ಚಾಮರಾಜನಗರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯು ಕುಟುಂಬಕ್ಕೆ ನೆರವಾದ ಘಟನೆ ಗುಂಡ್ಲುಪೇಟೆ ತಾಲೂಕಿನ ಕಾಳನಹುಂಡಿ ಗ್ರಾಮದಲ್ಲಿ ನಡೆದಿದೆ‌.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣ ಪ್ರಕರಣ: ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ


ಗುಂಡ್ಲುಪೇಟೆ ತಾಲೂಕಿನ ಕಾಳನಹುಂಡಿ ಗ್ರಾಮದ ಮಣಿಕಂಠ(23) ಎಂಬ ಯುವಕ ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಬೇಗೂರು ಶಾಖೆಯಲ್ಲಿ 20 ರೂ. ಹಣ ಪಾವತಿಸಿ ಪಿಎಂ ಸುರಕ್ಷಾ ಯೋಜನೆ ವಿಮೆ ಪಡೆದಿದ್ದರು. ಅದಾದ ಎರಡೇ ತಿಂಗಳಲ್ಲಿ ನಂಜನಗೂಡು ತಾಲೂಕಿನ ಎಲಚಗೆರೆ ಗೇಟ್ ನಲ್ಲಿ ಬೈಕ್- ಕಾರು ಅಫಘಾತದಲ್ಲಿ ಮಣಿಕಂಠ ತೀವ್ರವಾಗಿ ಗಾಯಗೊಂಡು ಬಳಿಕ ಅಸುನೀಗಿದ್ದರು.


ಇದನ್ನೂ ಓದಿ: ಲೋಕ ಸಮರ ಫಲಿತಾಂಶ ಎಫೆಕ್ಟ್: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಲಿತ-ಲಿಂಗಾಯತ ನಾಯಕರ ಒತ್ತಡ?!


ಮೃತಪಟ್ಟ ವಿಚಾರ ತಿಳಿದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಎಲ್ಲಾ ದಾಖಲೆ ಪ್ರಕ್ರಿಯೆ ಮುಗಿಸಿ ವಿಮೆಯ ನಾಮಿನಿಯಾಗಿದ್ದ ಮಣಿಕಂಠ ತಾಯಿ ಮಹಾದೇವಮ್ಮ ಅವರಿಗೆ 2 ಲಕ್ಷ ರೂ. ಪರಿಹಾರದ ಮೊತ್ತವನ್ನು ಶುಕ್ರವಾರ ವಿತರಿಸಿದ್ದಾರೆ.ಅಂದಹಾಗೆ, ಕೇವಲ 20 ರೂ. ಪಾವತಿಸಿ ವಿಮೆ ಪಡೆದಿದ್ದು ಈಗ ಕುಟುಂಬಕ್ಕೆ ನೆರವಾದಂತಾಗಿದೆ. ಕುಟುಂಬಕ್ಕೆ ಪಿಎಂ ಸುರಕ್ಷಾ ಭೀಮಾ ಯೋಜನೆ ನೆರವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.