Mekedatu Project: ಹೆಸರಿಗಷ್ಟೇ ನೀರು, ಇಲ್ಲಿ ಬರೀ ರಾಜಕೀಯ ಪುಡಾರಿಗಳ ದರ್ಬಾರು!- ಬಿಜೆಪಿ

#ಸುಳ್ಳಿನಜಾತ್ರೆಗೆ ಬಂದವರಿಗೆಲ್ಲ ಹಣದ ಆಮಿಷ, ಇದು ಬಂಡೆ ‍& ಮಂಡೆ ಒಡೆದ ಹಣವಲ್ಲದೆ ಮತ್ತೇನು? ವಿಶೇಷವಾಗಿ, ಮೇಕೆದಾಟು - ಎಣ್ಣೆ ಘಾಟು!!! ಅಂತಾ ಬಿಜೆಪಿ ಟೀಕಿಸಿದೆ.

Written by - Zee Kannada News Desk | Last Updated : Mar 2, 2022, 12:51 PM IST
  • ಮೇಕೆದಾಟು ಯಾತ್ರೆ #ಸುಳ್ಳಿನಜಾತ್ರೆಯಾಗಿ ಬದಲಾಗಿ ಈಗ ವೈಯುಕ್ತಿಕ ಪ್ರತಿಷ್ಠೆಯ ಕಣವಾಗುತ್ತಿದೆ
  • ಡಿಕೆಶಿ & ಸಿದ್ದರಾಮಯ್ಯ ಬಣಗಳು ಫ್ಲೆಕ್ಸ್, ಬ್ಯಾನರ್‌, ಕಟೌಟ್ ಮೂಲಕ ತಮ್ಮ ನಾಯಕರ ಗುಣಗಾನ ಮಾಡುತ್ತಿದ್ದಾವೆ
  • #ಸುಳ್ಳಿನಜಾತ್ರೆಗೆ ಬಂದವರಿಗೆಲ್ಲ ಹಣದ ಆಮಿಷ, ಇದು ಬಂಡೆ ‍& ಮಂಡೆ ಒಡೆದ ಹಣವಲ್ಲದೆ ಮತ್ತೇನು?
Mekedatu Project: ಹೆಸರಿಗಷ್ಟೇ ನೀರು, ಇಲ್ಲಿ ಬರೀ ರಾಜಕೀಯ ಪುಡಾರಿಗಳ ದರ್ಬಾರು!- ಬಿಜೆಪಿ  title=
ಜನ ವಿರೋಧಿ ಕಾಂಗ್ರೆಸ್ ಅಂತಾ ಬಿಜೆಪಿ ಟೀಕಿಸಿದೆ.

ಬೆಂಗಳೂರು: ಬೆಂಗಳೂರಿನ ಜನರು 3 ದಿನ ಟ್ರಾಫಿಕ್ ಸಮಸ್ಯೆ(Traffic Jams)ಸಹಿಸಿಕೊಂಡರೆ ಮುಂದಿನ 50 ವರ್ಷ ಕುಡಿಯುವ ನೀರಿನ ಸಮಸ್ಯೆಯಾಗಲ್ಲವೆಂದು ಹೇಳಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar)ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ.

#ಜನವಿರೋಧಿಕಾಂಗ್ರೆಸ್‌ ಹ್ಯಾಶ್ ಟ್ಯಾಗ್ ಬಳಿಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಡಿ.ಕೆ.ಶಿವಕುಮಾರ್(DK Shivakumar) ಅವರೇ 6 ದಶಕಗಳ ಕಾಲ ಕಾಂಗ್ರೆಸ್‌ ಪಕ್ಷವನ್ನು ಸಹಿಸಿಕೊಂಡಿದ್ದಕ್ಕೆ ದೇಶ ಇನ್ನೂ ತೊಂದರೆ ಅನುಭವಿಸುತ್ತಿದೆ. ನಿಮ್ಮ ರಾಜಕೀಯ ಲಾಭಕ್ಕೆ ಬೆಂಗಳೂರಿನ ಜನತೆಯನ್ನು ಕಷ್ಟಕ್ಕೆ ದೂಡಿ, ಮೂರು ದಿನ ತಡೆದುಕೊಳ್ಳಿ ಎಂದು ಬಿಟ್ಟಿ ಸಲಹೆ ನೀಡುತ್ತಿದ್ದೀರಿ. ಜನತೆ ನಿಮ್ಮನ್ನು ಕ್ಷಮಿಸುವರೇ?’ ಅಂತಾ ಪ್ರಶ್ನಿಸಿದೆ.

