Mekedatu project: ಸಿ.ಟಿ.ರವಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ
ಮೇಕೆದಾಟು ಯೋಜನೆ ಬಗ್ಗೆ ಹೆಚ್ಚು ಮಾತು ಬೇಡ, ಪ್ರಧಾನಿ ಮೋದಿ ಅವರಿಗೆ ರಾಜೀನಾಮೆ ಕೊಡಲು ಹೇಳಿ ಬಿಡಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರ(BJP Government)ದ ವೈಫಲ್ಯವನ್ನು ಒಪ್ಪಿಕೊಂಡಿರುವುದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi)ಗೆ ಧನ್ಯವಾದವೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
‘ತಮಿಳುನಾಡನ್ನು ಒಪ್ಪಿಸುವ ತಾಕತ್ತು ಸಿದ್ದರಾಮಯ್ಯ(Siddaramaiah)ರಿಗಿದೆ. ಅವರು ಒಂದು ಗುಟುರು ಹಾಕಿದ್ರೆ ಸಾಕು ಮೇಕೆದಾಟು ಯೋಜನೆಗೆ ಒಪ್ಪಿಗೆ ಸಿಗುತ್ತದೆ’ ಎಂಬ ಸಿಟಿ ರವಿ ಹೇಳಿಕೆಗೆ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. ‘ಮೇಕೆದಾಟು ಯೋಜನೆ(Mekedatu Project) ಬಗ್ಗೆ ಹೆಚ್ಚು ಮಾತು ಬೇಡ, ಪ್ರಧಾನಿ ಮೋದಿ ಅವರಿಗೆ ರಾಜೀನಾಮೆ ಕೊಡಲು ಹೇಳಿ ಬಿಡಿ’ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಇದನ್ನೂ ಓದಿ: NEET ಪರೀಕ್ಷೆ ವಿದ್ಯಾರ್ಥಿಗಳು & ಪೋಷಕರ ಪಾಲಿಗೆ ಮರಣಶಾಸನವಾಗಿದೆ: ಎಚ್ಡಿಕೆ
‘ನಾನು ಗುಟುರು ಹಾಕಿಯೇ ಮೇಕೆದಾಟು ಯೋಜನೆ(Mekedatu Project) ಜಾರಿಗೊಳಿಸುತ್ತೇನೆ. ಕೈಲಾಗದ ನೀವು ಈ ರೀತಿ ಬಾಯಿ ಬಡಾಯಿಯ ಸೀಟಿ ಊದುತ್ತಾ ಇರಿ’ ಅಂತಾ ಸಿ.ಟಿ.ರವಿ ಮತ್ತು ಬಿಜೆಪಿ ನಾಯಕರನ್ನು ಸಿದ್ದರಾಮಯ್ಯ(Siddaramaiah) ಕುಟುಕಿದ್ದಾರೆ.
Mekedatu Project: ಹೆಸರಿಗಷ್ಟೇ ನೀರು, ಇಲ್ಲಿ ಬರೀ ರಾಜಕೀಯ ಪುಡಾರಿಗಳ ದರ್ಬಾರು!- ಬಿಜೆಪಿ
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ(Congress Mekedatu Padayatre)ಯನ್ನು ಟೀಕಿಸಿದ್ದ ಸಿಟಿ ರವಿ, ‘ಮೇಕೆದಾಟು ಯೋಜನೆಗೆ ಎಂ.ಕೆ.ಸ್ಟಾಲಿನ್ ಅಡ್ಡಿಯಾಗಿದ್ದಾರೆ. ಈ ಯೋಜನೆಗೆ ಸ್ಟಾಲಿನ್ ಅಡ್ಡಿ ಮಾಡುವುದಿಲ್ಲವೆಂದು ಕಾಂಗ್ರೆಸ್ ನವರು ಪತ್ರ ಬರೆಸಿಕೊಂಡು ಬರಲಿ. ನಮ್ಮ ಸಿಎಂ ಬಸವರಾಜ್ ಬೊಮ್ಮಾಯಿಯವರು ಸ್ಟಾಲಿನ್(MK Stalin)ರನ್ನೇ ಕರೆಸಿ ಯೋಜನೆಗೆ ಗುದ್ದಲಿ ಪೂಜೆ ಮಾಡಿಸ್ತಾರೆ. ಕಾಂಗ್ರೆಸ್ ನವರಿಗೆ ಲೆಟರ್ ಬರೆಸಿಕೊಂಡು ಬರುವ ತಾಕತ್ ಇದೆಯೇ’ ಅಂತಲೂ ಪ್ರಶ್ನಿಸಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.