ಬೆಂಗಳೂರು: ಕರ್ನಾಟಕದಲ್ಲಿ ಭಾನುವಾರ ಐದು ಕೊರೊನಾ ವೈರಸ್ನ ಒಮಿಕ್ರಾನ್ ರೂಪಾಂತರದ ( Omicron variant) ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Health Minister Dr K Sudhakar) ಹೇಳಿದ್ದಾರೆ.
ಓರ್ವ ಪುರುಷ ಹಾಗೂ ನಾಲ್ವರು ಮಹಿಳೆಯರಲ್ಲಿ ಒಮಿಕ್ರಾನ್ ದೃಢಪಟ್ಟಿದೆ. ಧಾರವಾಡ, ಭದ್ರಾವತಿ, ಉಡುಪಿ ಮತ್ತು ಮಂಗಳೂರಿನಲ್ಲಿ ಪ್ರಕರಣಗಳು ವರದಿಯಾಗಿವೆ.
ಹೊಸ ಸೋಂಕುಗಳ ದೃಢೀಕರಣದೊಂದಿಗೆ, ಕರ್ನಾಟಕವು ಇದುವರೆಗೆ ಕೋವಿಡ್-19 ರ ಒಮಿಕ್ರಾನ್ ರೂಪಾಂತರದ (Karnataka Omicron cases) 13 ಪ್ರಕರಣಗಳನ್ನು ವರದಿ ಮಾಡಿದೆ.
Five cases of Omicron have been confirmed on Dec 19th:
🔹 Dharwad: 54 yr male
🔹 Bhadravathi: 20 yr female
🔹 Udupi: 82 yr male and 73 yr female
🔹 Mangaluru: 19 yr female#Omicronindia #Covid_19 @BSBommai— Dr Sudhakar K (@mla_sudhakar) December 20, 2021
COVID-19 ನ ಹೊಸ ರೂಪಾಂತರವು ನವೆಂಬರ್ 25 ರಂದು ದಕ್ಷಿಣ ಆಫ್ರಿಕಾದಿಂದ ವಿಶ್ವ ಆರೋಗ್ಯ ಸಂಸ್ಥೆಗೆ (WHO) ಮೊದಲ ಬಾರಿಗೆ ವರದಿಯಾಗಿದೆ. WHO ಪ್ರಕಾರ, ಈ ವರ್ಷದ ನವೆಂಬರ್ 9 ರಂದು ಸಂಗ್ರಹಿಸಲಾದ ಮಾದರಿಯಿಂದ B.1.1.529 ಸೋಂಕು ಮೊದಲ ಬಾರಿಗೆ ದೃಢಪಟ್ಟಿದೆ.
ನವೆಂಬರ್ 26 ರಂದು, ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಹೊಸ COVID-19 ರೂಪಾಂತರ B.1.1.529 ಅನ್ನು WHO 'ಒಮಿಕ್ರಾನ್' ಎಂದು ಹೆಸರಿಸಿದೆ. WHO ಒಮಿಕ್ರಾನ್ ಅನ್ನು 'ಕಳವಳಕಾರಿ ರೂಪಾಂತರ' (variant of concern) ಎಂದು ವರ್ಗೀಕರಿಸಿದೆ.
ಇದನ್ನೂ ಓದಿ: ‘ಅಧಿಕಾರ ಯಾವುದೂ ಶಾಶ್ವತವಲ್ಲ’: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ಬೊಮ್ಮಾಯಿ..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.