ಇದನ್ನೂ ಓದಿ: ನವೀನ್ ಸಾವಿಗೆ ರಷ್ಯಾ ಸೇನೆ ಎಷ್ಟು ಹೊಣೆಯೋ, ಬಿಜೆಪಿ ಸರ್ಕಾರವೂ ಅಷ್ಟೇ ಹೊಣೆ: ಸಿದ್ದರಾಮಯ್ಯ

‘ಮೇಕೆದಾಟು ಯಾತ್ರೆ(Mekedatu Padayatre) #ಸುಳ್ಳಿನಜಾತ್ರೆಯಾಗಿ ಬದಲಾಗಿ ಈಗ ವೈಯುಕ್ತಿಕ ಪ್ರತಿಷ್ಠೆಯ ಕಣವಾಗುತ್ತಿದೆ. ಡಿಕೆಶಿ & ಸಿದ್ದರಾಮಯ್ಯ ಬಣಗಳು ಜಾಗ ಇದ್ದಲ್ಲೆಲ್ಲ ಫ್ಲೆಕ್ಸ್, ಬ್ಯಾನರ್‌, ಕಟೌಟು ಮೂಲಕ ತಮ್ಮ ತಮ್ಮ ನಾಯಕರ ಗುಣಗಾನ ಮಾಡುತ್ತಿವೆ. ಹೆಸರಿಗಷ್ಟೇ ನೀರು, ಇಲ್ಲಿ ಬರೀ ರಾಜಕೀಯ ಪುಡಾರಿಗಳ ದರ್ಬಾರು!’ ಅಂತಾ ಬಿಜೆಪಿ(BJP) ಕಿಡಿಕಾರಿದೆ.

‘ಅಡಿಗಡಿಗೊಂದು ತಂಪಾದ ಜ್ಯೂಸ್, ಐಸ್ ಕ್ರೀಮ್, ಎಳನೀರು, ಹಣ್ಣುಗಳು, ಬಾದಾಮಿ ಹಾಲು, ಮಜ್ಜಿಗೆ ಇದು ಜಾತ್ರೆಯಲ್ಲ, ಇದು ಮೇಕೆದಾಟು ಪಾದಯಾತ್ರೆ!(Mekedatu Project) #ಸುಳ್ಳಿನಜಾತ್ರೆಗೆ ಬಂದವರಿಗೆಲ್ಲ ಹಣದ ಆಮಿಷ, ಇದು ಬಂಡೆ ‍& ಮಂಡೆ ಒಡೆದ ಹಣವಲ್ಲದೆ ಮತ್ತೇನು? ವಿಶೇಷವಾಗಿ, ಮೇಕೆದಾಟು - ಎಣ್ಣೆ ಘಾಟು!!!’ ಅಂತಾ ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ಬೆಟ್ಟದಷ್ಟು ನೋವು ಹೊತ್ತಿರುವ ನವೀನ್ ಕುಟುಂಬ, ಸರ್ಕಾರಕ್ಕೆ ಮಾಡಿರುವ ಒಂದು ಮನವಿ ಇದು

‘3 ದಿನಗಳ ಕಾಲ ಬೆಂಗಳೂರು ನಗರವಾಸಿಗಳು ಟ್ರಾಫಿಕ್‌ ಜಾಮ್‌(Benagluru Traffic Jams) ಸಹಿಸಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷರು #ಕಾಂಗ್ರೆಸ್‌ಟ್ರಾಫಿಕ್‌ಬಾಂಬ್‌ ಎಸೆದಿದ್ದಾರೆ.1 ನಿಮಿಷ ಸಂಚಾರ ಅಸ್ತವ್ಯಸ್ತಗೊಂಡರೆ ಗಂಟೆಗಟ್ಟಲೆ ಬವಣೆಪಡಬೇಕಾದ ಈ ಸಮಯದಲ್ಲಿ 3 ದಿನ ತಡೆದುಕೊಳ್ಳುವುದು ಸುಲಭದ ಮಾತೇ? ಟ್ರಾಫಿಕ್‌ ಅನಾಹುತದ ಅರಿವಿದೆಯೇ?’ ಅಂತಾ ಪ್ರಶ್ನಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News