸೋಂಕು ಹೆಚ್ಚಳ ಹಿನ್ನೆಲೆ ಮತ್ತೆ ನೈಟ್ ಕರ್ಫ್ಯೂ (night curfew) ಜಾರಿಗೆ ಸರ್ಕಾರ ಚಿಂತನೆ ನಡೆಸಿರಬಹುದು ಎಂದು ಹೇಳಲಾಗುತ್ತಿದೆ. ಡಿಸೆಂಬರ್ 30 ರಿಂದ ಜನವರಿ 2 ರ ವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಲು ಸರ್ಕಾರ ಯೋಚಿಸಿರಬಹುದು ಎನ್ನಲಾಗಿದೆ.
ಹೊಸ ವರ್ಷಾಚರಣೆ (New year celebration) ವೇಳೆ ಜನದಟ್ಟಣೆ ನಿಯಂತ್ರಿಸಲು ನೈಟ್ ಕರ್ಫ್ಯೂ ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿರುವ ಸಾಧ್ಯತೆಗಳಿವೆ. ದೇವಾಲಯ, ಚರ್ಚ್, ಮಸೀದಿ ಸೇರಿದಂತೆ ಧಾರ್ಮಿಕ ಕೇಂದ್ರಕ್ಕೂ ನಿರ್ಬಂಧ ಹಾಕಲು ಸರ್ಕಾರ ಪ್ಲ್ಯಾನ್ ಮಾಡಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಪಬ್, ಬಾರ್, ಕ್ಲಬ್, ರೆಸ್ಟೋರೆಂಟ್ ನಿರ್ಬಂಧ ವಿಧಿಸಲು, ಹೊಸ ವರ್ಷಾಚರಣೆ ಹಾಗೂ ಕ್ರಿಸ್ಮಸ್ ಆಚರಣೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲು ಅಧಿಕಾರಿಗಳು ಯೋಜಿಸಿರಬಹುದು ಎಂದು ಸಹ ಹೇಳಲಾಗುತ್ತಿದೆ.
ಇದನ್ನೂ ಓದಿ: GOOD NEWS:ಇಂದಿನಿಂದ ಬೆಳಗ್ಗೆ 5 ಗಂಟೆಗೆ Metro ಸೇವೆ ಆರಂಭ, ನಿಮ್ಮ ನಿಲ್ದಾಣಕ್ಕೆ ಟ್ರೈನ್ ಬರುವ ಸಮಯ ತಿಳಿದುಕೊಳ್ಳಿ.!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.