ಲೋಕ ಸಮರ ಫಲಿತಾಂಶ ಎಫೆಕ್ಟ್: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಲಿತ-ಲಿಂಗಾಯತ ನಾಯಕರ ಒತ್ತಡ?!

Lok Sabha Result Effect: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ 135 ಸ್ಥಾನ ಗಳಿಸುವ ಮೂಲಕ, ಒಕ್ಕಲಿಗ, ಲಿಂಗಾಯತ ಸಮುದಾಯಗಳ ಅಧಿಪತಿ ಎಂಬ ಭ್ರಮೆಯಲ್ಲಿದ್ದ ಜೆಡಿಎಸ್ ಹಾಗೂ ಬಿಜೆಪಿಗೆ ಟಕ್ಕರ್ ನೀಡುವಲ್ಲಿ ಯಶಸ್ವಿ ಆಗಿದ್ದ ಕರ್ನಾಟಕ ಕಾಂಗ್ರೆಸ್,

Written by - Prashobh Devanahalli | Last Updated : Jun 6, 2024, 03:31 PM IST
    • ಲೋಕಸಭೆ ಚುನಾವಣೆಯ ಫಲಿತಾಂಶ ಪಕ್ಷದಲ್ಲಿ ಬದಲಾವಣೆ ಬಯಸುತ್ತಿದೆ
    • ಲೋಕಸಭೆ ಚುನಾವಣೆ ಹೊಸ ಆಯಾಮ ಕರ್ನಾಟಕ ರಾಜಕೀಯಕ್ಕೆ ನೀಡಿದೆ
    • ಜಾರಕಿಹೊಳಿ ಹೇಳಿಕೆಯಿಂದ ಕಾಂಗ್ರೆಸ್’ನಲ್ಲಿ ಬದಲಾವಣೆ ಕೂಗು?
ಲೋಕ ಸಮರ ಫಲಿತಾಂಶ ಎಫೆಕ್ಟ್: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಲಿತ-ಲಿಂಗಾಯತ ನಾಯಕರ ಒತ್ತಡ?!  title=
Congress

ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶ ಪ್ರತಿ ರಾಜಕೀಯ ಪಕ್ಷಕ್ಕೂ ಒಂದಲ್ಲಾ ಒಂದು ಪಾಠ ಕಳಿಸಿದರೆ ಮತ್ತೊಂದು ಆಯಾಮದಲ್ಲಿ ಚುನಾವಣೆಯ ಫಲಿತಾಂಶ ಪಕ್ಷದಲ್ಲಿ ಬದಲಾವಣೆ ಬಯಸುತ್ತಿದೆ.

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ 135 ಸ್ಥಾನ ಗಳಿಸುವ ಮೂಲಕ, ಒಕ್ಕಲಿಗ, ಲಿಂಗಾಯತ ಸಮುದಾಯಗಳ ಅಧಿಪತಿ ಎಂಬ ಭ್ರಮೆಯಲ್ಲಿದ್ದ ಜೆಡಿಎಸ್ ಹಾಗೂ ಬಿಜೆಪಿಗೆ ಟಕ್ಕರ್ ನೀಡುವಲ್ಲಿ ಯಶಸ್ವಿ ಆಗಿದ್ದ ಕರ್ನಾಟಕ ಕಾಂಗ್ರೆಸ್, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅಲ್ಪ ಏರಿಕೆ ಕಂಡರೂ ಸೋಲು ಕಾಣುವ ಸ್ಥಿತಿಗೆ ಬಂದು ತಲುಪಿದೆ.

ಇದನ್ನೂ ಓದಿ: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಎಷ್ಟು ಕೋಟಿ ಆಸ್ತಿ ಒಡೆಯ ಗೊತ್ತಾ? ಇವರು ಒಂದು ಸಿನಿಮಾಗೆ ಪಡೆಯುವ ಸಂಭಾವನೆ…

ಇದೀಗ ಲೋಕಸಭೆ ಚುನಾವಣೆ ಹೊಸ ಆಯಾಮ ಕರ್ನಾಟಕ ರಾಜಕೀಯಕ್ಕೆ ನೀಡಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ 6 ಸ್ಥಾನ ಗೆಲ್ಲುವ ಮೂಲಕ ದಲಿತ ಹಾಗೂ ಲಿಂಗಾಯತರ ಮತ ಸೆಳೆಯುವ ಯಶಸ್ವಿ ತಂತ್ರ ರೂಪಿಸಿದೆ.

ಜಾರಕಿಹೊಳಿ ಹೇಳಿಕೆಯಿಂದ ಕಾಂಗ್ರೆಸ್’ನಲ್ಲಿ ಬದಲಾವಣೆ ಕೂಗು?

ಬೆಳಗಾವಿಯಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, “ಮಾಡಲು ಹೆಚ್ಚೇನೂ ಇಲ್ಲ. ಕ್ಯಾಪ್ಟನ್  ಸರಿಯಾದ ನಿರ್ದೇಶನ ನೀಡಿದರೆ, ನಾವು ಗೆಲ್ಲುತ್ತೇವೆ. ಆದರೆ ಅವರೇ ಟೋಪಿ ಹಾಕಿಕೊಂಡು ಅಲ್ಲಿ ಇಲ್ಲಿ ಕುಳಿತರೆ ನಾವು ಸಂಖ್ಯಾಬಲ ದಾಟುವುದಿಲ್ಲ, ಇದು ಚುನಾವಣೆ. ಒಬ್ಬ ವ್ಯಕ್ತಿ ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರೆ, ಕ್ಲೀನ್ ರೈಟ್ ಅಪ್ ಇರಬೇಕು. ನಿರ್ಲಕ್ಷ್ಯದಿಂದ ನಷ್ಟವಾಗುತ್ತದೆ'' ಎಂದು ಹೇಳಿದ್ದರು. ಇವರ ಹೇಳಿಕೆ ಪ್ರಕಾರ ಕ್ಯಾಪ್ಟನ್ ಎಂದು ಸಂಭೋದನೆ ಮಾಡಿದ್ದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನಾ? ಅಲ್ಲಿ ಇಲ್ಲಿ ಕುಳಿತರೆ ಎಂದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಡಿಸಿಎಂ ಸ್ಥಾನವೇ? ಎಂಬ ಚರ್ಚೆ ಶುರುವಾಗಿದೆ.

ಇದನ್ನೂ ಓದಿ: ಮುಖ್ಯಮಂತ್ರಿ ರಾಜೀನಾಮೆ ಪಡೆಯಲು ಆಗ್ರಹಿಸಿ ರಾಜ್ಯಪಾಲರಿಗೆ ಮನವಿ: ಬಿವೈ ವಿಜಯೇಂದ್ರ

ಮೂಲಗಳ ಪ್ರಕಾರ ಈಗಾಗಲೇ ಪಕ್ಷದ ಹಿರಿಯ ನಾಯಕರ ನಡುವೆ ಆಂತರಿಕವಾಗಿ ಅಧ್ಯಕ್ಷರ ಬದಲಾವಣೆ ಚರ್ಚೆ ಪ್ರಾರಂಭ ಆಗಿದೆ. ಈ ಪೈಕಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿದಂತೆ ಲಿಂಗಾಯತ ಅಥವಾ ದಲಿತರಿಗೆ ಸ್ಥಾನ ನೀಡುವ ಪ್ರಸ್ತಾಪ ಮಾಡುವ ಸಾಧ್ಯತೆ ಹೆಚ್ವಿದೆ. ಈ ಸವಾಲು ಡಿಕೆ ಹೇಗೆ ಎದುರಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News